ಕನ್ನಡಪ್ರಭ ವಾರ್ತೆ ಶಿರಸಿ
ತಾಲೂಕಿನ ಯಡಳ್ಳಿಯಲ್ಲಿ ಇಂಟರಾಕ್ಟಿವ್ ವರ್ಲ್ಡ್ ಸ್ಕೂಲ್ ಅನಾವರಣಗೊಳಿಸಿ ಸುಕರ್ಮ ಯಾಗ ಶಾಲೆಯ, ಅರಿವು ವೇದಿಕೆಯ ಆಹಾರ, ಆರೋಗ್ಯ, ಆಧ್ಯಾತ್ಮ ಸಮ್ಮೇಳನವನ್ನು ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ, ಅಶ್ವತ್ಥ ವೃಕ್ಷಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಗುರುಕುಲ ಶಿಕ್ಷಣ ದೂರವಾದ ಬಳಿಕ ಅನೇಕ ತೊಂದರೆ ಅನುಭವಿಸಿದ್ದೇವೆ. ಭಾರತದ 7 ಲಕ್ಷ ಗುರುಕುಲವನ್ನು ಮೆಕಾಲೆಯು ಧ್ವಂಸ ಮಾಡಿರಬಹುದು. ಭಾರತದ ಶಿಕ್ಷಣ ಪದ್ಧತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಭಾರತೀಯ ಶಿಕ್ಷಣ ಬೋರ್ಡ್ ರಚನೆ ಮಾಡಿದ್ದು, ಪತಂಜಲಿ ಸಂಸ್ಥೆಯ ನೇತೃತ್ವದಲ್ಲಿ ಪ್ರತಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪತಂಜಲಿ ಯೋಗ ಪೀಠವು ಆಧುನಿಕ ಶಿಕ್ಷಣದ ಜತೆ ಗುರುಕುಲ ಪದ್ಧತಿ ಶಿಕ್ಷಣ ಸಂಸ್ಥೆಯನ್ನು ನಡೆಸಲಿದೆ. ಈ ಬೋರ್ಡ್‌ನಲ್ಲಿ 7 ಕೇಂದ್ರ ಸರ್ಕಾರ ಅಧಿಕಾರಿಗಳು ಹಾಗೂ 7 ಜನ ದಿಗ್ಗಜರು ನಿರ್ದೇಶಕರಾಗಿದ್ದಾರೆ. ಮುಂದಿನ 10 ವರ್ಷಗಳಲ್ಲಿ ಎಲ್ಲ ಕಡೆಗಳಲ್ಲಿಯೂ ಇದನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದರು.ಶಿರಸಿ ಡಿಎಸ್ಪಿ ಗೀತಾ ಪಾಟೀಲ್ ಮಾತನಾಡಿ, ಶಾಲೆ ಎಂದರೆ ಕೇವಲ ಕಟ್ಟಡ ಮಾತ್ರವಲ್ಲ. ಜ್ಞಾನ ನೀಡುವ ಮೂಲಕ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳನ್ನು ನಿರ್ಮಾಣ ಮಾಡುವ ಕಾರ್ಖಾನೆಯಾಗಿದೆ. ಕೆಲವು ಮಹಾನಗರಗಳಲ್ಲಿ ಶಿಕ್ಷಣ ಸಂಸ್ಥೆಗಳು ವಾಣಿಜ್ಯೋದ್ಯಮ ಸಂಸ್ಥೆಯಾಗಿ ಮಾರ್ಪಟ್ಟಿವೆ. ಇದು ಮನೆಗಳಲ್ಲಿ ಪಾಲಕರ ಭಾಷೆ, ಆಚಾರ-ವಿಚಾರ, ವರ್ತನೆಯೂ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಶಿಕ್ಷಣ ತಜ್ಞ ಕಂಜಂಪಾಡಿ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಭಾರತವು ಜಗತ್ತಿಗೆ ವಿಕಾಸವಾದವನ್ನು ಕೊಡುಗೆಯಾಗಿ ನೀಡಿದೆ. ಸಂಸ್ಕೃತ ಶಬ್ಧಗಳು ಸಂಸ್ಕಾರ ನೀಡುವ ಶಕ್ತಿ ಹೊಂದಿವೆ ಎಂದರು.ಸುಕರ್ಮ ಯಾಗ ಶಾಲೆಯ ಮುಖ್ಯಸ್ಥ ವಿ.ಡಿ. ಭಟ್ಟ ಕರಸುಳ್ಳಿ, ಇಂಟರಾಕ್ಟಿವ್ ವರ್ಲ್ಡ್ ಸ್ಕೂಲ್ ನಿರ್ದೇಶಕಿ ಮಮತಾ ಹೆಗಡೆ ಮಾತನಾಡಿದರು.
ವೇದಿಕೆಯಲ್ಲಿ ಸಾಧಕ ಬಾಣಸಿಗರಾದ ವೆಂಕಟರಮಣ ಹೆಗಡೆ ಬೆಂಡೆಗದ್ದೆ ಹಾಗೂ ಶಿವಾನಂದ ದೂಪದಮಠ ಅವರನ್ನು ಗೌರವಿಸಲಾಯಿತು.ಮಾಧ್ಯಮಿಕ ಶಿಕ್ಷಣ ಪ್ರಸಾರ ಸಮಿತಿ ಅಧ್ಯಕ್ಷ ಪ್ರೊ. ಆರ್.ವಿ. ಭಾಗ್ವತ, ಕಾನಗೋಡ ಸೊಸೈಟಿ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೆಕೇರಿ, ಯಡಳ್ಳಿ ಗ್ರಾಪಂ ಅಧ್ಯಕ್ಷ ಭಾಸ್ಕರ ಶೆಟ್ಟಿ ಗಿಡಮಾವಿನಕಟ್ಟೆ, ಇಟರಾಕ್ಟಿವ್ ವರ್ಲ್ಡ್ ಸ್ಕೂಲ್ ಸಂಸ್ಥಾಪಕ ವಿನಯ ಹೆಗಡೆ, ಪದಾಧಿಕಾರಿಗಳಾದ ದಿನೇಶ ಪಟೇಲ ಮತ್ತಿತರರು ಇದ್ದರು. ಜನಾರ್ದನ ಆಚಾರ್ಯ ಶರ್ಮ ಸ್ವಾಗತಿಸಿದರು. ಇಂಟರಾಕ್ಟಿವ್ ವರ್ಲ್ಡ್ ಸ್ಕೂಲ್‌ನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕಿ ಶ್ವೇತಾ ಅವಧಾನಿ ನಿರೂಪಿಸಿದರು. ಸಂಜೆ ಯಕ್ಷ ಗೆಜ್ಜೆ ಮಹಿಳಾ ಕಲಾವಿದರಿಂದ ಕುಂಭಾಸುರ ಕಾಳಗ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.