ಸೋಮವಾರಪೇಟೆ: ಓದಿದ ಶಾಲೆಗೆ ಹಳೆ ವಿದ್ಯಾರ್ಥಿಯಿಂದ ವಾಹನ ಕೊಡುಗೆ

KannadaprabhaNewsNetwork |  
Published : Jun 12, 2025, 04:08 AM IST
ಓದಿದ ಶಾಲೆಗೆ ವಾಹನ ಕೊಡುಗೆಯಾಗಿ ನೀಡಿದ ಹಳೆಯ ವಿದ್ಯಾರ್ಥಿ  | Kannada Prabha

ಸಾರಾಂಶ

ಶಾಲಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಕೇಕ್‌ ಕತ್ತರಿಸುವ ಮೂಲಕ ಸಂಭ್ರಮದಿಂದ ವಾಹನವನ್ನು ಬರಮಾಡಿಕೊಂಡರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸಮೀಪದ ಮಸಗೋಡು- ತಣ್ಣೀರುಹಳ್ಳದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಆಂಗ್ಲ ಮಾಧ್ಯಮ ಎಲ್‌ಕೆಜಿ ಯುಕೆಜಿ ತರಗತಿಗಳ ಮಕ್ಕಳಿಗೆ ಅನುಕೂಲವಾಗುವಂತೆ ಶಾಲೆಯ ಹಳೆಯ ವಿದ್ಯಾರ್ಥಿ, ಸ್ಥಳೀಯರಾದ ಪೂವಪ್ಪ ಹಾಗೂ ಲೀಲಾವತಿ ದಂಪತಿ ಪುತ್ರ ಬಿ.ಪಿ. ರವಿ ಅವರು 4 ಲಕ್ಷ ರು. ವೆಚ್ಚದಲ್ಲಿ ವಾಹನವನ್ನು ಉಚಿತವಾಗಿ ಒದಗಿಸಿದರು.

ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ವಾಹನವನ್ನು ಬರಮಾಡಿಕೊಂಡರು. ಶಾಲಾ ವಿದ್ಯಾರ್ಥಿಗಳ ಅಗತ್ಯವಾಗಿರುವ ವಾಹನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಅವರು ಹಸಿರು ನಿಶಾನೆ ತೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಸಿ. ತಿಮ್ಮಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ವಿನೋದ್‌ಕುಮಾರ್, ಆಂಗ್ಲಮಾಧ್ಯಮ ಶಾಲಾ ಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ಕೆ. ಲೋಕಾನಂದ, ಗ್ರಾ.ಪಂ. ಉಪಾಧ್ಯಕ್ಷೆ ಜಲಜಾ ದಿನೇಶ್, ಸದಸ್ಯರಾದ ಅಶ್ವಿನಿ, ಕವಿತಾ, ಪ್ರವೀಣ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಫೀಕ್, ಸದಸ್ಯರಾದ ಅಬ್ದುಲ್ ಶಾಲಿ, ಹಬೀಬ್, ಹರೀಶ್, ಪ್ರವೀಣ್, ರೇವತಿ ಸೇರಿದಂತೆ ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''