ಬುಕ್ಕಾಪಟ್ಟಣ ಗ್ರಾಮದಲ್ಲಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳ ಉದ್ಘಾಟನೆ

KannadaprabhaNewsNetwork |  
Published : Dec 10, 2025, 12:15 AM IST
೯ಶಿರಾ೩: ಶಿರಾ ತಾಲೂಕಿನ ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬನ್ನಿ ನಗರದ ಬಳಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಉದ್ಘಾಟಿಸಿದರು. | Kannada Prabha

ಸಾರಾಂಶ

ಜನ ಐದು ವರ್ಷಕ್ಕೊಮ್ಮೆ ನಮ್ಮನ್ನು ಆರಿಸಿ ಕಳಿಸುತ್ತಾರೆ. ನಾವು ಮಾಡಿದ ಕೆಲಸ ಅವರಿಗೆ ಇಷ್ಟವಾದರೆ ಮತ್ತೊಮ್ಮೆ ನಮ್ಮನ್ನು ನವೀಕರಣ ಮಾಡಿಕೊಳ್ಳುತ್ತಾರೆ ಇಲ್ಲದಿದ್ದರೆ ತಿರಸ್ಕರಿಸುತ್ತಾರೆ ಎಂದು ಶಾಸಕ ಸಿ ಬಿ ಸುರೇಶ್ ಬಾಬುರವರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿರಾ

ಜನ ಐದು ವರ್ಷಕ್ಕೊಮ್ಮೆ ನಮ್ಮನ್ನು ಆರಿಸಿ ಕಳಿಸುತ್ತಾರೆ. ನಾವು ಮಾಡಿದ ಕೆಲಸ ಅವರಿಗೆ ಇಷ್ಟವಾದರೆ ಮತ್ತೊಮ್ಮೆ ನಮ್ಮನ್ನು ನವೀಕರಣ ಮಾಡಿಕೊಳ್ಳುತ್ತಾರೆ ಇಲ್ಲದಿದ್ದರೆ ತಿರಸ್ಕರಿಸುತ್ತಾರೆ ಎಂದು ಶಾಸಕ ಸಿ ಬಿ ಸುರೇಶ್ ಬಾಬುರವರು ಅಭಿಪ್ರಾಯಪಟ್ಟರು.

ತಾಲೂಕಿನ ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬನ್ನಿ ನಗರದ ಬಳಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು. ಜನ ಕೊಟ್ಟ ಅಧಿಕಾರ ಶಾಶ್ವತವಲ್ಲ ಅಧಿಕಾರವಧಿಯಲ್ಲಿ ನಾವು ಮಾಡಿದ ಕೆಲಸಗಳೇ ಶಾಶ್ವತವಾಗಿ ನಮ್ಮ ಹೆಸರನ್ನು ಉಳಿಸುತ್ತವೆ. ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರು ಅಂತಹ ಒಂದು ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ. ತಮ್ಮ ಅನುದಾನದ ಅಡಿಯಲ್ಲಿ ನರೇಗಾ ಕಾಮಗಾರಿ ಅಡಿಯಲ್ಲಿ ಹಾಗೂ ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ಸಂಪನ್ಮೂಲಗಳನ್ನು ಬಳಸಿಕೊಂಡು ವಾಣಿಜ್ಯ ಮಳಿಗೆಗಳನ್ನು ನೂತನವಾಗಿ ನಿರ್ಮಿಸಿ ಪಂಚಾಯಿತಿಗೆ ಶಾಶ್ವತವಾಗಿ ಆದಾಯ ಬರುವಂತೆ ಮಾಡುವ ಉತ್ತಮ ಕಾರ್ಯ ಮಾಡಿದ್ದಾರೆ ಕಟ್ಟಡದ ಮೇಲ್ಭಾಗದಲ್ಲಿ ಮತ್ತಷ್ಟು ಮಳಿಗೆಗಳನ್ನು ನಿರ್ಮಿಸಲು ಶಾಸಕರ ಅನುದಾನದ ಅಡಿಯಲ್ಲಿ ೧೦ ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿದರು.

ಬುಕ್ಕಾಪಟ್ಟಣ ಹೋಬಳಿಯ ಅಭಿವೃದ್ಧಿಗೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಸಿಂಹ ಪಾಲನ್ನು ನೀಡುತ್ತಿದ್ದು ಯಾವುದೇ ಕಾರಣಕ್ಕೂ ತಾರತಮ್ಯವನ್ನು ಎಸಗಿಲ್ಲ ಹೋಬಳಿಯ ಅಗತ್ಯಗಳ ಅಭಿವೃದ್ಧಿಗಾಗಿ ೩೭ ಕೋಟಿಗಳನ್ನು ಒದಗಿಸಿದ್ದು ಬುಕ್ಕಾಪಟ್ಟಣ ಹಾಗಲವಾಡಿ ಮುಖ್ಯ ರಸ್ತೆ, ಹೂಯಿಲ್ ದೊರೆ ಯಿಂದ ಮಣ್ಣಮ್ಮನ ದೇವಸ್ಥಾನ ಮುಖ್ಯರಸ್ತೆ, ಹೊನ್ನೇನಹಳ್ಳಿ ಇಂದ ಬೆಂಚೆ ಗೇಟ್ ವರೆಗೆ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ, ಬೆಂಚಿ ಗೇಟ್ನಿಂದ ರಾಮಲಿಂಗಪುರವರೆಗೆ ರಸ್ತೆ ಅಭಿವೃದ್ಧಿ ಹಾಗೂ ಬುಕ್ಕಾಪಟ್ಟಣ ತಾವರೆಕೆರೆ ಮುಖ್ಯರಸ್ತೆ, ಗಳನ್ನು ಮುಂದಿನ ದಿನಗಳಲ್ಲಿ ವಿಶೇಷ ಅನುದಾನದ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಶಾಂತಕುಮಾರ್, ಹೊಸ ಪಾಳ್ಯ ಸತ್ಯನಾರಾಯಣ, ಜೈಪ್ರಕಾಶ್, ಬಿ ಆರ್ ಎಂ ಸತ್ಯನಾರಾಯಣ, ಗ್ರಾ.ಪಂ. ಅಧ್ಯಕ್ಷ ಮುಜಾಹಿದ್, ಉಪಾಧ್ಯಕ್ಷೆ ಗಂಗಮ್ಮ, ಪಿ ಡಿ ಓ ಶಿವಶಂಕರ್, ಸದಸ್ಯರಾದ ದಿವಾಕರ್, ಬಿ ಎಂ ಕಾಂತರಾಜು, ಯಶೋದಮ್ಮ, ಜ್ಯೋತಿ, ಸೌಭಾಗ್ಯಮ್ಮ, ಬಸವರಾಜು, ರಮೇಶ್, ನೂರ್ ಆಯೇಶಾ, ನಾಗರತ್ನಮ್ಮ, ಗಂಗರಾಜು, ಹೇಮಲತಾ ಕಾಂತರಾಜು, ಕಮಲಮ್ಮ, ಗುರುರಾಜು, ನರಸಿಂಹಯ್ಯ, ಆಟೋ ಕಾಂತರಾಜು, ಸೇರಿದಂತೆ ಹಲವರು ಹಾಜರಿದ್ದರು.

೯ಶಿರಾ೩: ಶಿರಾ ತಾಲೂಕಿನ ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬನ್ನಿ ನಗರದ ಬಳಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಲವರ ಕೈಯಲ್ಲಿ ಮಾತ್ರ ಎಐ ಶಕ್ತಿ ಕೇಂದ್ರೀಕೃತ: ಅಂಬಾ ಕಕ್
ಮಹಿಳಾ ದೌರ್ಜನ್ಯ ತಡೆಗೆ ಕಾನೂನು ಜಾಗೃತಿ ಅಗತ್ಯ