ಒಕ್ಕಲಿಗ ಸಮುದಾಯ ನಿಂದನೆ: ವ್ಯಕ್ತಿಯ ಗಡಿಪಾರಿಗೆ ಆಗ್ರಹ

KannadaprabhaNewsNetwork |  
Published : Aug 10, 2025, 01:31 AM IST
೭ಕೆಎಂಎನ್‌ಡಿ-೪ಒಕ್ಕಲಿಗ ಸಮುದಾಯವನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಜಿ.ಎಸ್.ಸೀತಾರಾಮ್ ವ್ಯಕ್ತಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಸಂಪಹಳ್ಳಿ ಶಿವಶಂಕರ್, ವಕೀಲರ ಪರಿಷತ್ ರಾಜ್ಯ ಸಮಿತಿ ಸದಸ್ಯ ವಿಶಾಲ್ ರಘು ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಸಮಾಜದಲ್ಲಿ ಇಂತಹ ಒಬ್ಬ ನೀಚ ಬುದ್ಧಿಯವರು ಇದ್ದರೆ ಆ ಸಮಾಜವೇ ದುಷ್ಪರಿಣಾಮ ಎದುರಿಸುತ್ತದೆ. ಆದ್ದರಿಂದ ಆತನ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಒಕ್ಕಲಿಗರ ಸಮುದಾಯವನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಜಿ.ವಿ.ಸೀತಾರಾಮ್ ಎಂಬ ವ್ಯಕ್ತಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದ ರಾಜ್ಯ ಘಟಕದ ಉಪಾಧ್ಯಕ್ಷ ಸಂಪಳ್ಳಿ ಶಿವಶಂಕರ್ ಹಾಗೂ ರಾಜ್ಯ ವಕೀಲರ ಪರಿಷತ್ ಸದಸ್ಯ ವಿಶಾಲ್ ರಘು ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿಯವರಿಗೆ ಮನವಿ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ವಿಶಾಲ್ ರಘು, ಅನ್ನದಾತ ತಾನೂ ಹಸಿದರೂ ಜಗಕ್ಕೆ ಅನ್ನ ಉಣಬಡಿಸುವ ಜೀವದಾತ ಒಕ್ಕಲಿಗ. ಅಂತಹ ಸಮುದಾಯದ ವಿರುದ್ಧ ಅವಾಚ್ಯ ಶಬ್ಧಗಳಿಂದ ಮತ್ತು ಅವಹೇಳನವಾಗಿ ಬೈದು ಜಾತಿ ಜಾತಿಗಳ ಮಧ್ಯೆ ವಿಷ ಬಿತ್ತುವ ಕೆಲಸ ಮಾಡಿದ್ದಾನೆ. ಒಕ್ಕಲಿಗ ಜನಾಂಗ ಮಾತ್ರವಲ್ಲದೆ ಅವರವರ ಜಾತಿಯವರನ್ನು ಗೌರವಿಸಬೇಕು. ಯಾರು ಒಕ್ಕಲುತನ ಮಾಡುತ್ತಾರೋ ಅವರೆಲ್ಲ ಒಕ್ಕಲಿಗರೇ ಎಂದರು.

ಸಮಾಜದಲ್ಲಿ ಇಂತಹ ಒಬ್ಬ ನೀಚ ಬುದ್ಧಿಯವರು ಇದ್ದರೆ ಆ ಸಮಾಜವೇ ದುಷ್ಪರಿಣಾಮ ಎದುರಿಸುತ್ತದೆ. ಆದ್ದರಿಂದ ಆತನ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿದರು.

ನೇಗಿಲ ಯೋಗಿ ಟ್ರಸ್ಟ್ ಅಧ್ಯಕ್ಷ ರಮೇಶ್, ಅಖಿಲ ಕರ್ನಾಟಕ ಒಕ್ಕಲಿಗ ಸಂಘದ ಉಪಾಧ್ಯಕ್ಷ ಕೃಷ್ಣ, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ನಾರಾಯಣ್, ಬಿಜೆಪಿ ನಗರ ಘಟಕ ಅಧ್ಯಕ್ಷ ವಸಂತ್‌ಕುಮಾರ್, ಕರವೇ ಮಹಿಳಾ ಅಧ್ಯಕ್ಷೆ ಸುಜಾತ ಕೃಷ್ಣ. ಮಾಜಿ ನಗರಸಭಾ ಅಧ್ಯಕ್ಷೆ ನಾಗಮ್ಮ, ಸಾತನೂರು ವೇಣುಗೋಪಾಲ್, ನಾರಾಯಣ್, ಬೋರೇಗೌಡ, ಹೊಸಳ್ಳಿ ಚಂದ್ರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ