ಗಜೇಂದ್ರಗಡ: ಮಹಿಳೆಯರ ಕೊಡುಗೆ, ಸಾಧನೆ ಪರಿಚಯಿಸುವುದರ ಜತೆಗೆ ಶಿಕ್ಷಣ, ರಾಜಕೀಯ, ಕೃಷಿ ಸೇರಿ ಪ್ರಮುಖ ಅಂಶಗಳ ಜಾಗೃತಿ ಮೂಡಿಸುವ ಕಾರ್ಯವನ್ನು ಅಕ್ಕನ ಬಳಗ ಕಳೆದ ೮ ವರ್ಷದಿಂದ ಮಾಡುತ್ತಿದೆ ಎಂದು ಅಕ್ಕನ ಬಳಗದ ಅಧ್ಯಕ್ಷೆ ಎಂದು ಸಂಯುಕ್ತಾ ಬಂಡಿ ತಿಳಿಸಿದರು.
ಮಹಿಳೆಯರು ಕುಟುಂಬದ ಜವಾಬ್ದಾರಿ ನೆರವೇರಿಸುವುದರ ಜತೆಗೆ ದೇಶದ ಉನ್ನತ ಸ್ಥಾನವನ್ನು ಸಹ ಅಲಂಕರಿಸಿದ್ದಾರೆ. ಹೀಗಾಗಿ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ನಮಗಿರುವ ಅವಕಾಶಗಳನ್ನು ಪಡೆಯುವ ದೆಸೆಯಲ್ಲಿ ಅಕ್ಕನ ಬಳಗವು ಮಹಿಳೆಯರ ನೋವು, ನಲಿವು ಆಲಿಸುತ್ತಾ ಮಹಿಳೆಯರ ಸಂಘಟನೆಯನ್ನು ಮಾಡುತ್ತಿದೆ ಎಂದರು.ಪತ್ರಿಬಸವೇಶ್ವರ ಅನುಭವ ಮಂಟಪ ಅಧ್ಯಕ್ಷೆ ಪ್ರೇಮಾ ಅಂಗಡಿ ಮಾತನಾಡಿ, ಮಹಿಳೆಯರಿಗೆ ಸಮಾನ ಸ್ವಾತಂತ್ರ್ಯ ಸಿಗಬೇಕು. ಅವಳು ಎಲ್ಲರಂತೆ ಸಮಾನಳು ಎಂದು ನಡೆದ ಚಳವಳಿ, ಕ್ರಾಂತಿ ಇತಿಹಾಸದ ಪುಟದಲ್ಲಿ ದಾಖಲಾಗಿವೆ. ಅಕ್ಕಮಹಾದೇವಿ ಹಾಗೂ ಬಸವಣ್ಣನವರು ಸೇರಿ ಅನೇಕ ಬಸವಾದಿ ಪ್ರಮಥರ ಆಶಯವಾಗಿತ್ತು ಎಂದ ಅವರು, ಸಂಸ್ಕಾರ ಎಂಬುದು ದೇಶದ ಸಮಾನಾರ್ಥಕ ಪದವಾಗಿದೆ. ಹೀಗಾಗಿ ಮಹಿಳೆಯರು ಸಂಸ್ಕಾರ ಬಿಟ್ಟು ಸಾಧನೆ ಮಾಡಿದರೆ ಅದಕ್ಕೆ ಅರ್ಥವಿಲ್ಲ. ಸಂಸ್ಕಾರದೊಂದಿಗೆ ಸಾಧನೆ ಮಾಡಿದರೆ ಜೀವನಕ್ಕೆ ಹಾಗೂ ಸಾಧನೆಗೆ ಅರ್ಥ ಬರಲಿದೆ ಎಂದರು.ಮಹಿಳಾ ಆರಕ್ಷಕರಾದ ಮಾಲತಿ ಶಿಗಿಹಳ್ಳಿ, ಮಂಜುಳಾ ಕೌಜಗೇರಿ, ಭಾಗ್ಯ ಆಲೂರ, ಲಕ್ಷ್ಮೀ ದೊಡ್ಡಮನಿ, ರಜೀಯಾ ಬನ್ನಿಗೋಳ ಅವರನ್ನು ಸನ್ಮಾನಿಸಿದ ಬಳಿಕ ಅರುಣೋದಯ ಕಲಾ ತಂಡದಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.ಈ ವೇಳೆ ಸುವರ್ಣಾ ನಂದಿಹಾಳ, ಬಸಮ್ಮ ಸಾಲಿಮಠ, ರಾಜಮ್ಮ ಹೂಲಿ, ಗೀತಾ ಕಂಬಳ್ಯಾಳ, ಲೀಲಾ ಸವಣೂರ, ವಿಜಯಲಕ್ಷ್ಮಿ ಚಟ್ಟೇರ, ಸುಜಾತಾ ಮೆಣಸಗಿ, ರಾಜೇಶ್ವರಿ ಅರಹುಣಸಿ, ರೇಖಾ ವೀರಾಪೂರ, ಸುಕನ್ಯಾ ಹೊಗರಿ, ಸುಜಾತಾ ಅಪ್ಪಣವರ, ವನಿತಾ ಘಾಟಗೆ, ರಶ್ಮಿ ಸಜ್ಜನ, ಮಂಜುಳಾ ಕೋರಧಾನ್ಯಮಠ, ಸುಮಾ ಲಕ್ಕುಂಡಿಮಠ, ಕೀರ್ತಿ ಕೊಟಗಿ, ಶಿವಲೀಲಾ ಸಿಂಹಾಸನ, ಸುಜಾತ ಮುದಗಲ್, ಸಂಗೀತಾ ಗಾಣಗೇರ ಸೇರಿ ಇತರರು ಇದ್ದರು.