ನಾಯಕ ಸಮುದಾಯ ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿ

KannadaprabhaNewsNetwork |  
Published : Sep 17, 2024, 12:50 AM IST
ನಾಯಕ ಸಮುದಾಯ ಸರ್ಕಾರದ ಸೌಲಭ್ಯಗಳನ್ನು ' ಸದ್ಬಳಕೆ ಮಾಡಿಕೊಳ್ಳಿ : ಎಂ.ರಾಮಚಂದ್ರ | Kannada Prabha

ಸಾರಾಂಶ

ಚಾಮರಾಜನಗರ ವಾಲ್ಮೀಕಿ ಭವನದಲ್ಲಿ ನಗರಸಭಾ ನೂತನ ಅಧ್ಯಕ್ಷ ಎಸ್. ಸುರೇಶ್ ಅವರನ್ನು ನಾಯಕ‌ ಸಮುದಾಯ ಹಾಗೂ ಶಿವುವಿರಾಟ್ ಸ್ನೇಹ ಬಳಗದಿಂದ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಾಯಕ ಸಮುದಾಯದವರು ಸರ್ಕಾರದಿಂದ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಮೈಸೂರು ಮತ್ತು ಚಾಮರಾಜನಗರ ನಾಯಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರ ಸಲಹೆ ನೀಡಿದರು.ನಗರದ ವಾಲ್ಮೀಕಿ ಭವನದಲ್ಲಿ ನಾಯಕ ಸಮುದಾಯ ಹಾಗೂ ವಿರಾಟ್ ಶಿವು ಸ್ನೇಹ ಬಳಗದ ವತಿಯಿಂದ ನಗರಸಭಾ ನೂತನ ಅಧ್ಯಕ್ಷ ಎಸ್.ಸುರೇಶ್ ಅವರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಗೆದ್ದವರನ್ನು ಸನ್ಮಾನಿಸಿ, ಗೌರವಿಸುವುದು ನಮ್ಮ ಸಂಪ್ರದಾಯವಾಗಿದೆ. ಸಮುದಾಯದಲ್ಲಿ ಅನೇಕರು ನಗರಸಭಾಧ್ಯಕ್ಷರಾಗಿದ್ದರು. ನಮ್ಮ ತಂದೆ ಮಹದೇವನಾಯಕರು, ಪದ್ಮನಾಯಕ್, ಸುರೇಶ್‌ನಾಯಕ, ಮಹದೇವನಾಯಕರು ನಾವು ಕೂಡ ನಗರಸಭಾಧ್ಯಕ್ಷರಾಗಿದ್ದು, ನಾವೆಲ್ಲರೂ ಮೀಸಲಾತಿಯಡಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇವೆ. ಆದರೆ ನಮ್ಮ ತಂದೆಯವರ ಹಾದಿಯಲ್ಲಿ ಸುರೇಶ್ ಸಾಮಾನ್ಯ ಮೀಸಲಾತಿ ಅಡಿಯಲ್ಲಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.

ನಾಯಕ ಸಮಾಜ ಇತರ ವರ್ಗಗಳ ಬೆಂಬಲದಿಂದ ಮಾತ್ರ ಚುನಾವಣೆಯಲ್ಲಿ ಗೆಲ್ಲಬಹುದು. ಹೊರತು ಒಂದೇ ಸಮುದಾಯದಿಂದ ಆಗಲ್ಲ. ಎಲ್ಲ ವರ್ಗದ ಸಹಕಾರದಿಂದ ಸುರೇಶ್ ಅಧ್ಯಕ್ಷರಾಗಿದ್ದಾರೆ. ಅವರಿಗೆ ಸಮುದಾಯ ಹಾಗೂ ಶಿವು ವಿರಾಟ ಸ್ನೇಹ ಬಳಗದಿಂದ ಸನ್ಮಾನಿಸಿ ಅವರ ಜವಾಬ್ದಾರಿ ಹೆಚ್ಚು ಮಾಡಿದೆ. ಅವರ ಅಧಿಕಾರದ ಅವಧಿಯಲ್ಲಿ ಹೆಚ್ಚು ಜನಸೇವೆ ಮಾಡುವಂತಾಗಲಿ ಎಂದು ಆಶಿಸಿದರು.ಶಿಕ್ಷಣಕ್ಕೆ ಒತ್ತು ನೀಡಿ: ಸಮುದಾಯದವರು ಸರ್ಕಾರದಿಂದ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮುದಾಯದ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ಮಾತನಾಡಿ, ರಾಮಸಮುದ್ರ ಸುರೇಶ್ ಅವರು ಸಾಮಾನ್ಯ ಮೀಸಲಾತಿ ಅಡಿಯಲ್ಲಿ ನಗರಸಭಾಧ್ಯಕ್ಷರಾಗಿ ಆಯ್ಕೆಯಾಗಿರುವುದು ತುಂಬಾ ಸಂತಸವಾಗಿದೆ. ನಗರಸಭೆಯಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ನಗರದ ಪ್ರಗತಿಗೆ ಹೆಚ್ಚು ಒತ್ತು ಕೊಡಬೇಕು ಎಂದರು.

ನಗರಸಭಾಧ್ಯಕ್ಷ ಎಸ್. ಸುರೇಶ್ ಮಾತನಾಡಿ, ಸಮುದಾಯದ ಮುಖಂಡರು, ಸದಸ್ಯರು, ಎಲ್ಲವರ್ಗದ ನಗರಸಭಾ ಸದಸ್ಯರು, ಮುಖಂಡರ ಬೆಂಬಲ, ಸಹಕಾರದಿಂದ ಮೀಸಲಾತಿಯಡಿಯಲ್ಲಿ ಅಧ್ಯಕ್ಷನಾಗಿದ್ದೇನೆ. ಈ ಸನ್ಮಾನ ನನ್ನ ಜವಾಬ್ದಾರಿ ಹೆಚ್ಚು ಮಾಡಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ನಗರದ ಜನತೆಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡುತ್ತೇವೆ. ಪಟ್ಟಣ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದರು.ಕಾರ್ಯಕ್ರಮದ ಆಯೋಜಕ ಶಿವುವಿರಾಟ್ ಮಾತನಾಡಿ, ನಾಯಕ ಸಮುದಾಯಕ್ಕೆ ತನ್ನದೆಯಾದ ಇತಿಹಾಸ ಹೊಂದಿದ್ದು, ನಾಡಿಗೆ ಕೊಡುಗೆ ಕೊಟ್ಟಿದೆ. ಜಿಲ್ಲಾಡಳಿತ ಭವನದ ಎದುರು ಡಾ.ಬಿ.ಆರ್. ಅಂಬೇಡ್ಕರ್ , ಬಸವೇಶ್ವರ ಪುತ್ಥಳಿ ನಿರ್ಮಾಣವಾಗುತ್ತಿರುವುದು ಸಂತಸ ಸುದ್ದಿಯಾಗಿದೆ. ನಗರದ ಯಡಪುರದ ಸಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಶ್ರೀವಾಲ್ಮೀಕಿ ಪುತ್ಥಳಿ ನಿರ್ಮಾಣ ಮಾಡಿಸಬೇಕು ಎಂದು ನಗರಸಭಾ ನೂತನ ಅಧ್ಯಕ್ಷ ಎಸ್. ಸುರೇಶ್ ಅವರಲ್ಲಿ ಮನವಿ ಮಾಡಿದರು.ಖಾಸಗಿ ಜಾಗದಲ್ಲಿ ವೀರ ಮದಕರಿನಾಯಕರ ನಿರ್ಮಾಣಕ್ಕೆ ವೇದಿಕೆಯಲ್ಲಿದ್ದ ಮುಖಂಡರಲ್ಲಿ ಮನವಿ ಮಾಡಿದರು.

ಶಿಕ್ಷಕ ಕೆಂಪನಪುರ ಸಿದ್ದರಾಜು ಪ್ರಾಸ್ತಾವಿಕ ಭಾಷಣ ಮಾಡಿದರು. ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್, ಮಾಜಿ ಅಧ್ಯಕ್ಷ ಅರ್.ಸುಂದರ್, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಮಹದೇವನಾಯಕ, ಮಾಜಿ ಸದಸ್ಯರಾದ ರಾಜೇಶ್ ನಾಯಕ, ಸುಂದರ್ ರಾಜು, ಚೆಂಗುಮಣಿ, ಮುಖಂಡರಾದ ಕೃಷ್ಣನಾಯಕ, ಯ.ರಾಜುನಾಯಕ, ಯ.ಮಹದೇವನಾಯಕ, ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಬುಲೆಟ್ ಚಂದ್ರು, ವೆಂಕಟೇಶನಾಯಕ, ಬಂಗಾರನಾಯಕ, ರೇಷ್ಮೆ ಇಲಾಖೆ ಮಾಧು, ಕಾರ್ ವರದನಾಯಕ, ಹರದನಹಳ್ಳಿ ಪಿಎಸಿಸಿ ಉಪಾಧ್ಯಕ್ಷೆ ಸುಮಾರಾಮಚಂದ್ರ, ಮಹದೇವನಾಯಕ, ಯಳಂದೂರು ಬಿಜೆಪಿ ಮಂಡಲ ಅಧ್ಯಕ್ಷ ಅನಿಲ್, ಶಿಕ್ಷಕರಾದ ಲಿಂಗರಾಜು, ಶಂಕರ್, ರಂಗನಾಥ್, ಶಿವುವಿರಾಟ್ ಸ್ನೇಹ ಬಳಗದ ಮಣಿಕಂಠ, ಸಂತೋಷ, ಕಿರಣ್, ಪ್ರದೀಪ್, ಮನುವಿರಾಟ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು