ಕಟಕ ರಾಶಿಗಿದೆ ಒಳ್ಳೆಯ ಸಮಯ : ಈ ವಾರ ನಿಮ್ಮ ರಾಶಿಯ ಫಲಾ ಫಲ ಹೇಗಿದೆ ತಿಳಿಯಿರಿ ಇಲ್ಲಿ

ಸಾರಾಂಶ

ವಾರಫಲ - ಈ ವಾರ ನಿಮ್ಮ ರಾಶಿಗಳ ಫಲಾ ಫಲ ಹೇಗಿದೆ ?

ವಾರಫಲ

13-04-25 ರಿಂದ 19-04-25

ಮೇಷರಾಶಿ

ಅನಗತ್ಯ ವಸ್ತುಗಳ ಮೇಲೆ ಹೆಚ್ಚಿನ ಖರ್ಚು ಮಾಡಬೇಡಿ. ಮಾಡಿದರೆ ನಿಮಗೆ ಹಣ ಮತ್ತು ಗೌರವ ಎರಡರಲ್ಲಿಯೂ ನಷ್ಟವಾಗಬಹುದು. ಪ್ರೀತಿ ಪಾತ್ರರ ಆಗಮನದಿಂದಾಗಿ ನಿಮ್ಮ ಮನಸ್ಸು ಸಂತಸದಿಂದಿರುವುದು. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ. ರಾಹು, ಕುಜ ನಿಮ್ಮ ಶಕ್ತಿಯನ್ನು ಹೆಚ್ಚು ಮಾಡುತ್ತಾರೆ. ಮನಸ್ಸಿಗೆ ಮುದ ನೀಡುವಂಥಾ ಘಟನೆಗಳು ನಡೆಯಲಿವೆ. ಮುಂದಿನ ದಿನಗಳು ನಿಮಗೆ ಶುಭದಾಯಕವಾಗಿ ಇರುವುದರಿಂದ ಹೊಸ ಯೋಜನೆಗಳನ್ನು ಹಾಕಿಕೊಳ್ಳಬಹುದು.

ವೃಷಭರಾಶಿ

ಸಂಗಾತಿಯೊಂದಿಗೆ ತಪ್ಪು ತಿಳುವಳಿಕೆ ಅಥವಾ ಮನಸ್ತಾಪ ಉಂಟಾಗಿದ್ದರೆ ಪ್ರೀತಿಯಿಂದ ಅವರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಿ. ನೀವು ಸಣ್ಣ ಶ್ರಮ ಹಾಕಿದರೂ ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುವುದು. ಇನ್ನೊಂದೆಡೆ ಗ್ರಹಗತಿಗಳಿಂದ ನಿಮ್ಮ ಜೀವನದಲ್ಲಿ ಹೊಸ ಬದಲಾವಣೆ ಉಂಟಾಗಲಿದೆ. ಪ್ರೀತಿ ಪಾತ್ರರ ಆಗಮನದಿಂದಾಗಿ ನಿಮ್ಮ ಮನಸ್ಸು ಸಂತಸದಿಂದಿರುವುದು. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ. ಮನಸ್ಸಿಗೆ ಮುದ ನೀಡುವಂಥಾ ಘಟನೆಗಳು ನಡೆಯಲಿವೆ.

ಮಿಥುನರಾಶಿ:

ಹೊಸ ಅವಕಾಶಗಳು ದೊರೆಯಲಿದೆ. ನಿಮ್ಮ ಪರಿಶ್ರಮಕ್ಕೆ ಹೆಚ್ಚಿನ ಬೆಲೆ ಬರಲಿದೆ. ವಾರದ ಮಧ್ಯಭಾಗದಲ್ಲಿ ಧನಲಾಭ ಇದೆ. ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ನಿಮ್ಮ ಕೆಲಸಗಳಲ್ಲಿ ಯಶಸ್ಸು ಲಭಿಸುವುದು. ಬೇರೆಯವರನ್ನು ನಂಬಿ ಕೆಲಸ ಮಾಡುವುದಕ್ಕಿಂತ ನೀವು ನಿಮ್ಮ ಕೆಲಸದ ಮೇಲೆ ಹೆಚ್ಚಿನ ವಿಶ್ವಾಸವನ್ನು ಹೊಂದುವುದು ಉತ್ತಮ. ನಿಮಗೆ ಸರ್ಕಾರದಿಂದ ಲಾಭ ಸಿಗುತ್ತದೆ. ಸರ್ಕಾರಿ ಕೆಲಸಗಳು ಸುಲಭ ಆಗುತ್ತದೆ. ಕುಹಕ ಕಡಿಮೆ ಮಾಡಿ. ಒಳ್ಳೆಯದನ್ನು ಯೋಚಿಸಿ.

ಕಟಕರಾಶಿ:

ನಿಮಗೆ ಈಗ ಒಳ್ಳೆಯ ಸಮಯ. ಇದರ ಸದುಪಯೋಗ ಮಾಡಿಕೊಳ್ಳಿ. ಮಾತಿನಿಂದ ಲಾಭ ಇದೆ. ರಾಜಕಾರಣಿಗಳು, ಜಾಹಿರಾತು, ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಲಾಭ ಇದೆ. ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ವಿರೋಧಿಗಳಿಗೆ ಸರಿಯಾದ ಉತ್ತರವನ್ನು ನೀಡುವಲ್ಲಿ ಯಶಸ್ಸು ಗಳಿಸುವಿರಿ. ನೀವಂದುಕೊಂಡಂತಹ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವುದು. ವ್ಯಾಪಾರವನ್ನು ಜನರು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಉತ್ತಮ ಅವಕಾಶವನ್ನು ಪಡೆಯುವರು.

ಸಿಂಹರಾಶಿ:

ಪ್ರಗತಿ ಮತ್ತು ಲಾಭವನ್ನು ಗಳಿಸಲು ಯೋಚನೆಯನ್ನು ರೂಪಿಸಲು ಅನುಕೂಲಕರ ಸಮಯ. ಜೊತೆಗೆ ನಿಮ್ಮ ಸುಖ ಸಮೃದ್ಧಿಗಾಗಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗಿ ಬರಬಹುದು. ವಾರದ ಮಧ್ಯದಲ್ಲಿ ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಯಾರೊಂದಿಗೂ ಕಠೋರವಾಗಿ ಮಾತನಾಡಬೇಡಿ. ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತದೆ. ಕೆಲವೇ ದಿನಗಳಲ್ಲಿ ಶುಭಫಲಗಳು ಸಿಗುತ್ತದೆ. ಸ್ನೇಹಿತರ ಜೊತೆ ವಾದ ನಡೆಯುವುದನ್ನು ತಪ್ಪಿಸಿ.

ಕನ್ಯಾರಾಶಿ:

ಒತ್ತಡಗಳು ಹೆಚ್ಚಾಗುತ್ತದೆ. ಯಾವುದೂ ಏನೂ ಆಗದಂಥ ಪರಿಸ್ಥಿತಿ. ತಲೆ ಖಾಲಿ ಆದಂತೆ, ಬುದ್ಧಿ ಓಡದಂತೆ ಸಪ್ಪೆಯಾಗುತ್ತೀರಿ. ದರ್ಪವನ್ನು ನಿಗ್ರಹಿಸಲೇ ಬೇಕು. ಧೈರ್ಯಕ್ಕೆ ಹೆಸರಾದ ನೀವು ಈ ವಾರ ಕಳೆಗುಂದಬೇಕಾಗುತ್ತದೆ. ಮನೆಯಲ್ಲಿ ಆಫೀಸಿನಲ್ಲಿ ಬೇಕಾದ ಸ್ಥಾನಮಾನ ಸಿಗುವುದಿಲ್ಲ. ಓರಗೆಯವರು ನಿಮ್ಮ ಬಗ್ಗೆ ತಾತ್ಸಾರದ ನಿಲುವನ್ನು ತಾಳಬಹುದು. ಆದರೆ ಮಧ್ಯಭಾಗದಲ್ಲಿ ಮನಸ್ಸಿಗೆ ಖುಷಿ ನೀಡುವಂಥಾ ಘಟನೆಗಳು ನಡೆದು ಹಾಯಾಗಿರುತ್ತದೆ.

ತುಲಾರಾಶಿ:

ವೃತ್ತಿಯಲ್ಲಿ ಯಶಸ್ಸು, ಉನ್ನತಿ, ಎಲ್ಲವೂ ಈಗಲೇ ನಿಮ್ಮ ಅನುಭವಕ್ಕೆ ಬರುತ್ತದೆ. ಧನಾತ್ಮಕ ಗಾಳಿ ಬೀಸಲು ಪ್ರಾರಂಭವಾಗಿದೆ. ಭವಿಷ್ಯಕ್ಕೆ ನಿಮ್ಮ ಯೋಜನೆಗಳನ್ನು ರೂಪಿಸಲು, ಮುಂದುವರಿಯಲು ಇದು ಸಕಾಲ.

ಸದ್ಯದಲ್ಲಿ ಯಾವುದೇ ಗ್ರಹಬಲ ಇಲ್ಲದಿದ್ದರೂ ಕೆಲವೇ ದಿನಗಳಲ್ಲಿ ಶನಿಯ ಬಲವನ್ನು ಪಡೆಯುತ್ತೀರಿ. ಮುಂದಿನ ದಿನಗಳು ನಿಮಗೆ ಒಳ್ಳೆಯ ಫಲಗಳನ್ನು ನೀಡಲಿದೆ. ಹೊಸ ಕೆಲಸ ಸಿಗಬಹುದು ವಿದೇಶ ಪ್ರಯಾಣ ಆಗಬಹುದು. ಖುಷಿಯಾಗಿರಿ.

ವೃಶ್ಚಿಕ ರಾಶಿ:

ಕೆಲಸದ ಸ್ಥಳದಲ್ಲಿ ಯಶಸ್ಸು ಲಭಿಸುವ ಯೋಗವಿದೆ. ಸರಿಯಾಗಿ ಯೋಚಿಸಿದ ನಂತರವೇ ಹೊಸ ಯೋಜನೆಗಳನ್ನು ಪ್ರಾರಂಭಿಸಿ ಅಥವಾ ಈ ಅವಧಿಯಲ್ಲಿ ಯಾವುದೇ ಕೆಲಸವನ್ನು ಶುರು ಮಾಡದೇ ಇರುವುದು ಉತ್ತಮ. ಮನೆ ಅಥವಾ ಕೆಲಸದ ಸ್ಥಳದಲ್ಲಿನ ಸಮಸ್ಯೆಗಳನ್ನು ಒಂದರ ನಂತರ ಇನ್ನೊಂದರಂತೆ ಪರಿಹರಿಸಿ. ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷವಾಗಿ ಗಮನ ನೀಡಿ. ವ್ಯಾಪಾರವನ್ನು ಮಾಡುವ ಜನ ಹೂಡಿಕೆಗೆ ಸಂಬಂಧಿಸಿದಂತೆ ಹೆಚ್ಚು ಎಚ್ಚರಿಕೆಯಿಂದಿರಿ.

ಧನಸ್ಸು ರಾಶಿ:

ಕೆಲಸದ ಸ್ಥಳದಲ್ಲಿ ಹೊಸ ಅವಕಾಶಗಳು ದೊರಕುವ ಸಾಧ್ಯತೆ ಇದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಯಶಸ್ಸು ಲಭಿಸುವ ಸಾಧ್ಯತೆ ಇದೆ. ಯಶಸ್ಸನ್ನು ಗಳಿಸಲು ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಕಠಿಣ ಪರಿಶ್ರಮದಿಂದ ಕೆಲಸವನ್ನು ಮಾಡುವುದು ಉತ್ತಮ. ಸದ್ಯದ ಗ್ರಹಗತಿ ನಿಮಗೆ ಅದೃಷ್ಟವನ್ನು ತರುತ್ತದೆ. ಮನಸ್ಸನ್ನು ಚಂಚಲಗೊಳಿಸುವ ಘಟನೆಗಳು ನಡೆಯಬಹುದು. ಅಧಿಕಾರದಲ್ಲಿರುವ ವ್ಯಕ್ತಿಗಳಿಂದ ಸಹಕಾರ ಸಿಗಲಿದೆ. ವಾಹನ ಚಾಲನೆಯಲ್ಲಿ ಜಾಗ್ರತೆ ಇರಲಿ.

ಮಕರರಾಶಿ:

ನೀವು ಅಂದುಕೊಂಡ ಕೆಲಸ ಕಾರ್ಯಗಳು ನೆರವೇರುತ್ತವೆ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಆದರೆ ವಾರದ ಮಧ್ಯ ಭಾಗದಲ್ಲಿ ಆಪ್ತರ ಅಗಲಿಕೆ ನೋವನ್ನು ತರಬಹುದು. ಮನಸ್ಸಲ್ಲಿ ಒಂದು ವಿಚಾರ ಇಟ್ಟುಕೊಂಡು ಇತರರೊಂದಿಗೆ ಹಂಚಿಕೊಳ್ಳದೇ ಕೊರಗಬೇಡಿ. ಮನೆಯಲ್ಲಿ ಹಿರಿಯರ ಜೊತೆಗೆ ಚರ್ಚಿಸಿ ಮಹತ್ವದ ನಿರ್ಧಾರ ಕೈಗೊಳ್ಳಿ. ಹಾಡುಗಾರರಿಗೆ ಒಳ್ಳೆಯ ಅವಕಾಶ ಸಿಗಬಹುದು. ಮಂಡಿನೋವಿನ ಬಾಧೆಯಿಂದ ಕಿರಿಕಿರಿ. ಆರೋಗ್ಯದ ಬಗ್ಗೆ ಕಾಳಜಿ ಮಾಡಿ.

ಕುಂಭರಾಶಿ:

ಈಗ ನಿಮ್ಮ ದಾರಿ ಸ್ಪಷ್ಟವಾಗಿದೆ. ಕಷ್ಟ ನಷ್ಟಗಳಿಲ್ಲದೇ ಮನಸ್ಸಿಗೆ ನೆಮ್ಮದಿ ಇದೆ. ಆದರೆ ಮನಸ್ಸಿನ ಮೂಲೆಯಲ್ಲಿ ಒಂದು ಅತೃಪ್ತ ಭಾವ ಸದಾ ಕಾಡುತ್ತಾ ಇರಬಹುದು. ತಲ್ಲೀನಗೊಳಿಸುವ ಕೆಲಸಗಳಿಂದ ನೀವು ಇದನ್ನು ಮೀರುತ್ತೀರಿ. ಆದರೆ ನೀವು ಈಗ ಮನಸ್ಸಲ್ಲಿರುವ ಆಸೆಯನ್ನು ಪೂರೈಸಲು ಧೈರ್ಯ ಮಾಡಬೇಕು. ಇಲ್ಲವಾದರೆ ಅದು ಮುಂದೂಡುತ್ತಲೇ ಹೋಗಿ ಮುಂದೊಂದು ದಿನ ಮಾಯವಾಗಬಹುದು. ಸರ್ಕಾರಿ ಕೆಲಸಗಳು ಸುಲಭವಾಗಿ ನೆರವೇರುತ್ತದೆ. ವ್ಯಾಯಾಮ ಮಾಡಿ.

ಮೀನರಾಶಿ:

ಇನ್ನೊಬ್ಬರ ಮಾತಿಗೆ ಹೆಚ್ಚು ಕಿವಿಗೊಡಬೇಡಿ. ನಿಮ್ಮ ಮನಸ್ಸಿಗೆ ಸರಿ ಅನಿಸಿದ್ದನ್ನು ಮಾತ್ರ ಮಾಡಿ. ನಡೆ, ನುಡಿಯಲ್ಲಿರುವ ಪ್ರಾಮಾಣಿಕತೆಯನ್ನು ಇತರರು ನಿಮ್ಮ ದೌರ್ಬಲ್ಯವೆಂದು ಅರ್ಥೈಸಲು ಅವಕಾಶ ನೀಡಬೇಡಿ. ಅಗತ್ಯ ಇರುವಲ್ಲಿ ನಿಮ್ಮ ಪೌರುಷವೂ ಹೊರಬರಲಿ. ಅತಿಯಾದ ಸಜ್ಜನಿಕೆಗಿಂತ ಕಾಲಕ್ಕೆ ತಕ್ಕಂತೆ ಬದಲಾಗುವುದು ಈ ಹೊತ್ತಿನ ಅಗತ್ಯ. ಮನೆಯಲ್ಲಿ ಉದ್ಯೋಗದಲ್ಲಿ ಕಿರಿಕಿರಿ ಇರುತ್ತದೆ. ಕಾಲು ನೋವಿನ ಬಾಧೆಯಿಂದ ವಿಪರೀತ ನೋವು ಅನುಭವಿಸುವ ಸಾಧ್ಯತೆ ಇದೆ.

Share this article