ಓವರ್ ಲೋಡ್ ಟಿಪ್ಪರ್ ಸಂಚಾರ ಗುಂಡಿ ಬೀಳಲು ಪ್ರಮುಖ ಕಾರಣ । ಅಮಾಯಕರ ಪ್ರಾಣ ಹೋಗುವ ಮುನ್ನ ಎಚ್ಚೆತ್ತುಕೊಳ್ಳುವುದೇ ತಾಲೂಕು ಆಡಳಿತ?
ತಾಲೂಕಿನ ಹಿರೀಕಾಟಿ ಗೇಟ್ ಅಪಘಾತದ ತಾಣವಾಗಿದ್ದು, ಮತ್ತಷ್ಟು ಅವಘಡಗಳು ಸಂಭವಿಸುವ ಮುನ್ನ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳದಿದ್ದರೆ ಅಮಾಯಕರ ಪ್ರಾಣ ಹೋಗುವುದು ಖಚಿತ. ಮೈಸೂರು-ಊಟಿ ಹೆದ್ದಾರಿಯ ಹಿರೀಕಾಟಿ ಗೇಟ್‌ನ ಬಳಿ ಮಳೆ ಬಂದಾಗ, ಕಬಿನಿ ನೀರಿನ ಪೈಪ್ ಒಡೆದು ಹೋದಾಗ ಹಾಗೂ ಗೇಟ್ ಬಳಿಯ ಕ್ರಷರ್ ನ ವೇಸ್ಟ್ ನೀರು ಹೆದ್ದಾರಿಯಲ್ಲಿ ನಿಂತು ಗುಂಡಿಗಳ ತಾಣವಾಗಿದೆ.
ಗುಂಡಿ ಬೀಳಲು ಮೇಲ್ಕಂಡ ಸಮಸ್ಯೆಗಳ ಜೊತೆಗೆ ಹಿರೀಕಾಟಿಯ ಕ್ರಷರ್‌ನಿಂದ ಎಂ.ಸ್ಯಾಂಡ್, ಜಲ್ಲಿಕಲ್ಲುಗಳನ್ನು ತುಂಬಿ ಮಿತಿಮೀರಿದ ಬಾರ ಹೊತ್ತು ಬರುವ ಟಿಪ್ಪರ್ ಗಳೂ ಕಾರಣವಾಗಿವೆ. ಹೆದ್ದಾರಿಯಲ್ಲಿ ಟಿಪ್ಪರ್‌ಗಳ ಈ ಓವರ್ ಲೋಡ್ ಓಡಾಟದಿಂದ ರಸ್ತೆಗೆ ಬಿದ್ದ ಜಲ್ಲಿ ಕಲ್ಲುಗಳಿಂದ ಬೈಕ್‌ಗಳು ಜಾರಿ ಬಿದ್ದು ಸವಾರರು ಗಾಯಗೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಅಲ್ಲದೆ , ರಸ್ತೆಯಲ್ಲಾ ಧೂಳುಮಯವಾಗಿ ಪ್ರಯಾಣಿಕರಿಗೆ ಓಡಾಡಲೂ ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.ಕೇಳಿದ್ರೆ ಅವಾಜ್:
--------------------
-ವಿ.ಸಿ. ವನರಾಜು, ಬೇಗೂರು ಸರ್ಕಲ್ ಇನ್ಸ್‌ಪೆಕ್ಟರ್
ʼಹಿರೀಕಾಟಿ ಗೇಟ್ ಬಳಿ ಓವರ್ ಲೋಡ್ ಟಿಪ್ಪರ್‌ಗಳಿಗೆ ಕಡಿವಾಣ ಹಾಕಬೇಕು. ಕ್ರಷರ್ ವೇಸ್ಟ್ ನೀರು/ಸ್ಲರಿ ಬಸ್ ಶೆಲ್ಟರ್ ಹಿಂಬದಿ ಬರುವುದನ್ನು ನಿಲ್ಲಿಸಬೇಕು. ಓವರ್ ಲೋಡ್ ಸಂಚಾರಕ್ಕೆ ಬ್ರೇಕ್ ಹಾಕುವ ತನಕ ಗುಂಡಿ ಬೀಳುವುದನ್ನು ತಡೆಯಲು ಸಾಧ್ಯವಿಲ್ಲ. ಪೊಲೀಸರು ಆ ಕೆಲಸ ಮಾಡುವವರೆಗೂ ಹಿರೀಕಾಟಿ ಗೇಟ್ ಅಪಘಾತ ವಲಯವಾಗಿಯೇ ಉಳಿಯಲಿದೆ’
-
ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗೇಟ್(ಮೈಸೂರು-ಊಟಿ ಹೆದ್ದಾರಿ) ಮುಂದೆ ಗುಂಡಿಗಳು ಬಿದ್ದಿರುವುದು.
ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗೇಟ್ ಮುಂದಿನ ಹೆದ್ದಾರಿಯಲ್ಲಿ ಬ್ಯಾರಿಕ್ಯಾಡ್ ರಸ್ತೆಯ ಮಧ್ಯೆ ಇರುವುದು.