ಉಡುಪಿ: ತುಳುಕೂಟ ಒಡಿಪು ಇದರ ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಲಾಗಿದ್ದು ಜಯಕರ ಶೆಟ್ಟಿಇಂದ್ರಾಳಿ ಅಧ್ಯಕ್ಷರಾಗಿ ಮತ್ತು ಗಂಗಾಧರ್ ಕಿದಿಯೂರು ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾಗಿದ್ದಾರೆ.ಪತ್ರಕರ್ತ ಜನಾರ್ದನ್ ಕೊಡವೂರು ಚುನಾವಣಾ ಅಧಿಕಾರಿಯ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಸ್ಥೆಯ ಗೌರವಾಧ್ಯಕ್ಷರಾಗಿ ಭಾಸ್ಕರಾನಂದ ಕುಮಾರ್, ಉಪಾಧ್ಯಕ್ಷರಾಗಿ ಭುವನಪ್ರಸಾದ್ ಹೆಗ್ಡೆ, ದಿವಾಕರ ಸನಿಲ್, ಶೋಭಾ ಶೆಟ್ಟಿ, ವಿ.ಕೆ. ಯಾದವ್, ಜೊತೆ ಕಾರ್ಯದರ್ಶಿಯಾಗಿ ಜ್ಯೋತಿ ದೇವಾಡಿಗ, ಸಂತೋಷ್ ಕುಮಾರ್, ಮೋಹನ್ ಶೆಟ್ಟಿ ಮೂಡನಿಡಂಬೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ., ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ ತೋನ್ಸೆ, ಉದಯ ಕುಮಾರ್ ತೆಂಕನಿಡಿಯೂರ್, ಶಿಲ್ಪಾ ಜೋಷಿ ಆಯ್ಕೆ ಆದರು.ಅಲ್ಲದೆ ಸಂಸ್ಥೆಯ ವಿವಿಧ ಕಾರ್ಯಕ್ರಮಗಳಿಗೆ ಸಂಚಾಲಕರನ್ನೂ ಆರಿಸಲಾಯಿತು. ಪ್ರಭಾಕರ ಭಂಡಾರಿ (ಕೆಮ್ತೂರು ತುಳು ನಾಟಕ ಪರ್ಬ), ದಯಾನಂದ ಕೆ. ಕಪ್ಪೆಟ್ಟು (ತುಳುಮಿನದನ), ಜಯರಾಮ ಶೆಟ್ಟಿಗಾರ್ ಮಣಿಪಾಲ (ನಿಟ್ಟೂರು ತುಳು ಭಾವಗೀತೆ ಸ್ಪರ್ಧೆ), ಪ್ರಕಾಶ್ ಸುವರ್ಣ ಕಟಪಾಡಿ (ಪಣಿಯಾಡಿ ಕಾದಂಬರಿ ಪ್ರಶಸ್ತಿ ಸ್ಪರ್ಧೆ), ಸುಕನ್ಯಾ ಶೇಖರ್ (ಮದರಂಗಿದ ರಂಗ್), ವಂದನಾ ವಿಶ್ವನಾಥ್ (ಆಟಿದ ಲೇಸ್), ವಿವೇಕಾನಂದ ಎನ್. (ಆಟಿದ ಕಷಾಯ), ಶೇಖರ ಕಲ್ಮಾಡಿ (ಸೋನದ ಸೇಸೆ), ರತ್ನಾಕರ ಇಂದ್ರಾಳಿ (ತುಳುವೆರೆ ಗೊಬ್ಬುಲು), ವಿದ್ಯಾ ಸರಸ್ವತಿ (ಜೋಕ್ಲೆಗಾದ್ ತುಳು ಕಥೆ), ವಿಶ್ವನಾಥ ಬಾಯರಿ (ತುಳು ಪಠ್ಯ), ದಿನೇಶ್ ಶೆಟ್ಟಿಗಾರ್ (ಜೋಕ್ಷೆಗಾದ್ ತುಳುವ ನಡಕೆ), ಯಶೋಧಾ ಕೇಶವ್ (ಪ್ರಚಾರ ಮಾಧ್ಯಮ) ಆಯ್ಕೆ ಆಗಿದ್ದಾರೆ.ಕಾರ್ಯಕಾರಿ ಸಮಿತಿ ಗೆ ಸದಸ್ಯರಾಗಿ ಯು. ಜಿ. ದೇವಾಡಿಗ, ರಶ್ಮಿ ಶೆಣೈ, ತಾರಾ ಉಮೇಶ್ ಆಚಾರ್ಯ, ಭಾರತಿ ಟಿ.ಕೆ., ಗಣೇಶ್ ಕೋಟ್ಯಾನ್, ತಾರಾ ಸತೀಶ್, ಪೂರ್ಣಿಮಾ, ಪ್ರಭಾವತಿ ವಿಶ್ವನಾಥ್, ರೂಪಶ್ರೀ, ಲಕ್ಷ್ಮೀಕಾಂತ್ ಬೆಸ್ಕೂರ್, ವೀಣಾ ಶೆಟ್ಟಿ, ಉಷಾ ಸುವರ್ಣ, ರೇವತಿ ಆರ್.ಶೆಟ್ಟಿ, ಸರೋಜ ಯಶವಂತ್, ಸುಮಾಲಿನಿ ದಯಾನಂದ್, ಸುಜಾತಾ ಮೊಯಿಲಿ, ಹಾಗೂ ಗೌರವ ಸಲಹೆಗಾರರಾಗಿ ವಿಶ್ವನಾಥ ಶೆಣೈ, ಬನ್ನಂಜೆ ಬಾಬು ಅಮೀನ್, ಮುರಳೀಧರ್ ಉಪಾಧ್ಯಾಯ ಹಿರಿಯಡ್ಕ, ಡಾ.ಗಣನಾಥ ಎಕ್ಕಾರು, ರವಿ ಶಂಕರ ರೈ, ಎಸ್. ವಿ. ಭಟ್, ಎಸ್.ಎ.ಕೃಷ್ಣಯ್ಯ, ಮನೋರಮ ಶೆಟ್ಟಿ, ಶಾಂತರಾಮ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಆಯ್ಕೆ ಆಗಿದ್ದಾರೆ.