ದುಶ್ಚಟಗಳ ದಾಸರಾಗುತ್ತಿರುವ ಯುವಕರು

KannadaprabhaNewsNetwork |  
Published : Oct 06, 2025, 01:01 AM IST
5ಕೆಕೆಆರ್4:ಯಲಬುರ್ಗಾ ತಾಲೂಕಿನ ಜಿ.ವೀರಾಪುರದಿಂದ ಮೂರು ದಿನಗಳ ಕಾಲ ಸದ್ಭಾವನ ಪಾದಯಾತ್ರೆ ಮೂಲಕ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಜನ ಜಾಗೃತಿ ಆರಂಭಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಯುವಕರ ಪಾತ್ರ ಹಿರಿದು. ಆದರೆ ಇತ್ತೀಚಿನ ದಿನಗಳಲ್ಲಿ ಮಧ್ಯ ವ್ಯಸನಿಗಳಾಗಿ ಆರೋಗ್ಯ ಕೆಡಿಸಿಕೊಳ್ಳುತ್ತಿರುವುದು ದುರ್ದೈವ ಸಂಗತಿ

ಯಲಬುರ್ಗಾ: ಹಳ್ಳಿಗಳಲ್ಲಿ ಹೆಚ್ಚಾಗಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.ಇದರಿಂದ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಜಿ.ವೀರಾಪುರ ಗ್ರಾಮದಿಂದ ಭಾನುವಾರ ಆರಂಭವಾದ ಮೂರು ದಿನಗಳ ಕಾಲ ಸದ್ಭಾವನ ಪಾದಯಾತ್ರೆ ಮೂಲಕ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಜನ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಯುವಕರ ಪಾತ್ರ ಹಿರಿದು. ಆದರೆ ಇತ್ತೀಚಿನ ದಿನಗಳಲ್ಲಿ ಮಧ್ಯ ವ್ಯಸನಿಗಳಾಗಿ ಆರೋಗ್ಯ ಕೆಡಿಸಿಕೊಳ್ಳುತ್ತಿರುವುದು ದುರ್ದೈವ ಸಂಗತಿ. ಸಮಾಜದಲ್ಲಿನ ದುಶ್ಚಟ ಹೋಗಲಾಡಿಸಲು ಗುಳೇದಗುಡ್ಡದ ಅಭಿನವ ಶ್ರೀಒಪ್ಪತ್ತೇಶ್ವರ ಸ್ವಾಮೀಜಿ, ದೊಡವಾಡದ ಶ್ರೀಜಡೇಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಕ್ಕಳ್ಳಿಯ ಶ್ರೀಶಿವಾನಂದ ಸ್ವಾಮೀಜಿಗಳ ಜೊತೆಯಾಗಿ ಸದ್ಭಾವನಾ ಯಾತ್ರೆ ಆರಂಭಿಸಲಾಗಿದೆ. ಯಾತ್ರೆ ಮೂರು ದಿನಗಳ ಕಾಲ ಗೆದಗೇರಿ, ಕುಡಗುಂಟಿ, ಚಿಕ್ಕಮ್ಯಾಗೇರಿ, ಬುದಗುಂಪಾ ಕ್ರಾಸ್, ರ್ಯಾವಣಕಿ, ಇರಕಲ್ಲಗಡ, ಕಲ್ಲಅಬ್ಬಿಗೇರಿ, ಕೂಕನಪಳ್ಳಿ,ಅಗಳಕೇರಿ, ಹಿಟ್ನಾಳ ಕ್ರಾಸ್ ಮುಖಾಂತರ ಸುಕ್ಷೇತ್ರ ಹುಲಿಗಿ ದೇವಸ್ಥಾನದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.

ಈ ಸಂದರ್ಭ ಪ್ರಮುಖರಾದ ರುದ್ರಪ್ಪ ಕೊಪ್ಪದ, ಬಸಪ್ಪ ಬೆದವಟ್ಟಿ, ದೊಡ್ಡನಗೌಡ ಗೌಡ್ರ, ಶೇಖಪ್ಪ ಬಳಿಗಾರ ಶರಣಪ್ಪ ಇಟಗಿ, ಶರಣಪ್ಪ ನಾಗೂರ, ಶರಣಪ್ಪ ಕೊಪ್ಪದ, ಶಿವಪ್ಪ ಹೊಸ್ಮನಿ, ಈಶಪ್ಪ ಹೋಳಿ, ಚಂದ್ರಶೇಖರ ಸಾಹುಕಾರ, ಮೈಲಾರಪ್ಪ ಹೋಳಿ, ಶಂಭುಲಿಂಗಯ್ಯ ಹಿರೇಮಠ, ಶರಣಪ್ಪ ಗೋಣಿ ಸೇರಿದಂತೆ ಇತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ