ವಿ.ಜಿ.ದೊಡ್ಡಿ ವಿಎಸ್ಎಸ್ಎನ್‌ ಸಹಕಾರ ಸಂಘ ಕಾಂಗ್ರೆಸ್‌ ವಶ

KannadaprabhaNewsNetwork |  
Published : Jun 22, 2025, 11:48 PM IST
ಮಾಗಡಿ ತಾಲ್ಲೂಕಿನ ವೀರೇಗೌಡನ ದೊಡ್ಡಿ ವಿಎಸ್ಎಸ್ ಎನ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರುಗಳು ಆಯ್ಕೆಯಾಗಿದ್ದರು. | Kannada Prabha

ಸಾರಾಂಶ

ಮಾಗಡಿ: ತಾಲೂಕಿನ ವೀರೇಗೌಡನದೊಡ್ಡಿ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ 12 ಸ್ಥಾನಗಳ ಪೈಕಿ ಇಬ್ಬರು ಅವಿರೋಧ ಆಯ್ಕೆಯಾಗಿದ್ದು 10 ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು.

ಮಾಗಡಿ: ತಾಲೂಕಿನ ವೀರೇಗೌಡನದೊಡ್ಡಿ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ 12 ಸ್ಥಾನಗಳ ಪೈಕಿ ಇಬ್ಬರು ಅವಿರೋಧ ಆಯ್ಕೆಯಾಗಿದ್ದು 10 ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು.

ನೂತನ ನಿರ್ದೇಶಕರು: ವಿಜಿ ದೊಡ್ಡಿ ವಿಎಸ್ಎಸ್ ಎನ್ ನೂತನ ನಿರ್ದೇಶಕರಾಗಿ ಸಾಲಗಾರರಲ್ಲದ ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರದಿಂದ ರವಿಕುಮಾರ್, ಸಾಲಗಾರರ ಕ್ಷೇತ್ರದಿಂದ ಶಿವಣ್ಣ, ಶಿವರಾಮಯ್ಯ, ಕೃಷ್ಣಪ್ಪ, ಎ.ಬಿ.ಲೋಕೇಶ್, ನರಸಿಂಹಮೂರ್ತಿ, ಹಿಂದುಳಿದ ಎ ವರ್ಗದ ಮೀಸಲು ಕ್ಷೇತ್ರದಿಂದ ಗಿರಿಗೌಡ, ಹಿಂದುಳಿದ ಬಿ ವರ್ಗದ ಮೀಸಲು ಕ್ಷೇತ್ರದಿಂದ ವಿ.ಎಸ್.ಉಮೇಶ್, ಮಹಿಳೆಯರ ಮೀಸಲು ಸ್ಥಾನದಿಂದ ಪುಟ್ಟತಾಯಮ್ಮ, ಗಂಗಮ್ಮ ವಿಜೇತರಾದರು.

ಅವಿರೋಧ ಆಯ್ಕೆ:

ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ನಾಗರಾಜು, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಿಂದ ಸಾಮಾನ್ಯ ಸ್ಥಾನಕ್ಕೆ ರವಿಕುಮಾರ್ ಆಯ್ಕೆಯಾಗಿದ್ದಾರೆ.

ಮುಖಂಡರಾದ ಸಿದ್ದಲಿಂಗಪ್ರಸಾದ್, ಪರಶಿವಮೂರ್ತಿ, ಜಯಣ್ಣ, ಲೋಕೇಶ್, ಮಂಡಿ ಪ್ರಕಾಶ್, ರುದ್ರೇಶ್, ದೊಡ್ಡಿ ಮಹೇಶ್, ರವಿಕುಮಾರ್, ಅರುಣ್, ವಿಶ್ವ, ಶಶಿಧರ್, ಕಿರಣ್, ಮೂರ್ತಿ ನಾಯಕ್, ಸಿದ್ದರಾಜು, ಮಹೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ