ಹಣ ಇಲ್ಲದೆ ಕಬ್ಬು ಬೆಳೆಗಾಗರೊಂದಿಗೆ ಸಿಎಂ ಸಭೆ ಮಾಡಿದ್ದು ಯಾವ ಪುರುಷಾರ್ಥಕ್ಕೆ?: ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Oct 29, 2026, 02:15 AM IST
ಬಸವರಾಜ ಬೊಮ್ಮಾಯಿ | Kannada Prabha

ಸಾರಾಂಶ

ರಾಜ್ಯದಲ್ಲಿ ಎಲ್ಲ ಪಿಂಚಣಿಗಳು ಬಂದಾಗಿದ್ದು, ಗೃಹಲಕ್ಷ್ಮೀ ಯೋಜನೆಯು 4 ತಿಂಗಳಿಂದ ನಿಂತಿದೆ. ಗೃಹಜ್ಯೋತಿ ಯೋಜನೆ ಹಾಗೂ ಬಸ್ಸುಗಳ ಡೀಸೆಲ್‌ಗೆ ಸರ್ಕಾರದ ಬಳಿ ಹಣವಿಲ್ಲದೆ ಸಮಸ್ಯೆ ಉಲ್ಬಣಿಸಿದೆ.

ಹಾವೇರಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ, ನಮ್ಮ ಹತ್ತಿರ ಹಣವಿಲ್ಲ, ಸರ್ಕಾರ ದಿವಾಳಿಯಾಗಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದು, ರೈತರಿಗೆ ಸಿಗಬೇಕಾದ ಸರಿಯಾದ ಕಬ್ಬಿನ ಬೆಲೆಯನ್ನು ನೀಡದೆ ಸತ್ಯವನ್ನು ಮುಚ್ಚಿಡಲಾಗುತ್ತಿದೆ. ಹಣ ಇಲ್ಲದೆ ಸಿಎಂ ರೈತರ ಸಭೆ ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರೈತರಿಗೆ ಸಹಾಯ ಮಾಡಲು ಯಾವುದೇ ಬಂಡವಾಳ ಇಲ್ಲದಿದ್ದರೂ ಅವರ ಜತೆ ಸಭೆ ಮಾಡಿ ಅವರಿಗೆ ಚಂಬು ಕೊಟ್ಟು ಹೋಗಿದ್ದು ಯಾವ ಪುರುಷಾರ್ಥಕ್ಕಾಗಿ ? ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಎಲ್ಲ ಪಿಂಚಣಿಗಳು ಬಂದಾಗಿದ್ದು, ಗೃಹಲಕ್ಷ್ಮೀ ಯೋಜನೆಯು 4 ತಿಂಗಳಿಂದ ನಿಂತಿದೆ. ಗ್ರಹಜ್ಯೋತಿ ಯೋಜನೆ ಹಾಗೂ ಬಸ್ಸುಗಳ ಡೀಸೆಲ್‌ಗೆ ಸರ್ಕಾರದ ಬಳಿ ಹಣವಿಲ್ಲದೆ ಸಮಸ್ಯೆ ಉಲ್ಬಣಿಸಿದೆ ಎಂದು ಆರೋಪಿಸಿದರು.

ಎಂಎಸ್‌ಪಿ ದರವನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕೆಂದು ಹೇಳಲು ಸಿಎಂ ಬೆಳಗಾವಿವರೆಗೂ ಬರಬೇಕಾ..? ಎಂಎಸ್‌ಪಿ ₹31 ಇದ್ದರೂ, ಕಾರ್ಖಾನೆ ಮಾಲೀಕರು ಸಕ್ಕರೆ ₹60ಕ್ಕೆ ಮಾರಾಟ ಮಾಡುತ್ತಿದ್ದಾರೆ. ಅದನ್ನು ಸರ್ಕಾರ ರೈತರಿಗೆ ಹೇಳುವುದಿಲ್ಲ.

ಕಬ್ಬಿನ ತೂಕದಲ್ಲಿ ಮ್ಯಾನೇಜ್‌ಮೆಂಟ್ ಅಂತ ಶೇ.8 ರಷ್ಟು ಕಟ್ ಮಾಡುತ್ತಾರೆ. ಅದನ್ನು ಸರಿಪಡಿಸಿದರೂ ಸಮಸ್ಯೆ ಬಗೆ ಹರಿಯುತ್ತದೆ. ಸಕ್ಕರೆ ಸಚಿವರಿಗೆ ಏನೂ ಗೊತ್ತಿಲ್ಲ ಎಂದು ಟೀಕಿಸಿದರು.

ಕಬ್ಬಿಗೆ ಬೇಡಿಕೆ ಹೆಚ್ಚಿದೆ: ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ಕಬ್ಬಿನ ಬೆಳೆ ಕಮ್ಮಿಯಾಗಿದೆ ಸಕ್ಕರೆ ಉತ್ಪಾದನೆ ಕೂಡ ಕಡಿಮೆಯಾಗುತ್ತಿದ್ದು, ಬೇಡಿಕೆ ಹೆಚ್ಚಿದೆ. ಎಥೆನಾಲ್ ಶೇ.100ರಷ್ಟು ಬಳಕೆ ಮಾಡಿದರೆ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದ್ದು, ಸಕ್ಕರೆ ಬೆಲೆ ಖಂಡಿತವಾಗಿ ಹೆಚ್ಚಾಗುತ್ತದೆ. ಹೀಗಾಗಿ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ರೈತರಿಗೆ ಕಬ್ಬಿನ ಸರಿಯಾದ ಬೆಲೆಯನ್ನು ನೀಡಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್