ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನವಾಗಿ ಬೆಳೆದಿದ್ದು ಮಹಿಳೆಯರ ಸಾಧನೆ

KannadaprabhaNewsNetwork | Published : Mar 27, 2025 1:09 AM

ಸಾರಾಂಶ

ಕಡೂರು, ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿ ಸಮಾನವಾಗಿ ಬೆಳೆದಿದ್ದು ಮಹಿಳೆಯರ ಈ ಸಾಧನೆ ಇದೇ ರೀತಿ ಮುಂದುವರಿಯಲಿ ಎಂದು ಸಿಎಂಎಸ್‍ಎಸ್‍ಎಸ್‍ನ ಹಾಸನ ನಿರ್ದೇಶಕ ಫಾದರ್ ಅಲ್ವಿನ್ ಡಿಸೋಜಾ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಫಾದರ್ ಅಲ್ವಿನ್ ಡಿಸೋಜಾ

ಕನ್ನಡಪ್ರಭ ವಾರ್ತೆ, ಕಡೂರು

ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿ ಸಮಾನವಾಗಿ ಬೆಳೆದಿದ್ದು ಮಹಿಳೆಯರ ಈ ಸಾಧನೆ ಇದೇ ರೀತಿ ಮುಂದುವರಿಯಲಿ ಎಂದು ಸಿಎಂಎಸ್‍ಎಸ್‍ಎಸ್‍ನ ಹಾಸನ ನಿರ್ದೇಶಕ ಫಾದರ್ ಅಲ್ವಿನ್ ಡಿಸೋಜಾ ಹೇಳಿದರು.ಮಂಗಳವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಮರಿಯಾ ನಿವಾಸದಲ್ಲಿ ಸಿಎಂಎಸ್‍ಎಸ್‍ಎಸ್ ಹಾಸನ ಹಾಗೂ ಜೀವನ್ ಜ್ಯೋತಿ ಒಕ್ಕೂಟದ ಮಹಿಳೆಯರು ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ಯಾವುದೇ ಒಂದು ನಿರ್ದಿಷ್ಟ ಕ್ಷೇತ್ರಕ್ಕೆ ಮೀಸಲಾಗಿರದೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿ ದ್ದಾರೆ. ಮಹಿಳೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸಾಧನೆ ಮಾಡಿ ಪ್ರಪಂಚದಲ್ಲಿಯೇ ತನ್ನ ಸ್ಥಾನವನ್ನು ಸುಭದ್ರವಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ. ಇಂತಹ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಸಂಘ ಸಂಸ್ಥೆಗಳು ಮತ್ತು ಸರ್ಕಾರಗಳಿಂದ ಆಗಬೇಕಾಗಿದೆ ಎಂದರು. ಹನಿಕೇರ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಶೈಲಾ ಮೋಹನ್ ಮಾತನಾಡಿ, ಮಹಿಳೆ ಎಂದರೆ ಒಂದು ಶಕ್ತಿ ಬಿಂದು, ನಗುವೆ ಅವಳಿಗೆ ಆಭರಣ ಮಹಿಳೆ ಎಂದಿಗೂ ಇನ್ನೊಬ್ಬರಿಂದ ಬೇಡುವವಳಲ್ಲ ಕೊಡುವವಳು. ಆಧುನಿಕ ಪ್ರಪಂಚದಲ್ಲಿ ಆರ್ಥಿಕವಾಗಿ ಸ್ವಾವಲಂಭಿಯಾಗಿದ್ದಾಳೆ. ಸಾವಿರಾರು ಮಹಿಳೆಯರಿಗೆ ಉದ್ಯೋಗ ನೀಡುವಂತಹ ಸಂಸ್ಥೆಗಳನ್ನು ತೆರೆದಿದ್ದು ಉದ್ಯೋಗ ಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ ಎಂದರೆ ತಪ್ಪಾಗಲಾರದು ಎಂದರು.ಕಡೂರು ಧರ್ಮ ಕೇಂದ್ರದ ಗುರು ಫಾದರ್ ಜೋಸೆಪ್, ಮಹಿಳೆಯರು ಸ್ವಾವಲಂಭಿ ಬದುಕು ಕಲಿತಿದ್ದು ಮನೆಯ ಕೆಲಸಗಳನ್ನೆಲ್ಲ ನಿಭಾಯಿಸುತ್ತಾ ಗೃಹ ಉಪಯೋಗಿ ಕಸುಬುಗಳಿಂದ ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದರು. ಕಡೂರು ಜೆಸಿಐನ ಆಶಾ ಶ್ರೀನಿವಾಸ್, ಪ್ರೇಮಜ್ಯೋತಿ ಶಾಲೆ ಮುಖ್ಯಶಿಕ್ಷಕಿ ಅನಿತಾ, ಚಕ್ರವರ್ತಿ ಪಿಯು ಕಾಲೇಜಿನ ಉಪನ್ಯಾಸಕಿ ಉಷಾದೇವಿ, ಜೀವನ್ ಜ್ಯೋತಿ ಒಕ್ಕೂಟಗಳ ಕಾರ್ಯದರ್ಶಿ ಕುಮಾರಿ ಸೋನಿ ಮಾತನಾಡಿದರು. ಸಂಸ್ಥೆ ನೇತ್ರಾ ಮತ್ತು ಕಲ್ಪನಾ ಸೇರಿದಂತೆ ಒಕ್ಕೂಟಗಳ 150 ಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದರು.25ಕೆಕೆಡಿಯು3.

ಕಡೂರು ಮರಿಯ ನಿವಾಸದಲ್ಲಿ ಸಿಎಂಎಸ್‍ಎಸ್‍ಎಸ್‍ನ ಮಹಿಳಾ ಒಕ್ಕೂಟ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಫಾದರ್ ಅಲ್ವಿನ್ ಡಿಸೋಜಾ ಮಾತನಾಡಿದರು.

Share this article