ಶಿರಸಿ: ಅಡಕೆ ಬೆಳೆಗಾರರ ಜೀನವಾಡಿ ಸಂಸ್ಥೆಯಾದ ಟಿಎಸ್‌ಎಸ್ ಲೆಕ್ಕದ ಬಗ್ಗೆ ಸರ್ಕಾರದಿಂದಲೇ ಸಹಕಾರಿ ಕಾಯ್ದೆ ಪ್ರಕಾರ 64ರಲ್ಲಿ ತನಿಖೆಯಾಗಿ ಸದಸ್ಯರಿಗೆ ಸ್ಪಷ್ಟತೆ ಸಿಗಲಿ ಎಂದು ಸಂಸ್ಥೆಯ ನಿಕಟಪೂರ್ವ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಒತ್ತಾಯಿಸಿದ್ದಾರೆ.
ಕೆಡಿಸಿಸಿ ಬ್ಯಾಂಕ್‌ನಿಂದ ಟಿಎಸ್‌ಎಸ್‌ಗೆ ಸಾಲ ನೀಡಿಲ್ಲ ಎಂಬುದಕ್ಕೆ ಅಡಾವೆಯಲ್ಲಿ ಆರ್ಥಿಕ ಸುಸ್ಥಿತಿಯನ್ನು ಪ್ರದರ್ಶಿಸದಿರುವುದೇ ಪ್ರಮುಖ ಕಾರಣ. ಇದಕ್ಕೆ ಈಗಿನ ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರನ್ನು ಹೊಣೆಗಾರರನ್ನಾಗಿ ದೂಷಿಸುವುದು ಸರಿಯಲ್ಲ ಎಂದು ಕೆಡಿಸಿಸಿ ಹಾಲಿ ನಿರ್ದೇಶಕನಾಗಿಯೂ ಹೇಳುತ್ತೇನೆ. 2023-24ರಲ್ಲಿ ಮೂರು ಬೇರೆ ಬೇರೆ ದಿನಾಂಕಕ್ಕೆ ಮೂರು ಬೇರೆ ಬೇರೆ ಅಂಕಿ-ಅಂಶಗಳನ್ನು ಒಳಗೊಂಡ ಅಡಾವೆ ಪತ್ರಿಕೆಯನ್ನು ನೀಡಿದ್ದು, ಸದಸ್ಯರಿಗೆ, ಸಹಕಾರ ಇಲಾಖೆಗೆ ಮಾಡಿರುವ ಅಪರಾಧದ ಪರಾಕಾಷ್ಠೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ನಿರ್ದೇಶಕರಾದ ಗಣಪತಿ ರಾಯ್ಸದ, ಶಾರದಾ ಹೆಗಡೆ, ಸೀತಾರಾಮ ಹೆಗಡೆ ನೀರ್ನಳ್ಳಿ, ಚಂದ್ರಶೇಖರ ಹೆಗಡೆ ಹೂಡ್ಲಮನೆ, ನಾರಾಯಣ ನಾಯ್ಕ, ನರಸಿಂಹ ಹೆಗಡೆ ಗುಂಡ್ಕಲ್ ಮತ್ತಿತರರು ಇದ್ದರು.ನಮ್ಮ ಆಡಳಿತ ಮಂಡಳಿ ಅವಧಿಯಲ್ಲಿ ಟಿಎಸ್‌ಎಸ್‌ನಿಂದ ನೀಡಲ್ಪಟ್ಟ ₹123 ಕೋಟಿ ಸಾಲ ಸರ್ವ ಸಮ್ಮತಿಯಿಂದ ನಿರ್ಧಾರವಾಗಿ ಕಾಯ್ದೆ ಬದ್ಧವಾಗಿ ಮಂಜೂರಾಗಿದೆ. ಅವರ ಆಸ್ತಿಗಳನ್ನು ಜಾಮೀನಾಗಿ ಪಡೆದಿದ್ದೇವೆ. ಸಾಲ ನೀಡುವುದು ಅವ್ಯವಹಾರ ಎಂದು ಹಾಲಿ ಆಡಳಿತ ಮಂಡಳಿಯು ಬಿಂಬಿಸಲು ಹೊರಟಿದೆ ಎನ್ನುತ್ತಾರೆ ನಿಟಕಪೂರ್ವ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ.