ಕಾಲ ಬದಲಾದಂತೆ ಜಗತ್ತು ಬದಲಾಗಿದೆ. ಜಗತ್ತು ಬದಲಾದಂತೆ ಪ್ರತೀ ಮನೆಯ ಸ್ವರೂಪ ಬದಲಾಗಿದೆ. ಮನೆಗಳು ಬದಲಾದಂತೆ ಮನೆಯೊಳಗಿನ ವಸ್ತುಗಳೂ ಹೊಸ ರೂಪ ಪಡೆದುಕೊಂಡಿವೆ. ಆ ಪ್ರಕಾರವೇ ಆಧುನಿಕ ಮನೆಗಳಿಗಾಗಿ ಭಾರತದ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾದ ಏಸರ್ ಕಂಪನಿಯು ಎಐ ಗೂಗಲ್ ಟಿವಿಗಳನ್ನು ಬಿಡುಗಡೆ ಮಾಡುತ್ತಿದೆ. ಈ ಎಐ ಸಾಮರ್ಥ್ಯ ಇರುವ ಕಂಪನಿಯ ಆಕರ್ಷಕ ಟಿವಿ ಏಸರ್ ವಿ ಪ್ರೊ ಕ್ಯೂಎಲ್‌ಇಡಿ ಟಿವಿ.
4ಕೆ ಕ್ಯೂಎಲ್‌ಇಡಿ ಡಿಸ್‌ಪ್ಲೇ ಇರುವುದರಿಂದ, ವಿಶೇಷವಾಗಿ ಡ್ಯುಯಲ್ ಎಐ ಪ್ರೊಸೆಸರ್ ಇರುವುದರಿಂದ ಅತ್ಯುತ್ತಮ ಗುಣಮಟ್ಟದ ವಿಡಿಯೋ ಚಿತ್ರಣವನ್ನು ಕಾಣಬಹುದು. ಸಿನಿಮಾ ವೀಕ್ಷಣೆಗೆ ಮಾತ್ರವಲ್ಲದೆ ಗೇಮಿಂಗ್‌ಗೂ ಸೂಕ್ತವಾಗುವಂತೆ ಇದನ್ನು ರೂಪಿಸಲಾಗಿದೆ. ಎಐ ಆಪ್ಟಿಮೈಸೇಷನ್ ಇರುವುದರಿಂದ ದೃಶ್ಯಗಳನ್ನು ಮತ್ತಷ್ಟು ಸೊಗಸಾಗಿ ಕಾಣಿಸುವಂತೆ ಮಾಡುತ್ತದೆ.
ಎಐ ಈ ಕಾಲದ ಅತ್ಯಗತ್ಯ ತಂತ್ರಜ್ಞಾನವಾಗಿ ರೂಪುಗೊಂಡಿದ್ದು, ಪ್ರತಿಯೊಂದು ವಸ್ತುಗಳಲ್ಲಿಯೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವತ್ತ ಕಂಪನಿಗಳು ಮುಂದಾಗಿವೆ. ಏಸರ್ ಕೂಡ ಎಐ ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ಬಳಸಿಕೊಂಡಿದೆ. ಇದು ಗೂಗಲ್ ಟಿವಿಯಾಗಿದ್ದು, ಗೂಗಲ್ ಅಸಿಸ್ಟೆಂಟ್ ಮೂಲಕವೇ ಈ ಟಿವಿಯ ಕಾರ್ಯನಿರ್ವಹಣೆ ನಿಯಂತ್ರಿಸಬಹುದಾಗಿದೆ. ಅದು ಗ್ರಾಹಕರಿಗೆ ಹೆಚ್ಚಿನ ಅನುಕೂಲತೆಯನ್ನು ನೀಡುತ್ತದೆ.50 ಇಂಚಿನ ಕ್ಯೂಎಲ್‌ಇಡಿ ಟಿವಿಯಲ್ಲಿ 2 ಜಿಬಿ ರ್‍ಯಾಮ್, 16 ಸ್ಟೋರೇಜ್ ಇದ್ದು, ಈ ಸೌಲಭ್ಯವು ಈ ಟಿವಿ ವೇಗವಾಗಿ ಇಂಟರ್‌ನೆಟ್ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಆಂಡ್ರಾಯ್ಡ್ 14 ಗೂಗಲ್ ಟಿವಿಯಲ್ಲಿ ತ್ವರಿತವಾಗಿ ಕೆಲಸ ಮಾಡುತ್ತದೆ.
ಗೂಗಲ್ ಅಸಿಸ್ಟೆಂಟ್, ಗೂಗಲ್‌ಕಾಸ್ಟ್ ಮತ್ತು 10,000+ ಆಪ್‌ಗಳು ಲಭ್ಯವಿವೆ. 30 ವ್ಯಾಟ್ ಕ್ವಾಂಟಮ್ ಹೈ-ಫೈ ಸ್ಪೀಕರ್‌ಗಳು ಡಾಲ್ಬಿ ಅಟ್ಮಾಸ್ ಮತ್ತು ಡಾಲ್ಬಿ ಆಡಿಯೋ ವ್ಯವಸ್ಥೆ ಒದಗಿಸುತ್ತಿದ್ದು, ಅದ್ಭುತ ಧ್ವನಿ ವ್ಯವಸ್ಥೆ ಒದಗಿಸುತ್ತದೆ. ಸಣ್ಣ ಕೊಠಡಿಗಳಿಗೆ ಇಷ್ಟೇ ಸಾಕಾಗುತ್ತದೆ. ಆದರೆ ದೊಡ್ಡ ಕೊಠಡಿಗಳಿಗೆ ಸೌಂಡ್‌ಬಾರ್ ಒಳ್ಳೆಯದು.ಸಾಮಾನ್ಯವಾಗಿ ಈಗ ಮಧ್ಯಮವರ್ಗದ ಕುಟುಂಬಗಳು ಕಡಿಮೆ ದರಕ್ಕೆ ಉತ್ತಮ ಗುಣಮಟ್ಟದ ಟಿವಿಗಳನ್ನು ಬಯಸುತ್ತವೆ. ಆ ವರ್ಗವನ್ನು ಗಮನದಲ್ಲಿಟ್ಟುಕೊಂಡು ಈ ಟಿವಿಯನ್ನು ಏಸರ್ ಕಂಪನಿಯು ಬಿಡುಗಡೆ ಮಾಡಿದೆ. ಹಲವಾರು ಅತ್ಯುತ್ತಮ ಫೀಚರ್‌ಗಳಿದ್ದರೂ ಇದನ್ನು ಆದಷ್ಟು ಕೈಗೆಟಕುವ ಬೆಲೆಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ. ಅದೇ ಇದರ ಪ್ಲಸ್ ಪಾಯಿಂಟ್ ಆಗಿದೆ. ಏಸರ್ ವಿ ಪ್ರೊ ಕ್ಯೂಎಲ್‌ಇಡಿ ಗೂಗಲ್ ಟಿವಿಯ 50 ಇಂಚಿನ ಟಿವಿ ಈಗ ಆನ್‌ಲೈನ್‌ನಲ್ಲಿ 28,999 ರೂಪಾಯಿಗೆ ಲಭ್ಯವಿದೆ. ಕಡಿಮೆ ಬಜೆಟ್‌ನಲ್ಲಿ ಉತ್ತಮ ಟಿವಿ ಬಯಸುವ ಮಂದಿ ಈ ಕಡೆ ಗಮನ ಹರಿಸಬಹುದಾಗಿದೆ.