ಉತ್ತಮ ಆರೋಗ್ಯಕ್ಕೆ ಸಿರಿದಾನ್ಯಗಳ ಬಳಕೆ ಮಾಡಿ

KannadaprabhaNewsNetwork |  
Published : Dec 24, 2025, 03:15 AM IST
ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2025 | ಜಾಗೃತಿ ಫಲಕ ಪ್ರದರ್ಶನ ಸಿರಿದಾನ್ಯಗಳ ಜಾಗೃತಿ ಮ್ಯಾರಥಾನ್ಗೆ ಜೆ.ಟಿ.ಪಾಟೀಲ ಚಾಲನೆ | Kannada Prabha

ಸಾರಾಂಶ

ಮೂಲ ಕೃಷಿಯತ್ತ ಎಲ್ಲ ರೈತರು ವಾಲಬೇಕಿದೆ. ಉತ್ತಮ ಆರೋಗ್ಯಕ್ಕೆ ಸಿರಿದಾನ್ಯಗಳ ಬಳಕೆ ಮಾಡುಬೇಕು. ಇವುಗಳ ಬಳಕೆಯಿಂದ ಉತ್ತಮ ಆರೋಗ್ಯ ಪಡೆದಯುಕೊಳ್ಳಬಹುದಾಗಿದೆ ಎಂದು ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮೂಲ ಕೃಷಿಯತ್ತ ಎಲ್ಲ ರೈತರು ವಾಲಬೇಕಿದೆ. ಉತ್ತಮ ಆರೋಗ್ಯಕ್ಕೆ ಸಿರಿದಾನ್ಯಗಳ ಬಳಕೆ ಮಾಡುಬೇಕು. ಇವುಗಳ ಬಳಕೆಯಿಂದ ಉತ್ತಮ ಆರೋಗ್ಯ ಪಡೆದಯುಕೊಳ್ಳಬಹುದಾಗಿದೆ ಎಂದು ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.

ಅಂತಾರಾಷ್ಟ್ರೀಯ ವಾಣಿಜ್ಯಮೇಳ-2025ರ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕೃಷಿ ಇಲಾಖೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿಕ ಸಮಾಜ ಹಾಗೂ ಕೃಷಿ ಸಂಬಂದಿತ ಇಲಾಖೆ, ಸರಕಾರಿ ನೌಕರರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಸಿರಿಧಾನ್ಯಗಳ ಜಾಗೃತಿ ಮ್ಯಾರಥಾನ್ (ನಡಿಗೆ)ಗೆ ಬಲೂನ್ ಹಾರಿಸಿ ಚಾಲನೆ ನೀಡಿದ ಅವರು, ಒಂದು ಕಾಲದಲ್ಲಿ ಸಿರಿಧಾನ್ಯ ಬಡವರ ಆಹಾರವಾಗಿತ್ತು. ಇಂದು ಶ್ರೀಮಂತರ ಆಹಾರವಾಗಿ ಪರಿಣಮಿಸಿದೆ ಎಂದರು.ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ರೈತರು ಸಾವಯುವ ಕೃಷಿಯತ್ತ ಬರಬೇಕಿದೆ. ಇದರಿಂದ ಆರೋಗ್ಯಯುತ ಬೆಳೆಯನ್ನು ಬೆಳೆದು, ಉತ್ತಮ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ ಎಂದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ರೈತರ ದಿನಾಚರಣೆ ಶುಭಾಶಯಗಳನ್ನು ಹೇಳುವ ಮೂಲಕ ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಅರಿವು ಕಾರ್ಯಕ್ರಮಗಳು ಆಗಬೇಕು. ಅದಕ್ಕೆ ಅಧಿಕಾರಿಗಳು ರೈತರಿಗೆ ಸಿರಿಧಾನ್ಯ ಬೆಳೆಗಳನ್ನು ಬೆಳೆಯುವಂತೆ ಮಾಡಬೇಕು. ಸಿರಿಧಾನ್ಯಗಳನ್ನು ಬೇರೆ ದೇಶಕ್ಕೆ ರಪ್ತು ಮಾಡಲಾಗುತ್ತಿದೆ. ಆದರೆ, ಇಲ್ಲಿಯೇ ಬಳಕೆಯಾಗುವಂತೆ ಮಾಡಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶ ಟಿ.ಎಸ್, ತೋಟಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ ಸೇರಿದಂತೆ ಕೃಷಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಜಾಗೃತಿ ಮ್ಯಾರಥಾನ್ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನವನಗರದ ಬಸ್ ನಿಲ್ದಾಣ, ಎಲ್.ಐ.ಸಿ ವೃತ್ತ, ಎಸ್.ಬಿ.ಐ ಬ್ಯಾಂಕ್, ಜಿಲ್ಲಾ ಆಸ್ಪತ್ರೆ, ಕಾಳಿದಾಸ ವೃತ್ತದ ಮಾರ್ಗವಾಗಿ ವಿದ್ಯಾಗಿರಿ ಇಂಜಿನೀಯರಿಂಗ್ ಕಾಲೇಜಿಗೆ ಮುಕ್ತಾಯಗೊಂಡಿತು. ಮ್ಯಾರಥಾನ್‌ದಲ್ಲಿ ಸಿರಿಧಾನ್ಯಗಳ ಮಹತ್ವವನ್ನು ಸಾರುವ ವಿವಿಧ ಘೋಷಣಾ ಫಲಕಗಳನ್ನು ಪ್ರದರ್ಶನ ಮಾಡಲಾಯಿತು. ಜಾಥಾದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.ವೈದ್ಯರ ಸಲಹೆ ಮೂಲಕ ಸ್ವತಃ ನಾನೇ 40 ದಿನಗಳ ಕಾಲ ಸಿರಿದಾನ್ಯ ಬಳಕೆ ಮಾಡುವ ಮೂಲಕ ಸಕ್ಕರೆ ಹಾಗೂ ರಕ್ತದ ಒತ್ತಡ ನಾರ್ಮಲ್‌ಗೆ ಬಂದಿವೆ. ಇದರ ಜೊತೆಗೆ 5 ಕೆ.ಜಿ ಕೂಡಾ ಕಡಿಮೆ ಆಗಿದೆ. ಸಿರಿಧಾನ್ಯಗಳ ಜಾಗೃತಿ ಮೂಡಿಸುವ ಪರಿಸ್ಥಿತಿ ಒದಗಿ ಬಂದಿದೆ. ಸಿರಿಧಾನ್ಯ ಬೆಳೆಯುವುದು ಸಿರಿಧಾನ್ಯ ತಿನ್ನುವುದು ಆಗಬೇಕು.

-ಜೆ.ಟಿ.ಪಾಟೀಲ, ಬೀಳಗಿ ಶಾಸಕರು ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ