ಜ್ಞಾನ ಹೆಚ್ಚಿಸಿಕೊಳ್ಳಲು ಗ್ರಂಥಾಲಯ ಬಳಸಿಕೊಳ್ಳಿ: ಪ್ರೊ. ಚೆಲುವರಾಜು

KannadaprabhaNewsNetwork |  
Published : Jun 12, 2025, 02:03 AM IST
ಬಳ್ಳಾರಿಯ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಚೆಲುವರಾಜು ಮಾತನಾಡಿದರು.  | Kannada Prabha

ಸಾರಾಂಶ

ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನ 2024-25ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಜರುಗಿತು.

ಸರಳಾದೇವಿ ಕಾಲೇಜು ವಾರ್ಷಿಕೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನ 2024-25ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಜರುಗಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಚೆಲುವರಾಜು, ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ, ಶ್ರದ್ಧೆ, ಶಿಸ್ತು, ಸ್ಪರ್ಧಾತ್ಮಕ ‌ಮನೋಭಾವ ರೂಢಿಸಿಕೊಳ್ಳಬೇಕು. ಅಧ್ಯಯನದ ಕಡೆ ಹೆಚ್ಚು ಗಮನ ನೀಡಬೇಕು. ಬಡತನ ಹಿನ್ನಲೆಯಿಂದ ಬಂದವರು ದೊಡ್ಡದೊಡ್ಡ ಸಾಧನೆ ಮಾಡಿದ ಉದಾಹರಣೆಗಳಿವೆ. ಜ್ಞಾನಾರ್ಜನೆಗೆ ಬಡವ-ಶ್ರೀಮಂತನೆಂಬುದಿಲ್ಲ.

ನಾನು ಬಡತನದಲ್ಲಿಯೇ ಬೆಳೆದೆ. ಕಡುಕಷ್ಟದಲ್ಲಿ ಓದು ಮುಂದುವರಿಸಿದೆ. ಪದವಿ ಹಂತದಲ್ಲಿ ಶ್ರಮವಹಿಸಿ ಆಂಗ್ಲ‌ಭಾಷೆ‌ಯಲ್ಲಿ ಪ್ರಭುತ್ವ ಸಾಧಿಸಿದೆ.‌ ಮುಂದೆ ಜರ್ಮನಿ‌ ವಿಶ್ವವಿದ್ಯಾಲಯದಲ್ಲಿ‌ ಅತಿಥಿ ಉಪನ್ಯಾಸಕನಾಗಿಯೂ ಕರ್ತವ್ಯ‌ ನಿರ್ವಹಿಸಿದೆ ಎಂದು ತಮ್ಮ ಜೀವನ ಯಶೋಗಾಥೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದ ಡಾ. ಚೆಲುವರಾಜು, ಕಾಲೇಜು ಗ್ರಂಥಾಲಯಗಳನ್ನು ಸಮರ್ಪಕವಾಗಿ ಬಳಸಿಕೊಂಡು‌ ಶೈಕ್ಷಣಿಕ ಜ್ಞಾನ ಸಂಪಾದಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರೊ.‌ ಮರೇಗೌಡ, ಬಿ.‌ ಜಯರಾಂ‌ ಹಾಗೂ ಕಾಲೇಜು ಹಳೇ ವಿದ್ಯಾರ್ಥಿಗಳ‌ ಸಂಘದ ಅಧ್ಯಕ್ಷ ವೆಂಕಟೇಶ್ ಹೆಗಡೆ ಮಾತನಾಡಿದರು.

ಕಾಲೇಜಿನ‌ ಪ್ರಾಚಾರ್ಯ ಡಾ.‌ ಸಿ.ಎಚ್. ಸೋಮನಾಥ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು‌ ಅಭಿವೃದ್ಧಿ ಸಮಿತಿ ಹಿರಿಯ ಸದಸ್ಯ ಪ್ರೊ.‌ ಎಸ್.ಎಸ್. ಪಾಟೀಲ್, ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಹನುಮಂತರೆಡ್ಡಿ ಸೇರಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸವಿತಾ ಅಮರೇಶ ನುಗಡೋಣಿ ಮತ್ತು ತಂಡದವರು ವಚನ ಸಂಗೀತ ‌ಕಾರ್ಯಕ್ರಮ ನಡೆಸಿಕೊಟ್ಟರು. ರಾಘವೇಂದ್ರ ಗುಡದೂರು ಮತ್ತು‌ ಹರ್ಷ ಆಚಾರ್ ಹಾರ್ಮೋನಿಯಂ, ತಬಲಾ ಸಾಥ್‌ ನೀಡಿದರು. ಡಾ. ದಸ್ತಗಿರಿ ಸಾಬ್ ದಿನ್ನಿ, ಡಾ. ಜ್ಯೋತಿ ಅಣ್ಣಾರಾವ್ ಹಾಗೂ ಡಾ.‌ ಪಲ್ಲವಿ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ‌ಕಾರ್ಯಕ್ರಮ ನಡೆದವು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ