ಗುರುರಾಜ ಗೌಡೂರು
ಕಳೆದ ಎರಡು ತಿಂಗಳಿಂದ ಮಳೆ ಬಾರದೇ ಜಲಮೂಲಗಳಲ್ಲಿ ನೀರು ಪಾತಾಳದತ್ತ ಮುಖ ಮಾಡಿದೆ. ಕುಡಿಯುವ ನೀರಿಗಾಗಿ ಜೀವ ಸಂಕುಲ ವಿಲವಿಲ ಒದ್ದಾಡುತ್ತಿದೆ. ಬಿತ್ತನೆ ಮಾಡಿದ ಬೆಳೆಗಳು ಬಿಕ್ಕುತ್ತಿದ್ದು, ಮಳೆ ಇಲ್ಲದೇ ಅಡಗಿ ಅಳುತ್ತಿವೆ.
ಮೃಗಶಿರ ಮಳೆ ಬಳಿಕ ಮಳೆ ಬಾರದೇ ಮುಂಗಾರು ಹಂಗಾಮಿನ ಬೆಳೆಗಳು ಸಂಪೂರ್ಣ ಬಾಡಿ ಬಿಕ್ಕುತ್ತಿವೆ. ಮಳೆಗಾಗಿ ರೈತ ಸಂಕುಲ ನಡೆಸಿದ ಪ್ರಾರ್ಥನೆ, ದ್ಯಾನ, ಪೂಜೆ, ದೇವರ ಹೇಳಿಕೆ, ಪೂಜಾರಿಗಳ ಮಾತು ಹುಸಿಯಾಗಿ ನೇಗಿಲಯೋಗಿ ಸಂಕಷ್ಟದ ಕಣ್ಣೀರು ಝರಿಯಾಗಿ ಹರಿಯುತ್ತಿದೆ. ಅನಾದಿ ಕಾಲದಿಂದ ಸದಾ ಹರಿಯುತ್ತಿದ್ದ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳು ಮಳೆಗಾಲದಲ್ಲಿ ಬತ್ತಿ ಬರಿದಾಗಿವೆ. ನೀರು ಇದ್ದರೂ ಮಲೀನಗೊಂಡಿವೆ. ಇನ್ನೂ ಕೊಳವೆಬಾವಿಗಳಲ್ಲಿ ಜಲಮೂಲ ಪಾತಾಳ ಕಂಡಿದೆ. ದಿನವೀಡಿ ನೀರು ಹೊರಹಾಕುತ್ತಿದ್ದ ಕೊಳವೆಬಾವಿಗಳು ಬಂದ್ ಆಗಿವೆ. ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದಾರೆ. ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಬೆಳೆಗಳು ದುಸ್ಥಿತಿಗೀಡಾಗಿವೆ.ಮುಂಗಾರು ಹಂಗಾಮಿನ ಆರಂಭಿಕ ದಿನಗಳಲ್ಲಿ ಭಾರಿ ಮಳೆ ಬಂದು ತಾಲೂಕಿನಲ್ಲಿ ಶೇ.40ರಷ್ಟು ಬಿತ್ತನೆ ಮಾಡಲಾಗಿದೆ. ಪ್ರಸಕ್ತ ಮುಂಗಾರಿನಲ್ಲಿ ಹತ್ತಿ, ತೊಗರಿ, ಸೂರ್ಯಕಾಂತಿ ಬಿತ್ತನೆ ಪ್ರದೇಶ ಹೆಚ್ಚಾಗಿದೆ. ಬಿತ್ತನೆ ಬಳಿಕ ಬೆಳೆ ಉತ್ತಮ ಬೆಳವಣಿಗೆಯಾಗುತ್ತಿತ್ತು. ಶೇ.60ರಷ್ಟು ಬಿತ್ತನೆ ಪ್ರದೇಶದ ರೈತರು ಬೀ, ರಸಗೊಬ್ಬರ ಖರೀದಿಸಿ ಬಿತ್ತನೆಗೆ ಸಜ್ಜಾಗಿದ್ದರು ಮಳೆ ಬಾರದೇ ಬೀಜ, ರಸಗೊಬ್ಬರ ಸಂಗ್ರಹಿಸಿದ ರೈತರ ಸಂಕಷ್ಟ ಹೇಳತೀರದಾಗಿದ್ದು ಅಂಗಡಿಕಾರರು ರೈತರಿಗೆ ಮಾರಾಟ ಮಾಡಿದ ಬಿತ್ತನೆ ಬೀಜಗಳು ವಾಪಸ್ಸು ಪಡೆಯುತ್ತಿಲ್ಲ. ಇನ್ನೂ ಜಾನುವಾರಗಳಿಗೆ ಹಸಿ ಮೇವು ಸಿಗದೇ ಬಡಕಲಾಗಿವೆ. ಒಣ ಸೊಪ್ಪೆ, ಹುಲ್ಲುಕಡ್ಡಿ ಜಾನುವಾರು ಆಹಾರವಾಗಿದೆ.
ಆಷಾಢದ ಗಾಳಿಗೆ ಮೋಡಗಳು ನಿಲ್ಲದೇ ಓಡುತ್ತಿದ್ದು ಮಳೆ ಇಲ್ಲದೇ ಭಾರಿ ಗಾಳಿ ಬಿಸುವ ಜತೆಗೆ ಕೆಲವು ವೇಳೆ ಬಿಚ್ಚಿ ಬೀಳುವ ಬಿಸಿಲು ಭೀಕರ ಬರದ ಲಕ್ಷಣ ಗೋಚರವಾಗಿದೆ.
ಶಿವಪುತ್ರಗೌಡ ನಂದಿಹಾಳ ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ, ಲಿಂಗಸುಗೂರು.
ಬಸವಣೆಪ್ಪ ಕಲಶೆಟ್ಟಿ ಸಹಾಯಕ ಅಯುಕ್ತ, ಲಿಂಗಸುಗೂರು.
ಉಮೇಶ ಇಒ, ತಾಲೂಕು ಪಂಚಾಯಿತಿ, ಲಿಂಗಸುಗೂರು.