ಕ್ರೈಂ))) ಮಹಿಳೆ ಅತ್ಯಾಚಾರ ನಡೆಸಿ ಕೊಲೆ: ಮುಂದುವರಿದ ತನಿಖೆ

KannadaprabhaNewsNetwork |  
Published : Jun 01, 2025, 01:33 AM IST
ಕ್ರೈಂ | Kannada Prabha

ಸಾರಾಂಶ

ಸಕಲೇಶಪುರ ಮೂಲದ ಸುಂದರಿ (35) ಮೃತದೇಹ, ಮೇ 29ರಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸೊಂಟಕ್ಕೆ ಕೆಂಪು ಕಲ್ಲುಗಳನ್ನು ಕಟ್ಟಿ ಸುಂದರಿ ಅವರನ್ನು ತೋಟದ ಕೆರೆಗೆ ಎಸೆಯಲಾಗಿತ್ತು. ಮೃತದೇಹ ಕೊಳೆತ ನಂತರವೇ ಕೆರೆಗೆ ಎಸೆಯಲಾಗಿರುವ ವಿಚಾರವೂ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಉಳ್ಳಾಲ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮೊಂಟೆಪದವು ಸಮೀಪ ಖಾಸಗಿ ಕೆರೆಯಲ್ಲಿ ಸೊಂಟಕ್ಕೆ ಕೆಂಪು ಕಲ್ಲುಗಳನ್ನು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯನ್ನು, ಅತ್ಯಾಚಾರ ಎಸಗಿ ಕೊಲೆ ನಡೆಸಿರುವುದಾಗಿ ದೃಢಪಟ್ಟಿದೆ. ಮಹಿಳೆಯ ಒಳ ಉಡುಪುಗಳು ಹೊರಗೆ ಸಿಕ್ಕಿದ್ದು, ವಾಸವಿದ್ದ ಬಾಡಿಗೆ ಮನೆಯಲ್ಲಿ ರಕ್ತದ ಕಲೆಗಳು ಕಂಡುಬಂದಿದೆ.ಸಕಲೇಶಪುರ ಮೂಲದ ಸುಂದರಿ (35) ಮೃತದೇಹ, ಮೇ 29ರಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸೊಂಟಕ್ಕೆ ಕೆಂಪು ಕಲ್ಲುಗಳನ್ನು ಕಟ್ಟಿ ಸುಂದರಿ ಅವರನ್ನು ತೋಟದ ಕೆರೆಗೆ ಎಸೆಯಲಾಗಿತ್ತು. ಮೃತದೇಹ ಕೊಳೆತ ನಂತರವೇ ಕೆರೆಗೆ ಎಸೆಯಲಾಗಿರುವ ವಿಚಾರವೂ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಒಂದು ಕಾಲಿನಲ್ಲಿ ಬಲವಿಲ್ಲದೇ ಇದ್ದ ಇವರು, ಮನೆಗಳಲ್ಲಿ ಕೆಲಸ ನಿರ್ವಹಿಸಿ ಜೀವನ ನಿರ್ವಹಿಸುತ್ತಿದ್ದರು. ಇವರ ಜೊತೆಗಿದ್ದ ಹಾಸನ ಮೂಲದ ವ್ಯಕ್ತಿ 15 ದಿನಗಳ ಹಿಂದೆ ಊರಿಗೆ ತೆರಳಿದ್ದರು. ಪೊಲೀಸರು ಆತನನ್ನು ವಿಚಾರಿಸಿದಾಗ ಮಂಗಳೂರಿಗೆ ಬಾರದೇ ಇರುವುದನ್ನು ಖಚಿತಪಡಿಸಿದ್ದನು.

ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದುದರಿಂದಾಗಿ ಸಾಕ್ಷ್ಯಗಳು ಸಿಗದೇ, ಪೋಸ್ಟ್‌ ಮಾರ್ಟಂ ಟಾಕ್ಸಿಕೋಲಜಿ ಪರೀಕ್ಷೆಗೆ ಇಲಾಖೆ ಮುಂದಾಗಿದೆ. ಇದು ಫಾರೆನ್ಸಿಕ್ ಟಾಕ್ಸಿಕೋಲಜಿಯಲ್ಲಿನ ಒಂದು ವಿಶಿಷ್ಟ ಪರೀಕ್ಷೆಯಾಗಿದ್ದು, ಮೃತರ ದೇಹದ ದ್ರವಗಳು ಮತ್ತು ಘನ ಪದಾರ್ಥಗಳಲ್ಲಿನ ಮದ್ದುಗಳು, ಮದ್ಯ ಮತ್ತು ಇತರ ವಿಷಕಾರಿ ದ್ರವ್ಯಗಳ ಅಸ್ತಿತ್ವ ಸಾಬೀತುಪಡಿಸುವಿಕೆ ಈ ಪರೀಕ್ಷೆ ಹೊಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ