ಚಿಕ್ಕಮಗಳೂರಿನ ಕಾಳಿದಾಸ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ
ಕನ್ನಡಪ್ರಭವಾರ್ತೆ, ಚಿಕ್ಕಮಗಳೂರುವಿಶ್ವದ ಪ್ರತಿಯೊಂದು ಜೀವರಾಶಿಗೂ ಪ್ರಕೃತಿ ಸಂಪತ್ತು ಅವಶ್ಯಕ. ಮನುಷ್ಯ ಸಂಪದ್ಭರಿತ ಪರಿಸರವನ್ನು ಉಳಿಸುವ ಕಾರ್ಯ ದೊಂದಿಗೆ ಮುಂದಿನ ಪೀಳಿಗೆಗೆ ಸ್ವಚ್ಛಂದ ವಾತಾವರಣ ನೀಡಲು ಸಾಧ್ಯ ಎಂದು ನಗರಸಭಾ ಮಾಜಿ ಅಧ್ಯಕ್ಷ ಕೆ.ಎಸ್.ಪುಷ್ಪರಾಜ್ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಳಿದಾಸರನಗರ ಕ್ಷೇಮಾಭಿವೃದ್ದಿ ಸಂಘದಿಂದ ವಾರ್ಡಿನ ಮನೆ ಗಳ ಮುಂಭಾಗದಲ್ಲಿ ಹೊಂಗೆ, ನೇರಳೆ, ಪನ್ನೇರಳೆ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.ಸ್ವಚ್ಛಂದ ಗಾಳಿ, ಹಚ್ಚ ಹಸಿರಿನ ವಾತಾವರಣ ಮಾನವನ ಆರೋಗ್ಯವನ್ನು ಇನ್ನಷ್ಟು ವೃದ್ಧಿಗೊಳಿಸಲು ಸಹಕಾರಿ. ಪ್ರಪಂಚದಲ್ಲಿ ಜನಿಸಿದ ಪ್ರತಿಯೊಬ್ಬರು ಮನೆಗೊಂದು ಸಸಿ ನೆಟ್ಟು ಪೋಷಿಸಬೇಕು ಎಂದ ಅವರು, ಉತ್ತಮ ಜೀವನಕ್ಕೆ ಆದ್ಯತೆ ಕೊಡುವ ರೀತಿಯಲ್ಲೇ ಪರಿಸರ ಬೆಳವಣಿಗೆ ಹೆಚ್ಚು ಆದ್ಯತೆ ನೀಡುವುದು ಅತಿಮುಖ್ಯ ಎಂದರು.ಮಲೆನಾಡು ಪ್ರದೇಶವನ್ನು ಒಳಗೊಂಡಿರುವ ಚಿಕ್ಕಮಗಳೂರು ಎಲ್ಲೆಲ್ಲೂ ಬೃಹದಾಕಾರದ ಮರಗಳು ಹಬ್ಬಿಕೊಂಡಿರುವ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪರಿಸರಾಸಕ್ತರು ಭೇಟಿ ನೀಡುವ ಮೂಲಕ ಪ್ರಕೃತಿ ಸೊಬಗನ್ನು ಸವಿಯುತ್ತಿದ್ದಾರೆ. ಹಾಗಾಗಿ ಇಂದಿನ ಯುವ ಪೀಳಿಗೆ ಹೆಚ್ಚೆಚ್ಚು ಪರಿಸರ ಪ್ರಜ್ಞೆ ಮೂಡಿಸಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.ಕಾಳಿದಾಸರನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಳೆಯ ಅಭಾವ, ಅತಿಯಾದ ತಾಪಮಾನ ಏರಿಕೆ ಕಾಣುತ್ತಿದ್ದೇವೆ. ಇದಕ್ಕೆಲ್ಲಾ ಮೂಲ ಕಾರಣ ಉತ್ತಮ ಪರಿಸರ ಕಳೆದುಕೊಳ್ಳುವ ಸ್ಥಿತಿಯಲ್ಲಿ ನಾವೆದ್ದೇವೆ. ನಾಗರಿಕ ಸಮಾಜ ಇವುಗಳನ್ನು ಅರಿತು ಮನೆಗೊಂದು ಸಸಿ ನೆಡುವ ಮೂಲಕ ಸಂರಕ್ಷಣೆಗೆ ಮುಂದಾಗಬೇಕು ಎಂದರು.ಪ್ರಸ್ತುತ ವಾರ್ಡಿನ ನೂರಕ್ಕೂ ಹೆಚ್ಚು ಮನೆಗಳ ಮುಂಭಾಗ ವಿವಿಧ ತಳಿಗಳ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಸಿಗಳನ್ನು ದಿನನಿತ್ಯ ಪೋಷಿಸುವ ಜವಾಬ್ದಾರಿ ಆಯಾ ನಿವಾಸಿಗಳು ಮಾಡಬೇಕು. ಮುಂದೊಂದು ದಿನ ನೆಟ್ಟಂಥಹ ಸಸಿ ಹೆಮ್ಮರವಾಗಿ ಬೆಳೆದು ಮುಂದಿನ ಪೀಳಿಗೆ ಮಕ್ಕಳಿಗೆ ಕಾಯುವ ಜೊತೆಗೆ ಪೂರ್ವಜರ ನೆನಪು ಮರುಕಳಿಸುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಲಲಿತಾ ರವಿನಾಯ್ಕ್, ಜೆ.ರಾಜು, ಸಂಘದ ಉಪಾಧ್ಯಕ್ಷ ಉದಯ್ ಶಂಕರ್, ಕಾರ್ಯದರ್ಶಿ ಚೇತನ್, ಖಜಾಂಚಿ ರಾಜು, ಸಹ ಕಾರ್ಯದರ್ಶಿ ಕಿರಣ್, ಮಾಜಿ ಅಧ್ಯಕ್ಷ ಧರ್ಮಪ್ಪ, ಸದಸ್ಯರಾದ ಮಲ್ಲಿಕಾರ್ಜುನ್, ಗಣೇಶ್, ಮನು, ನಿವಾಸಿಗಳಾದ ಮಿಥುನ್, ಹರ್ಷ, ಪ್ರಶಾಂತ್ ಹಾಜರಿದ್ದರು.
ಪೋಟೋ ಫೈಲ್ ನೇಮ್ 6 ಕೆಸಿಕೆಎಂ 1ಚಿಕ್ಕಮಗಳೂರಿನ ಕಾಳಿದಾಸ ನಗರದಲ್ಲಿ ಭಾನುವಾರ ವಿಶ್ವ ಪರಿಸರ ದಿನಾಚರಣೆ ನಡೆಯಿತು. ಪುಷ್ಪರಾಜ್, ಲಲಿತಾ ರವಿನಾಯ್ಕ್, ಜೆ. ರಾಜು, ಜಯಪ್ರಕಾಶ್ ಇದ್ದರು.