ವಿಜಯನಗರ: ಪ್ರಸಕ್ತ ಕಾಂಗ್ರೆಸ್ ಸರ್ಕಾರದಲ್ಲಿ ಬಹು ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಬದಲಾವಣೆಯ ವಿಚಾರಕ್ಕೆ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯ ಗೂಡಾರ್ಥದ ಮರು ವಿಶ್ಲೇಷಣೆ ಮತ್ತಷ್ಟು ಇಂಬು ನೀಡಿದಂತಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಯಲ್ಲಿ 2025ನೇ ಸಾಲಿನಲ್ಲಿ ತುಂಬಿದ ಕೂಡ ತುಳುಕಿತ್ತಲೇ ಪರಾಕ್ ಎಂದು ಗೊರವಯ್ಯ ಕಾರ್ಣಿಕ ನುಡಿ ನುಡಿದ್ದರು. ಅದರಂತೆ ಈ ಬಾರಿ ‘ಕಾಂಗ್ರೆಸ್ ಸರ್ಕಾರ ಒಂದು ತುಂಬಿದ ಕೊಡ ಇದ್ದಂತೆ, ಇದರಲ್ಲಿನ ಶಾಸಕರ ಮನಸ್ಸು ಕದಲಿದರೆ ಸಿಎಂ ಬದಲಾವಣೆಯ ಖಚಿತ’ ಎಂಬ ರೀತಿಯಲ್ಲಿ ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಮರು ವಿಶ್ಲೇಷಿಸಿದ್ದಾರೆ.
ಈ ಬಾರಿಯ ಕಾರ್ಣಿಕ ನುಡಿ ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿನ ಸಿಎಂ ಬದಲಾವಣೆಯ ವಿಷಯಕ್ಕೆ ಗ್ರಾಸವಾಗಿದೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಕಾರ್ಣಿಕ ಆಲಿಸಲು ಹೆಲಿಕಾಪ್ಟರ್ ಬಂದಿದ್ದಕ್ಕೆ ಮೈಲಾರಲಿಂಗೇಶ್ವರ ಮುನಿಸಿಕೊಂಡಿದ್ದರಿಂದ, ದೇವಸ್ಥಾನಕ್ಕೆ ಬೆಳ್ಳಿ ಹೆಲಿಕಾಪ್ಟರನ್ನು ಕೊಡುಗೆಯಾಗಿ ನೀಡಿದ್ದರು.