ಜೋಯಿಡಾ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ಅರಣ್ಯದಲ್ಲಿ ಗುರುವಾರ ಜಿಂಕೆ ಬೇಟೆಯಾಡಿ ಮಾಂಸ ಬೇಯಿಸುವ ಸಮಯಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.
ನಂದಿಗದ್ಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣ ದಬಗಾರ ಮಹಾದೇವ ದಬಗಾರ ಅನಂತ ಯೆಲ್ಲೇಕರ್ ದೀಪಕ ನಾಯ್ಕ ಎಂಬವರು ಜಿಂಕೆ ಮಾಂಸ ಬೇಯಿಸುವ ಸಮಯಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.ನಾರಾಯಣ ದಬಗಾರ ಮತ್ತು ದೀಪಕ ನಾಯ್ಕ ಪರಾರಿಯಾಗಿದ್ದಾರೆ. ಮಹಾದೇವ ದಬಗಾರ ಮತ್ತು ಅನಂತ ಎಲ್ಲೇಕಾರ ಎಂಬವರನ್ನು ಬಂಧಿಸಲಾಗಿದೆ. ಜಿಂಕೆ ಮಾಂಸ ಇನ್ನಿತರ ಸಾಮಗ್ರಿಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ ಶಿಂದೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಕಳ್ಳಿಮಠ ಅವರ ಮಾರ್ಗದರ್ಶನದಲ್ಲಿ ಗುಂದ ವಲಯ ಅರಣ್ಯಾಧಿಕಾರಿ ನೀಲಕಂಠ ದೇಸಾಯಿ, ಪನಸೋಲಿ ಅರಣ್ಯ ಅರಣ್ಯಾಧಿಕಾರಿ ರವಿಕಿರಣ ಸಂಪಗಾವಿ, ಕುಳಗಿ ಅರಣ್ಯಾಧಿಕಾರಿ ಮಹಾಂತೇಶ ಪಾಟೀಲ್, ಡಿಆರ್‌ಎಫ್‌ಒ ಶರತ್ ಐಹೊಳಿ, ಕೃಷ್ಣ ಎಡಗೆ ಬಸವರಾಜ್ ಹಾವೇರಿ, ಮಂಜುನಾಥ್ ಜಾಧವ್ ಇತರ ಸಿಬ್ಬಂದಿ ಭಾಗವಹಿಸಿದ್ದರು.ಅರಬೈಲ್ ಘಟ್ಟದಲ್ಲಿ ಲಾರಿ ಪಲ್ಟಿ: ಸಂಚಾರ ಅಸ್ತವ್ಯಸ್ತ
ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಪೇಪರ್ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಗುರುವಾರ ಸಂಚಾರ ಸುಮಾರು ೩ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಲಾರಿಯನ್ನು ಎರಡು ಜೆಸಿಬಿಗಳ ಮೂಲಕ ತೆರವುಗೊಳಿಸಲಾಗಿದೆ.ರಸ್ತೆಯ ಮಧ್ಯದಲ್ಲಿ ಉರುಳಿ ಬಿದ್ದ ಲಾರಿ ಪಕ್ಕದಿಂದ ದಾಟಲು ಪ್ರಯತ್ನಿಸುತ್ತಿದ್ದ ಬಸ್ಸೊಂದು ಸಿಕ್ಕಿಕೊಂಡಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ವಾಹನಗಳಿಂದಾಗಿ ಜೆಸಿಬಿ ಅಥವಾ ಟ್ರೋಲಿಗಳು ಘಟನಾ ಸ್ಥಳಕ್ಕೆ ತಲುಪಲು ತೀವ್ರ ತೊಂದರೆಯಾಗಿತ್ತು. ಹೆದ್ದಾರಿ ನಿರ್ವಹಣಾ ಪ್ರಮುಖರು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ತಲುಪಿಸಲು ಯಶಸ್ವಿಯಾಗಿದ್ದರೂ ಸಾಕಷ್ಟು ಪರದಾಡಬೇಕಾಯಿತು. ನಂತರ ಬಿದ್ದರುವ ಲಾರಿಯನ್ನು ಜೆಸಿಬಿಗಳ ಸಹಾಯದಿಂದ ತೆರವುಗೊಳಿಸಿ, ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಪೊಲೀಸರು ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.