ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ ಶಿಕ್ಷಣದಿಂದ ಮಾತ್ರ ಈ ಸಮಾಜದಲ್ಲಿ ಸಮಾನತೆಯ ಮೌಲ್ಯದಾರಿತ ಬದುಕು ನಡೆಸಲು ಸಾದ್ಯ ಎಂದು ಕಾವೇರಿ ಕಾಲೇಜು ಉಪನ್ಯಾಸಕ ವನಿತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಶೋಷಿತ ಸಮುದಾಯಗಳು ಬದುಕು ನಡೆಸಲು ಜ್ಞಾನದ ಅಗತ್ಯವಿದೆ. ಅಂಬೇಡ್ಕರ್ ಹಾದಿಯಲ್ಲಿ ಕಲಿಕೆಯ ಪ್ರಾಮುಖ್ಯ ತೆಯನ್ನು ತಿಳಿದುಕೊಳ್ಳಬೇಕು ಎಂದರು.
ದುಷ್ಚಟಗಳಿಂದ ದೂರ ಉಳಿದು ಗೌರವಿತವಾಗಿ ಬದುಕು ನಡೆಸಲು ಚಿಂತಿಸಬೇಕು. ವಿದ್ಯಾರ್ಹತೆಯಿಂದ ಉತ್ತಮ ಉದ್ಯೋಗ ಪಡೆದು ಆರ್ಥಿಕವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ಮತ್ತೊಂಬರ ಮುಂದೆ ಕೈಚಾಚುವುದು ತಪ್ಪುತದೆ ಎಂದು ಹೇಳಿದರು.ನೋಟರಿ, ವಕೀಲ ಕಾಶಿಯಪ್ಪ ಮಾತನಾಡಿ ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ ಹಿಂದೂಳಿದ ಸಮುದಾಯಗಳು ಸಮಾನತೆಯ ಬದುಕು ನಡೆಸಲು ಅರ್ಹರಾಗಬೇಕು ಎಂದರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾನತೆಯಲ್ಲಿ ಬದುಕು ನಡೆಸುವ ಹಕ್ಕು ನಮಗೆ ಸಿಗಬೇಕು ಎಂದು ಹೇಳಿದರು.
ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮಿಸುವುದರೊಂದಿಗೆ ಕಾರ್ಯಕ್ರಮಕ್ಕೆ ನಿಟ್ಟೂರು ಗ್ರಾ.ಪಂ. ಅಧ್ಯಕ್ಷೆ ಅಮ್ಮುಣಿ ಚಾಲನೆ ನೀಡಿದರು.