ಧಾರವಾಡ ಟ್ರಾಫಿಕ್‌ ನಿಯಮದಲ್ಲಿ ಅವೈಜ್ಞಾನಿಕ ಬೆಳವಣಿಗೆ

KannadaprabhaNewsNetwork |  
Published : Nov 10, 2026, 01:00 AM IST
ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಉಂಟಾಗಿರುವ ಟ್ರಾಫಿಕ್‌ ಜಾಮ್. | Kannada Prabha

ಸಾರಾಂಶ

ಮೊದಲೇ ನಗರದಲ್ಲಿ ಚಿಕ್ಕದಾದ ವೃತ್ತ, ರಸ್ತೆಗಳಿದ್ದು ಟ್ರಾಫಿಕ್‌ ಸಮಸ್ಯೆಯಾಗುತ್ತಿದೆ. ಜತೆಗೆ ಅವೈಜ್ಞಾನಿಕ ಟ್ರಾಫಿಕ್‌ ನಿಯಮಗಳಿಂದ ಇತ್ತೀಚೆಗೆ ವಿಪರೀತ ಟ್ರಾಫಿಕ್‌ ಸಮಸ್ಯೆ ಎದುರಾಗಿದೆ.

ಟ್ರಾಫಿಕ್‌ ಸಮಸ್ಯೆಯಿಂದ ಬಳಲುತ್ತಿರುವ ಧಾರವಾಡ ಜನರು

ಕೋರ್ಟ್ ವೃತ್ತಕ್ಕೆ ಹೋಗುವ ದಾರಿಯೇ ಬಂದ್‌, ಅನಗತ್ಯ ಒನ್‌ವೇಯಿಂದ ತೊಂದರೆ

ಕನ್ನಡಪ್ರಭ ವಾರ್ತೆ ಧಾರವಾಡ

ಮೊದಲೇ ನಗರದಲ್ಲಿ ಚಿಕ್ಕದಾದ ವೃತ್ತ, ರಸ್ತೆಗಳಿದ್ದು ಟ್ರಾಫಿಕ್‌ ಸಮಸ್ಯೆಯಾಗುತ್ತಿದೆ. ಜತೆಗೆ ಅವೈಜ್ಞಾನಿಕ ಟ್ರಾಫಿಕ್‌ ನಿಯಮಗಳಿಂದ ಇತ್ತೀಚೆಗೆ ವಿಪರೀತ ಟ್ರಾಫಿಕ್‌ ಸಮಸ್ಯೆ ಎದುರಾಗಿದೆ.

ಜೆಎಸ್‌ಎಸ್‌ ಕಾಲೇಜು ಬಳಿ ಕಾಲೇಜು ವಿದ್ಯಾರ್ಥಿನಿಗೆ ಬಿಆರ್‌ಟಿಎಸ್ ಡಿಕ್ಕಿ ಹೊಡೆದ ಪ್ರಕರಣವನ್ನು ಪೊಲೀಸ್‌ ಆಯುಕ್ತರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಆದರೆ, ಅವೈಜ್ಞಾನಿಕವಾಗಿ ಕೆಲವು ಟ್ರಾಫಿಕ್‌ ನಿಯಮಗಳನ್ನು ಬದಲಿಸಿದ್ದು ಧಾರವಾಡ ಜನತೆ ತೀವ್ರ ಟ್ರಾಫಿಕ್‌ ಸಮಸ್ಯೆ ಎದುರಿಸುವಂತಾಗಿದೆ. ಎಲ್‌ಐಸಿ ಮೂಲಕ ಮಂದಾರ ಹೋಟೆಲ್‌ ಮೂಲಕ ಬಿಆರ್‌ಟಿಎಸ್‌ ಕಾರಿಡಾರ ದಾಟಿ ಕೋರ್ಟ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಹೀಗಾಗಿ ಕೋರ್ಟ್‌ ವೃತ್ತ, ಎನ್‌ಟಿಟಿಎಫ್‌, ಟೋಲನಾಕಾ ಹಾಗೂ ಹುಬ್ಬಳ್ಳಿಗೆ ಹೋಗಲು ಜ್ಯುಬಲಿ ವೃತ್ತಕ್ಕೆ ಹೋಗಿಯೇ ಬರುವಂತಾಗಿದೆ. ಮೊದಲೇ ಜ್ಯುಬಿಲಿ ವೃತ್ತ ವಿಪರೀತ ಟ್ರಾಫಿಕ್‌ ಸಮಸ್ಯೆ ಇದ್ದು, ಇದೀಗ ಅವೈಜ್ಞಾನಿಕ ನೀತಿಯಿಂದ ಜನರಿಗೆ ಮತ್ತಷ್ಟು ತೊಂದರೆಯಾಗಿದೆ.

ಧಾರವಾಡದ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಅನಿವಾರ್ಯವಾಗಿ ಬಿಆರ್‌ಟಿಎಸ್‌ ಕಾರಿಡಾರ್‌ ಬಳಸುವುದು ಅನಿವಾರ್ಯ. ಆದರೆ, ಒಟ್ಟಾರೆ ಕಾರಿಡಾರ್‌ ಬಂದ್‌ ಮಾಡಿದರೆ ಜನರು ಪ್ರತಿಯೊಂದು ಸ್ಥಳಕ್ಕೂ ಯೂ ಟರ್ನ್‌ ತೆಗೆದುಕೊಳ್ಳಲು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತರು ತಮ್ಮ ನಿರ್ಧಾರ ಕೈ ಬಿಡಬೇಕು. ಮೊದಲಿನಂತೆ ರಸ್ತೆಗಳನ್ನು ಸರಳಗೊಳಿಸಬೇಕು. ಜತೆಗೆ ಇಂತಹ ನಿರ್ಧಾರ ತೆಗೆದುಕೊಳ್ಳುವಾಗ ಸಾರ್ವಜನಿಕರ ಸಲಹೆಗಳನ್ನು ಸಹ ಪರಿಗಣಿಸಬೇಕೆಂದು ಜನರು ಆಗ್ರಹಿಸುತ್ತಾರೆ.

ಇನ್ನು, ಧಾರವಾಡದ ಮಾರುಕಟ್ಟೆಗೆ ಕಾರು ತೆಗೆದುಕೊಂಡು ಹೋಗದ ಸ್ಥಿತಿ ಉಂಟಾಗಿದ್ದು, ಸುಭಾಸ ರಸ್ತೆ, ಸೂಪರ್‌ ಮಾರುಕಟ್ಟೆ, ನೆಹರು ಮಾರುಕಟ್ಟೆ ಸೇರಿದಂತೆ ಇಡೀ ಮಾರುಕಟ್ಟೆಯಲ್ಲಿ ಕಾರು, ಬೈಕ್‌ ನಿಲ್ಲಿಸಲು ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಇನ್ನು, ಹಬ್ಬ-ಹರಿದಿನಗಳಲ್ಲಂತೂ ಬೈಕ್‌ ಸಹ ಮಾರುಕಟ್ಟೆ ಪ್ರದೇಶದಲ್ಲಿ ಹೋಗದಂತಹ ಸ್ಥಿತಿ ಉಂಟಾಗುತ್ತದೆ. ಬರೀ ಮಾರುಕಟ್ಟೆ ಮಾತ್ರವಲ್ಲದೇ ನಗರದ ಪ್ರಮುಖ ಸ್ಥಳಗಳಲ್ಲೂ ವಾಹನ ನಿಲುಗಡೆಗೆ ಸರಿಯಾಗಿ ವ್ಯವಸ್ಥೆ ಇಲ್ಲ. ಇದು ಮಹಿಳೆಯರಿಗೆ, ವೃದ್ಧರಿಗೆ ವಾಹನ ಚಲಿಸಲು ತೀವ್ರ ಸಮಸ್ಯೆಯಾಗುತ್ತಿದೆ. ಹೀಗಾಗಿ ಜನರು ಸಹ ಟ್ರಾಫಿಕ್‌ ನಿಯಮ ಪಾಲಿಸದಂತಾಗಿದೆ.

ಜ್ಯುಬಿಲಿ ವೃತ್ತ, ಎನ್‌ಟಿಟಿಎಫ್‌, ಬಾಗಲಕೋಟ ಪಂಪ್‌ ಸೇರಿದಂತೆ ಪ್ರತಿಯೊಂದು ಸಿಗ್ನಲ್‌ನಲ್ಲಿ ಜನರು ಸಿಗ್ನಲ್‌ಗಳಿಗೆ ಕಾಯಬೇಕಾಗಿದ್ದು, ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನಾದರೂ ಟ್ರಾಫಿಕ್‌ ನಿಯಮಗಳನ್ನು ಜನರಿಗೆ ಅನುಕೂಲವಾಗುವಂತೆ ಸರಳೀಕರಿಸಬೇಕಾದ ಅನಿವಾರ್ಯವಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ