ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಸಮರ್ಥ ಕೆಲಸ: ಗುರುಲಿಂಗಪ್ಪ ಅಂಗಡಿ

KannadaprabhaNewsNetwork |  
Published : Sep 16, 2026, 03:00 AM IST
ಕಾಂಗ್ರೆಸ್ ಕಾಟಾಚಾರಕ್ಕೆ ಕೆಲಸ ಮಾಡುತ್ತಿದೆ: ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ | Kannada Prabha

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ತಕ್ಷಣ ಬಡವರು, ದೀನ ದಲಿತರು ಸೇರಿ ಜನತೆಗೆ ನ್ಯಾಯ ಕೊಡಿಸಲು ಪ್ರಯತ್ನಿಸಿದ್ದಾರೆ. ಮೂರು ವರ್ಷಗಳ ಕಾಲ ಪಕ್ಷ ಕಟ್ಟಲು, ಜನತೆಗಾಗಿ ಜನಾಕ್ರೋಶ ಯಾತ್ರೆ ಮಾಡಿ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಮುಡಾ ಹಗರಣದಲ್ಲಿ ಮೈಸೂರು ಪಾದಯಾತ್ರೆ ಮಾಡಿದರು. ವಾಲ್ಮಿಕಿ ಹಗರಣದ ವಿರುದ್ಧ ಹೋರಾಟ ನಡೆಸಿದರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ತಕ್ಷಣ ಬಡವರು, ದೀನ ದಲಿತರು ಸೇರಿ ಜನತೆಗೆ ನ್ಯಾಯ ಕೊಡಿಸಲು ಪ್ರಯತ್ನಿಸಿದ್ದಾರೆ. ಮೂರು ವರ್ಷಗಳ ಕಾಲ ಪಕ್ಷ ಕಟ್ಟಲು, ಜನತೆಗಾಗಿ ಜನಾಕ್ರೋಶ ಯಾತ್ರೆ ಮಾಡಿ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಮುಡಾ ಹಗರಣದಲ್ಲಿ ಮೈಸೂರು ಪಾದಯಾತ್ರೆ ಮಾಡಿದರು. ವಾಲ್ಮಿಕಿ ಹಗರಣದ ವಿರುದ್ಧ ಹೋರಾಟ ನಡೆಸಿದರು. ಡಿ.ಕೆ.ಶಿವಕುಮಾರ್‌ ಮಂತ್ರಿಮಂಡಲದಲ್ಲಿ ಬಿ.ನಾಗೇಂದ್ರ ರಾಜೀನಾಮೆ ಕೊಡಿಸಲು, ಜನರ ಹಿತಾಸಕ್ತಿ ಕಾಪಾಡಲು ಬಳ್ಳಾರಿ ಚಲೋ ಹೋರಾಟ ಮಾಡಿ ಯಶಸ್ವಿಯಾದರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ನಾಯಕರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಯತ್ನಾಳರು ತಮ್ಮ ಚಾಳಿ ಬಿಡಬೇಕು. ವಿಜಯಪುರ ನಗರ ಸೌಂದರ್ಯೀಕರಣವಾಗಲು ಕೇವಲ ಯತ್ನಾಳ ಮಾತ್ರ ಕಾರಣವಲ್ಲ, ಅದಕ್ಕೆ ಮಾಜಿ ಸಿಎಂ ಯಡಿಯೂರಪ್ಪನವರ ಉದಾರತೆ, ಸಹಕಾರ ಕಾರಣವಾಗಿದೆ. ಶಾಸಕರಾಗಿ ಯತ್ನಾಳರ ಕೊಡುಗೆ ಎಷ್ಟಿದೆಯೋ ಅದಕ್ಕೆರಡರಷ್ಟು ಯಡಿಯೂರಪ್ಪನವರು ನಿಮಗೆ ನೀಡಿದ ಕೊಡುಗೆಯೂ ಇದೆ. ಆಶ್ರಮ ರಸ್ತೆಯಲ್ಲಿ ಗಣೇಶನ ಪ್ರತಿಷ್ಠಾನ ಕಾರ್ಯಕ್ರಮಕ್ಕೆ ಬಂದ ಯತ್ನಾಳ ದೇವರ ವೇದಿಕೆಯಲ್ಲೂ ರಾಜಕೀಯವಾಗಿ ಮಾತನಾಡಿದ್ದಾರೆ. ಬಿಜೆಪಿ ನಾಯಕರಿಗೆ ಅವಹೇಳನ ಮಾಡುವ ಇವರ ಗುಣಗಳಿಂದಾಗಿ ಬಿಜೆಪಿ ಕಾರ್ಯಕರ್ತರ ಮನಸ್ಸಿಗೆ ನೋವಾಗಲಿದೆ. ಅದು ರಾಜಕೀಯ ಕಾರ್ಯಕ್ರಮವಲ್ಲ. ಆದ್ದರಿಂದ ಗಣೇಶನ ಕಾರ್ಯಕ್ರಮ ಆಯೋಜಕರಿಗೆ ಮನಸ್ಸಿಗೆ ನೋವಾಗಬಾರದು ಎಂದು ನಾನು ಸುಮ್ಮನೆ ಎದ್ದು ಹೋಗಿದ್ದೇನೆ. ಯತ್ನಾಳರಿಗೆ ಬೆಳಗ್ಗೆ ಎದ್ದ ಕೂಡಲೇ ವಿಜಯೇಂದ್ರಾಯ ನಮಃ... ಯಡಿಯೂರಪ್ಪಾಯ ನಮಃ... ಮುಸ್ಲಿಮಾಯ ನಮಃ... ಇದು ಬಿಟ್ಟಿರೆ ಬೇರೆನೂ ಮಾಡಿಲ್ಲ. ಯುವಶಕ್ತಿಯ ಬೆಲೆ ಗೊತ್ತಿದ್ದೇ ಬಿಜೆಪಿ ನಾಯಕರು ಯುವಕರಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ನಿತೀನ ನವೀನ್‌ ಅವರು ರಾಷ್ಟ್ರೀಯ ಅಧ್ಯಕ್ಷರಾದಾಗ ಪ್ರಧಾನಿ ಮೋದಿಯವರೇ ಹೀ ಈಸ್ ಮೈ ಬಾಸ್ ಎಂದು ಒಪ್ಪಿಕೊಂಡರು. ಆದರೆ ನೀವು ವಿಜಯೇಂದ್ರ ಅವರನ್ನು ಏಕೆ ಒಪ್ಪಿಕೊಳ್ಳಲಿಲ್ಲ. ಕೇವಲ ದೇಶದ್ರೋಹಿ ಅಲ್ಪಸಂಖ್ಯಾತರಿಗೆ ಮಾತ್ರ ಮಾತನಾಡಬೇಕು, ಇಡಿ ಮುಸ್ಲಿಂ ಸಮುದಾಯಕ್ಕೆ ಮಾತನಾಡಬಾರದು ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಶಿಕಾಂತ ಕಿಟ್ಟದ, ವಿಜಯ ಜೋಶಿ ಇದ್ದರು.

ಬರ ವಿಚಾರದಲ್ಲಿ ಸರ್ಕಾರದ ಕಾಟಾಚಾರದ ಕೆಲಸ:ಭೀಕರ ಬರದ ಹಿನ್ನೆಲೆ ತಕ್ಷಣವೇ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಗಾಲ ಎಂದು ಘೋಷಿಸಬೇಕು. ರೈತರಿಗೆ ಕಾಂಗ್ರೆಸ್ ಸರ್ಕಾರ ನ್ಯಾಯ ಒದಗಿಸಬೇಕು. ಕಾಂಗ್ರೆಸ್ ಸರ್ಕಾರ ಕಾಟಾಚಾರಕ್ಕೆ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆರೋಪಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಡವರು, ಕೂಲಿ ಕಾರ್ಮಿಕರ ಹಾಗೂ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಜಿಲ್ಲೆಯಲ್ಲಿನ ಬರಗಾಲದ ಬಗ್ಗೆ ಗಮನಹರಿಸದೆ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ‌ ಜಿಲ್ಲೆಯ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರ ಹಾಗೂ ಉಸ್ತುವಾರಿ ಮಂತ್ರಿಗಳ ಸಂಬಂಧ ಹಳಸಿದ್ದರಿಂದ ಪರಿಸ್ಥಿತಿ ಕೆಟ್ಟಿದೆ. ತಕ್ಷಣವೇ ಬರಗಾಲ ಘೋಷಣೆ ಮಾಡುವುದರ ಜತೆಗೆ ಪರಿಹಾರದ ಕುರಿತು ಗಮನಹರಿಸಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಘಾಟನೆಗೆ ಸಜ್ಜಾದ ಇಂದಿರಾ ಕ್ಯಾಂಟೀನ್‌
ಕೋಟಿ ಖರ್ಚಿನ ಸೂಪರ್‌ ಮಾರ್ಕೆಟ್‌ ಪಾಳು!