ಕನ್ನಡಪ್ರಭ ವಾರ್ತೆ ಚೇಳೂರು
ಸುಮಾರು ಮೂವತ್ತು ವರ್ಷಗಳಷ್ಟು ಹಳೆಯದಾದ ಈ ಕಟ್ಟಡವು ಸಂಪೂರ್ಣ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಸೋರುತ್ತಾ, ಸೀಮೆಂಟ್ ಮತ್ತು ಗೋಡೆಗಳ ಭಾಗಗಳು ಕಿತ್ತುಬೀಳುತ್ತಿವೆ. ಆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯಾವುದೇ ಕ್ರಮ ಕೈಗೊಂಡಿಲ್ಲ.
ಉದುರುತ್ತಿರುವ ಸಿಮೆಂಟ್ ಪ್ಲಾಸ್ಟರ್ಮಳೆಗಾಲದಲ್ಲಿ ಕಟ್ಟಡದ ಪ್ರತಿ ಕೋಣೆಯ ಮೇಲ್ಛಾವಣಿ ಸೋರುತ್ತವೆ. ವಿದ್ಯಾರ್ಥಿಗಳು ಮಲಗುವ ಕೊಠಡಿಗಳ ಗೋಡೆಗಳಿಂದ ಸಿಮೆಂಟ್ ಪ್ಲಾಸ್ಟರ್ ಪದರಗಳು ಕಳಚಿ ಬೀಳುತ್ತಿದ್ದು, ಯಾವಾಗ ದೊಡ್ಡ ಅನಾಹುತ ಸಂಭವಿಸುತ್ತದೋ ಎಂಬ ಭೀತಿ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ‘ನಾವಿಲ್ಲಿ ಓದಲು ಬಂದಿದ್ದೇವೆ, ಆದರೆ ಪ್ರತಿದಿನವೂ ಜೀವಭಯದಲ್ಲಿ ಇರಬೇಕಾಗಿದೆ. ನಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲ’ ಎಂದು ವಿದ್ಯಾರ್ಥಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಸರ್ಕಾರದ ಮತ್ತು ಸಂಬಂಧಪಟ್ಟ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ವಿದ್ಯಾರ್ಥಿಗಳ ಜೀವನಕ್ಕೆ ಅಪಾಯ ತರುವ ಈ ಶಿಥಿಲ ಕಟ್ಟಡವನ್ನು ತಕ್ಷಣ ದುರಸ್ತಿಪಡಿಸಬೇಕು ಅಥವಾ ಸೂಕ್ತ ಸ್ಥಳಕ್ಕೆ ವಸತಿ ನಿಲಯವನ್ನು ವರ್ಗಾಯಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.