ಮಂಗಳೂರು : ಒಎನ್‌ಜಿಸಿಯ ಅಂಗಸಂಸ್ಥೆ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಂಸ್ಕರಣಾಗಾರದಲ್ಲಿನ ನಾವೀನ್ಯತೆಗಾಗಿ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಹೈ ಟೆಕ್ನಾಲಜಿ ವತಿಯಿಂದ ನೀಡಲಾಗುವ 2025-26ನೇ ಸಾಲಿನ ನಾವೀನ್ಯತೆ ಪ್ರಶಸ್ತಿಗಳಲ್ಲಿ ಎಂಆರ್‌ಪಿಎಲ್ ಅತ್ಯುತ್ತಮ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಂಸ್ಕರಣಾಗಾರದಲ್ಲಿನ ಅತ್ಯುತ್ತಮ ನಾವೀನ್ಯತೆ ವಿಭಾಗಗಳಲ್ಲಿ ವಿಜೇತ ಸಂಸ್ಥೆಯಾಗಿ ಹೊರಹೊಮ್ಮಿದೆ.ಗೋವಾದ ಎಟಿಐ-ಒಎನ್‌ಜಿಸಿಯಲ್ಲಿ ನಡೆದ 29ನೇ ಇಂಧನ ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಅತ್ಯುತ್ತಮ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ, ಸಂಸ್ಕರಣಾಗಾರದಲ್ಲಿನ ಅತ್ಯುತ್ತಮ ನಾವೀನ್ಯತೆಗೆ ಈ ಪ್ರಶಸ್ತಿಗಳು ಲಭಿಸಿವೆ. ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಗೆ ವೈಜ್ಞಾನಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಜಿ.ಡಿ.ಯಾದವ್ ನೇತೃತ್ವದ ಸಮಿತಿ ಚಾಲನೆ ನೀಡಿತ್ತು. ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ನೇತೃತ್ವದ ನಿಯೋಗ ಪ್ರಶಸ್ತಿಗಳನ್ನು ಸ್ವೀಕರಿಸಿತು. ನಿಯೋಗದಲ್ಲಿ ನಿರ್ದೇಶಕ(ರಿಫೈನರಿ) ನಂದಕುಮಾರ್ ವೇಲಾಯುಧನ್ ಪಿಳ್ಳೈ, ಕಾರ್ಯನಿರ್ವಾಹಕ ನಿರ್ದೇಶಕ(ರಿಫೈನರಿ) ಎನ್.ಆನಂದ ಕುಮಾರ್, ಜಿಜಿಎಂ(ಮೆಂಟೆನನ್ಸ್) ಎಚ್.ಸಿ.ಸತ್ಯನಾರಾಯಣ, ಜಿಜಿಎಂ(ಟಿಎಸ್) ಸುಧೀರ್ ಪೈ ಎಂ., ಇನ್ನೋವೇಶನ್ ಸೆಂಟರ್ ಮುಖ್ಯ ವ್ಯವಸ್ಥಾಪಕ ಕಾರ್ತಿಕ್ ಆರ್. ಹಾಗೂ ಮುಖ್ಯ ವ್ಯವಸ್ಥಾಪಕ ಎಸ್.ನಿರ್ಮಲ್ ಗಣೇಶ್ ಇದ್ದರು.ಸತತ ಐದನೇ ವರ್ಷ ರಾಷ್ಟ್ರೀಯ ಮನ್ನಣೆ: