ಒಂಟಿ ತೋಳಗಳ ಬೆನ್ನು ಹತ್ತಿದವರು: ವಿಜ್ಞಾನ ಲೋಕದ ವಿಸ್ಮಯಕಾರಿ ಸಂಗತಿಗಳ ಹೂರಣ

KannadaprabhaNewsNetwork |  
Published : Oct 16, 2025, 02:00 AM IST
30 | Kannada Prabha

ಸಾರಾಂಶ

ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ ಸುನೀಲ್‌ ಬಾರ್ಕೂರ್‌ ಅವರ ‘ಒಂಟಿ ತೋಳಗಳ ಬೆನ್ನು ಹತ್ತಿದವರು’ ಕೃತಿಯು ವಿಜ್ಞಾನ ಲೋಕದ ವಿಸ್ಮಯಕಾರಿ ಸಂಗತಿಗಳ ಹೂರಣ. ಈ ಕೃತಿಯಲ್ಲಿ 25 ಲೇಖನಗಳು  ವೈವಿಧ್ಯಮಯ ವಿಷಯಗಳ ಬಗ್ಗೆ ಲೇಖಕರು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.

 ಮೈಸೂರು :  ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ ಸುನೀಲ್‌ ಬಾರ್ಕೂರ್‌ ಅವರ ‘ಒಂಟಿ ತೋಳಗಳ ಬೆನ್ನು ಹತ್ತಿದವರು’ ಕೃತಿಯು ವಿಜ್ಞಾನ ಲೋಕದ ವಿಸ್ಮಯಕಾರಿ ಸಂಗತಿಗಳ ಹೂರಣ.

ಹದ್ದಿನ ಕಣ್ಣಿನ ಹಿಂದೆ, ಕೃತಕ ಬುದ್ಧಿಮತ್ತೆಯ ವರ್ಲ್ಡ್‌ ಕಪ್, ನಿಲ್ಲುವುದೇ ಕುಣಿಯುವ ಕಪ್ಪೆಗಳ ತಿಲ್ಲಾನ?, ರಣಧೀರನ ಸ್ಫೂರ್ತಿಗೆ ಗೋಲ್ಡನ್‌ ಜುಬಿಲಿ, ಸೊಳ್ಳೆಮೀನಿನ ಮುಂದೊಂದು ಪ್ರಶ್ನಾರ್ಥಕ, ತಾಪಮಾನ ಇಳಿಕೆಗೊಂದು ಶಾರ್ಟ್‌ ಕಟ್‌, ಹೀಗೊಂದು ಬೃಹದ್ಗಜಪ್ರಸವ, ಗುಂಪಿನಲ್ಲಿ ಕಳೆದು ಹೋಗುವ ಮುನ್ನ.., ಮೊದಲ ಎಂಆರ್‌ಎೖ ಚಿತ್ರಕ್ಕೆ ಸುವರ್ಣ ಚೌಕಟ್ಟು, ನಾವಾಡದ ಮಾತನ್ನು ಕದ್ದಾಲಿಸುವವರು, ಆಗಸದ ಟ್ರಾಫಿಕ್‌ ಜಾಮ್‌ಗೆ ಸಿಗಲಿದೆಯೇ ಉತ್ತರ, ಚಕೋರರಿಗೆ ಚಂದ್ರಮನ ಮಣ್ಣಿನಾ ಚಿಂತೆ, ಕೀಟಗಳು ಹೇಳಿದ ಕಾರಣ, ವಿಷದ ಔಷಧಿಗೆ ಬೇಕಿದೆ ಟ್ರೀಟ್‌ಮೆಂಟು, ಶೂನ್ಯ ನೀರಿನ ದಿನವೆಂಬ ತೂಗುಗತ್ತಿ, ಬಣ್ಣದ ಲೋಕ, ಒಂಟಿ ತೋಳಗಳ ಬೆನ್ನು ಹತ್ತಿ, ಪಾದರಕ್ಷೆಗಳ ಅಳತೆಗೋಲಿನ ಸುತ್ತ, ಎವರೆಸ್ಟ್‌ ಚಾರಣದ ಕಥೆ ವ್ಯಥೆ, ಕ್ರೀಡಾಂಗಣಕ್ಕೂ ಕಾಲಿಟ್ಟ ಕೃತಕ ಬುದ್ಧಿಮತ್ತೆ, ಮುಳುಗುತ್ತಿದೆ ಮರುಭೂಮಿಯ ಹಡಗು, ವೇಷಧಾರಿ ಲಕ್ಷಣವೆಂಬ ಮನೋಸ್ಥಿತಿ, ಸೇತುವೆ ನೆನಪಿಸಿದ ಪರಿಸರದ ಪಾಠ, ಸಮುದ್ರಕಳೆ ತರಬಲ್ಲದೇ ಕಡಲಮಕ್ಕಳ ಬಾಳಲ್ಲಿ ಹೊಸಕಳೆ, ವಾಣಿ ಎಂಬ ಭಾರತೀಯ ಪ್ರಾದೇಶಿಕ ಭಾಷಾ ಸೊಗಡಿನ ಸೇಫ್‌ ಲಾಕರ್‌- ಇವು ಈ ಸಂಕಲನದಲ್ಲಿರುವ 25 ಲೇಖನಗಳು. ಕ್ರೀಡೆ, ವಿಜ್ಞಾನ, ಪರಿಸರ, ಕೃತಕ ಬುದ್ಧಿಮತ್ತೆ, ಭಾಷೆ- ಹೀಗೆ ನಾನಾ ವೈವಿಧ್ಯಮಯ ವಿಷಯಗಳ ಬಗ್ಗೆ ಲೇಖಕರು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಹದ್ದಿನ ಕಣ್ಣು- ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಅಳವಡಿಸಿಕೊಂಡಿರುವ ತಂತ್ರಜ್ಞಾನ ಕುರಿತದ್ದು. ಮಳೆಗಾಲದಲ್ಲಿ ಹಾಜರಾಗುವ ಕಪ್ಪೆಗಳ ನರ್ತನವನ್ನು ಜಾಕಿಚಾನ್‌ ನೃತ್ಯಕ್ಕೆ ಹೋಲಿಸಿ, ಸ್ವಾರಸ್ಯಕರವಾಗಿ ಬರೆದಿದ್ದಾರೆ. ಜೊತೆಗೆ ಕೊಟ್ಟಿಗೆಹಾರ ಕಪ್ಪೆಗಳನ್ನು ಉಳಿಸಿಕೊಳ್ಳಬೇಕಾದ ಬಗ್ಗೆಯೂ ಗಮನ ಸೆಳೆದಿದ್ದಾರೆ.

ಸ್ಟಾಕ್‌ ಹೋಂ ಸಿಂಡ್ರೋಮ್‌ಗೂ ಕನ್ನಡದ ರಣಧೀರ ಚಿತ್ರಕ್ಕೂ ಇರುವ ಸಂಬಂಧದ ವಿವರಣೆ ಕೂಡ ಚೆನ್ನಾಗಿದೆ. ಗುಂಪಿನಲ್ಲಿ ಕಳೆದು ಹೋಗುವ ಮುನ್ನಾ ‘ಮಾಬ್‌ ಮೆಂಟಾಲಿಟಿ’ ಕುರಿತದ್ದು. ಯುವತಿಯ ಕೊಲೆ ಪ್ರಕರಣ ಭೇದಿಸಲು ನೆರವಾಗುವ ಕೀಟಗಳು ಹೇಳಿದ ಕಾರಣ ಲೇಖನವೂ ಸ್ವಾರಸ್ಯಕರವಾಗಿದೆ. ಹೀಗೆ ಎಲ್ಲಾ ಲೇಖನಗಳು ಕೂಡ ಮಾಹಿತಿಯಿಂದ ಕೂಡಿದ್ದು, ಓದುಗರಿಗೆ ಆಧುನಿಕ ವಿಜ್ಞಾನ- ತಂತ್ರಜ್ಞಾನ ಕುರಿತು ಜ್ಞಾನಾರ್ಜನೆಗೆ ನೆರವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಂದ ಹಿಡಿದು ವಿಜ್ಞಾನದ ಬಗ್ಗೆ ಆಸಕ್ತಿ ಇರುವ ಎಲ್ಲರೂ ಓದಬಹುದಾದ ಕೃತಿ ಇದು.

ಈ ಕೃತಿಯನ್ನು ಬುಕ್ಸ್‌ ಲೋಕ ಪ್ರಕಟಿಸಿದೆ. ಆಸಕ್ತರು ಮೊ. 98868 56364, 98863 63531 ಸಂಪರ್ಕಿಸಬಹುದು.

PREV
Read more Articles on

Recommended Stories

ನಾನು ಮೂಲಭೂತವಾದಿ ವಿರೋಧಿ : ಪ್ರಿಯಾಂಕ್
ಏರ್‌ಟೆಲ್ ಕ್ಲೌಡ್ ಅಭಿವೃದ್ಧಿಗೆ ಐಬಿಎಂ ಜೊತೆಗೆ ಭಾರ್ತಿ ಏರ್‌ಟೆಲ್ ಸಹಭಾಗಿತ್ವ