ಅಮೃತ್-2.0 ಗಡುವು ಮುಗಿದರೂ ಕಾಮಗಾರಿ ಅರೆಬರೆ

KannadaprabhaNewsNetwork |  
Published : Nov 18, 2026, 01:15 AM IST
17ಕೆಪಿಎಂಎಸ್ಕೆ01: | Kannada Prabha

ಸಾರಾಂಶ

ಪಟ್ಟಣದ 23 ವಾರ್ಡ್‌ಗಳಿಗೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಸುವ ಭರವಸೆಯೊಂದಿಗೆ ಆರಂಭಿಸ ಲಾದ ₹45 ಕೋಟಿ ವೆಚ್ಚದ ಅಮೃತ್ - 2.0 ಯೋಜನೆ ಈಗ ಗುತ್ತಿಗೆದಾರರ ವಿಳಂಬದ ಸುಳಿಯಲ್ಲಿ ಸಿಲುಕಿದೆ. ಕಾಮಗಾರಿ ಪೂರ್ಣಗೊಳಿಸಲು ನಿಗದಿಪಡಿಸಿದ್ದ ಗಡುವು ಜುಲೈ ತಿಂಗಳಲ್ಲೇ ಮುಕ್ತಾಯಗೊಂಡಿದ್ದರೂ ಯೋಜನೆ ಮಾತ್ರ ಇನ್ನೂ ಅರೆಬರೆ ಯಾಗಿದೆ. ಇನ್ನು ಕೆಲವೊಂದು ವಾರ್ಡ್‌ಗಳಲ್ಲಿ ಕಾಮಗಾರಿಯೇ ಆರಂಭವಾಗಿಲ್ಲ. ಪೈಪ್‌ಲೈನ್‌ಗಾಗಿ ಅಗೆದ ರಸ್ತೆಗಳೂ ದುರಸ್ತಿ ಯಾಗದೆ ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಇಂದರಪಾಶ ಚಿಂಚರಕಿ

ಕನ್ನಡಪ್ರಭ ವಾರ್ತೆ ಮಸ್ಕಿ

ಪಟ್ಟಣದ 23 ವಾರ್ಡ್‌ಗಳಿಗೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಸುವ ಭರವಸೆಯೊಂದಿಗೆ ಆರಂಭಿಸ ಲಾದ ₹45 ಕೋಟಿ ವೆಚ್ಚದ ಅಮೃತ್ - 2.0 ಯೋಜನೆ ಈಗ ಗುತ್ತಿಗೆದಾರರ ವಿಳಂಬದ ಸುಳಿಯಲ್ಲಿ ಸಿಲುಕಿದೆ. ಕಾಮಗಾರಿ ಪೂರ್ಣಗೊಳಿಸಲು ನಿಗದಿಪಡಿಸಿದ್ದ ಗಡುವು ಜುಲೈ ತಿಂಗಳಲ್ಲೇ ಮುಕ್ತಾಯಗೊಂಡಿದ್ದರೂ ಯೋಜನೆ ಮಾತ್ರ ಇನ್ನೂ ಅರೆಬರೆ ಯಾಗಿದೆ. ಇನ್ನು ಕೆಲವೊಂದು ವಾರ್ಡ್‌ಗಳಲ್ಲಿ ಕಾಮಗಾರಿಯೇ ಆರಂಭವಾಗಿಲ್ಲ. ಪೈಪ್‌ಲೈನ್‌ಗಾಗಿ ಅಗೆದ ರಸ್ತೆಗಳೂ ದುರಸ್ತಿ ಯಾಗದೆ ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಪಟ್ಟಣದ 23 ವಾರ್ಡ್ ಗಳಲ್ಲಿ ವಾಸಿಸುವ ಜನರಿಗೆ ದಿನದ 24 ಗಂಟೆಯೂ ಕುಡಿಯುವ ನೀರು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಯ ಗುತ್ತಿಗೆಯನ್ನು ಬಿಹಾರ ಮೂಲದ ನಳಂದ ಎಂ.ಜಿ.ಕಾಂ. ಕಂಪನಿ ಪಡೆದಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಮತ್ತೆ ಆರು ತಿಂಗಳ ಕಾಲಾವಕಾಶ ಕೋರಿದ್ದಾರೆ ಎನ್ನಲಾಗಿದೆ. ಆದರೆ, ಪಟ್ಟಣದ ಜನರಿಗೆ ಇನ್ನೂ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ದೊರೆಯುವ ಭಾಗ್ಯ ಇಲ್ಲದಂತಾಗಿದೆ.

ಕೆಲ ವಾರ್ಡ್‌ಗಳಿಗೆ ಇನ್ನೂ ಕಾಮಗಾರಿ ಭಾಗ್ಯವಿಲ್ಲ! ಪಟ್ಟಣದ ಒಟ್ಟು 23 ವಾರ್ಡ್ಗಳ ಪೈಕಿ ಕೆಲವೊಂದು ವಾರ್ಡ್ಗಳಲ್ಲಿ ಕಾಮಗಾರಿ ಆರಂಭವಾಗಿಲ್ಲ. ಕೆಲವು ಬಡಾವಣೆಗಳಲ್ಲಿ ಪೈಪ್ಲೈನ್ಅಳವಡಿಕೆ ಪೂರ್ಣಗೊಂಡಿದ್ದರೂ ಮನೆಮನೆಗೆ ನೀರಿನ ಸಂಪರ್ಕ ಕಲ್ಪಿ ಸುವ ಕಾರ್ಯ ಬಾಕಿಯಿದೆ. ಹೀಗಾಗಿ ಯೋಜನೆಯ ಉದ್ದೇಶಿತ ಸೌಲಭ್ಯ ಜನರಿಗೆ ತಲುಪುವಲ್ಲಿ ವಿಳಂಬವಾಗುತ್ತಿದೆ.

ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆ ಜಾರಿಯಲ್ಲಿದ್ದರೂ ಕಾಮಗಾರಿಯ ವೇಗ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ರಸ್ತೆ ಅಗೆದು ಬಿಟ್ಟ ಗುತ್ತಿಗೆದಾರರು!: ಪೈಪ್ಲೈನ್ ಅಳವಡಿಕೆಗಾಗಿ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ರಸ್ತೆಗಳು ಅಗೆದಿದ್ದು, ಕಾಮಗಾರಿ ಮುಗಿದ ಬಳಿಕ ಅವುಗಳನ್ನು ಹಿಂದಿನ ಸ್ಥಿತಿಗೆ ಮರುಸ್ಥಾಪಿಸುವ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ರಸ್ತೆಗಳಲ್ಲಿ ಗುಂಡಿಗಳು, ಮಣ್ಣಿನ ರಾಶಿ ಹಾಗೂ ಕೆಸರು ತುಂಬಿಕೊಂಡಿವೆ. ಮಳೆ ಬಂದರೆ ಸಂಚಾರ ದುಸ್ತರವಾಗುತ್ತಿದ್ದು, ಬಿಸಿಲಿನಲ್ಲಿ ಧೂಳಿನ ಸಮಸ್ಯೆ ಎದುರಾಗುತ್ತಿದೆ ಎಂದು ಬಡಾವಣೆಯ ಜನರು ಆರೋಪಿಸಿದ್ದಾರೆ.

ಎಲಿಗಾರ ಓಣಿಯಲ್ಲಿ ಕೆಸರು; ಜನರಿಗೆ ಸಂಕಷ್ಟ: ಪಟ್ಟಣದ 10, 12 ಮತ್ತು 14ನೇ ವಾರ್ಡ್‌ಗಳನ್ನು ಸಂಪರ್ಕಿಸುವ ಎಲಿಗಾರ ಓಣಿಯ ಮುಖ್ಯರಸ್ತೆಯ ಪರಿಸ್ಥಿತಿ ಗಂಭೀರವಾಗಿದೆ. ಪೈಪ್ಲೈನ್ಕಾಮಗಾರಿ ಬಳಿಕ ರಸ್ತೆ ದುರಸ್ತಿ ಮಾಡದಿರುವುದರಿಂದ ಗುಂಡಿ ಗಳಲ್ಲಿ ಚರಂಡಿ ನೀರು ನಿಂತು ಕೆಸರುಮಯ ವಾತಾವರಣ ನಿರ್ಮಾಣವಾಗಿದೆ.

ಪಾದಚಾರಿಗಳು ಹಾಗೂ ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ. ಸೊಳ್ಳೆಗಳ ಕಾಟದ ಭೀತಿಯೂ ನಿವಾಸಿ ಗಳನ್ನು ಕಾಡುತ್ತಿದೆ. ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಮೂರು ನೋಟಿಸ್‌ ನೀಡಿದರೂ ಎಚ್ಚೆತ್ತುಕೊಳ್ಳದ ಗುತ್ತಿಗೆದಾರರು?: ಕಾಮಗಾರಿಯ ವಿಳಂಬ ಮತ್ತು ಗುಣಮಟ್ಟದ ಕುರಿತು ಜಲಮಂಡಳಿ ಅಧಿಕಾರಿಗಳು ಗುತ್ತಿಗೆದಾರರಿಗೆ ಈಗಾಗಲೇ ಮೂರು ಬಾರಿ ನೋಟಿಸ್ನೀಡಿದ್ದಾರೆ ಎನ್ನಲಾಗಿದೆ. ಆದರೂ ಕಾಮಗಾರಿಯಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ. ಒಂದು ತಿಂಗಳೊಳಗೆ ತೃಪ್ತಿಕರ ಪ್ರಗತಿ ಸಾಧಿಸದಿದ್ದರೆ ಗುತ್ತಿಗೆದಾರ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಜನರ ತೆರಿಗೆ ಹಣಕ್ಕೆ ಸಾರ್ಥಕತೆ ಯಾವಾಗ?: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದ್ದ ಅಮೃತ್-2.0 ಯೋಜನೆಯೇ ಈಗ ಜನರಿಗೆ ರಸ್ತೆ ಸಮಸ್ಯೆ ತಂದೊಡ್ಡಿದೆ. ಯೋಜನೆ ಪೂರ್ಣಗೊಳಿಸುವ ಹೊಣೆ ಗುತ್ತಿಗೆದಾರ ರದ್ದಾದರೂ ಕಾಮಗಾರಿಯ ಮೇಲ್ವಿಚಾರಣೆ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸುವ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಯ ಮೇಲಿದೆ. ಬಾಕಿ ಕಾಮಗಾರಿ ಪೂರ್ಣಗೊಳಿಸುವುದರ ಜತೆಗೆ ಅಗೆದ ರಸ್ತೆಗಳ ದುರಸ್ತಿಗೂ ಆದ್ಯತೆ ನೀಡಬೇಕಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಈಗಲಾದರೂ ಗುತ್ತಿಗೆದಾರರು ಆದಷ್ಟು ಬೇಗ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಪಟ್ಟಣದ ಜನರಿಗೆ ದಿನದ 24 ಗಂಟೆಯೂ ನೀರನ್ನು ಒದಗಿಸಲು ಮುಂದಾಗುತ್ತಾರ ಕಾದುನೋಡಬೇಕಿದೆ.

ಮಸ್ಕಿ ಪಟ್ಟಣದಲ್ಲಿ ನಡೆಯುತ್ತಿರುವ ಅಮೃತ 2.0, ಯೋಜನೆ ಕಾಮಗಾರಿಗೆ ಇನ್ನು ಕೆಲವೊಂದು ವಾರ್ಡ್‌ಗಳಲ್ಲಿ ಪೂರ್ಣ ಗೊಂಡಿಲ್ಲ. ಆದ್ದರಿಂದ ಗುತ್ತಿಗೆದಾರರಿಗೆ ಮಾರ್ಚ್ ವೇಳೆಗೆ ಮುಗಿಸುವಂತೆ ಮೇಲಾಧಿಕಾರಿಗಳು ಸೂಚಿಸಿದ್ದು, ಗುತ್ತಿಗೆದಾರರು ಸಹ ಕಾಮಗಾರಿ ಪೂರ್ಣಗೊಳಿಸುವುದಾಗಿ ಒಪ್ಪಿದ್ದಾರೆ ಎಂದು ರಾಯಚೂರು ಜಲ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಗುರುರಾಜ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯರ್ಥಿಗಳ ಗೆಲುವಿಗೆ ಈಗಾಗಲೇ ಕಾರ್ಯತಂತ್ರ ಸಿದ್ಧ: ಶಾಸಕ ಕೆ.ಎಂ.ಉದಯ್
ಕಾಡಾನೆಗಳ ಸ್ಥಳಾಂತರಕ್ಕೆ ಬೃಹತ್ ಕಾರ್ಯಾಚರಣೆ