ಡೆಲ್ಲಿ ಪ್ರೀಮಿಯರ್ ಲೀಗ್‌ ಟಿ20 : 308 ರನ್‌, 31 ಸಿಕ್ಸರ್‌ ಸಿಡಿಸಿದ ಸೌತ್‌ ಡೆಲ್ಲಿ!

KannadaprabhaNewsNetwork |  
Published : Sep 01, 2024, 01:54 AM ISTUpdated : Sep 01, 2024, 04:11 AM IST
ಬದೋನಿ ಮತ್ತು ಪ್ರಿಯಾನ್ಶ್‌ | Kannada Prabha

ಸಾರಾಂಶ

ಟಿ20 ಕ್ರಿಕೆಟ್‌ನಲ್ಲೇ 2ನೇ ಗರಿಷ್ಠ ರನ್ ದಾಖಲೆ. ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ 314 ರನ್‌ ಗಳಿಸಿದ್ದು ಈಗಲೂ ದಾಖಲೆ. ಬದೋನಿ 19 ಸಿಕ್ಸರ್‌ ಸೇರಿ ಒಟ್ಟು 165 ರನ್‌ ಸಿಡಿಸಿದರು.

ನವದೆಹಲಿ: ಡೆಲ್ಲಿ ಪ್ರೀಮಿಯರ್ ಲೀಗ್‌ ಟಿ20 ಟೂರ್ನಿಯ ನಾರ್ತ್‌ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸೌತ್‌ ಡೆಲ್ಲಿ ಸೂಪರ್‌ಸ್ಟಾರ್ಸ್‌ ತಂಡ 5 ವಿಕೆಟ್‌ಗೆ ಬರೋಬ್ಬರಿ 308 ರನ್‌ ಕಲೆಹಾಕಿದೆ. ಇದು ಭಾರತೀಯ ಟಿ20 ತಂಡವೊಂದರ ಗರಿಷ್ಠ ಮತ್ತು ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 2ನೇ ಗರಿಷ್ಠ ಸ್ಕೋರ್‌ ಎನಿಸಿಕೊಂಡಿದೆ.

 ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ 314 ರನ್‌ ಗಳಿಸಿದ್ದು ಈಗಲೂ ದಾಖಲೆಯಾಗಿಯೇ ಉಳಿದಿದೆ. ಕಳೆದ ವರ್ಷ ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧ ಹೈದರಾಬಾದ್‌ 287 ರನ್‌ ಕಲೆಹಾಕಿತ್ತು. 

ಅದನ್ನು ಡೆಲ್ಲಿ ತಂಡ ಮುರಿದಿದೆ. ಶುಕ್ರವಾರದ ಪಂದ್ಯದಲ್ಲಿ ಆಯುಶ್‌ ಬದೋನಿ 55 ಎಸೆತಗಳಲ್ಲಿ 165, ಪ್ರಿಯಾನ್ಶ್‌ ಆರ್ಯ 50 ಎಸೆತಗಳಲ್ಲಿ 120 ರನ್‌ ಸಿಡಿಸಿದರು. ಬದೋನಿ ಬರೋಬ್ಬರಿ 19 ಸಿಕ್ಸರ್‌ ಬಾರಿಸಿದರು. ಇದು ಟಿ20 ಕ್ರಿಕೆಟ್‌ ಪಂದ್ಯವೊಂದರಲ್ಲಿ ಆಟಗಾರನ ಗರಿಷ್ಠ ಸಿಕ್ಸರ್‌. ವೆಸ್ಟ್‌ಇಂಡೀಸ್‌ನ ಕ್ರಿಸ್‌ ಗೇಲ್‌, ಎಸ್ಟೋನಿಯಾದ ಸಾಹಿಲ್‌ ಚೌಹಾಣ್‌ ಪಂದ್ಯವೊಂದರಲ್ಲಿ ತಲಾ 18 ಸಿಕ್ಸರ್‌ ಬಾರಿಸಿದ್ದು ಈ ವರೆಗಿನ ದಾಖಲೆ. ಇನ್ನಿಂಗ್ಸ್‌ನಲ್ಲಿ 31 ಸಿಕ್ಸರ್‌ ದಾಖಲಾಯಿತು. ಇದು ಕೂಡಾ ಟಿ20 ಪಂದ್ಯವೊಂದರಲ್ಲಿ ತಂಡದ ಗರಿಷ್ಠ.

286 ರನ್: ಬದೋನಿ-ಪ್ರಿಯಾನ್ಸ್‌ 2ನೇ ವಿಕೆಟ್‌ಗೆ 286 ರನ್‌ ಜೊತೆಯಾಟವಾಡಿದರು. ಇದು ಟಿ20ಯಲ್ಲಿ ಯಾವುದೇ ವಿಕೆಟ್‌ಗೆ ದಾಖಲಾದ ಗರಿಷ್ಠ ರನ್‌ ಜೊತೆಯಾಟ.

6 ಎಸೆತಕ್ಕೆ 6 ಸಿಕ್ಸರ್‌ ಬಾರಿಸಿದ ಪ್ರಿಯಾನ್ಶ್‌

ಮನನ್‌ ಭಾರಧ್ವಾಜ್‌ ಎಸೆದ ಇನ್ನಿಂಗ್ಸ್‌ನ 12ನೇ ಓವರ್‌ನ ಎಲ್ಲಾ 6 ಎಸೆತಗಳಲ್ಲಿ ಪ್ರಿಯಾನ್ಶ್‌ 6 ಸಿಕ್ಸರ್‌ ಬಾರಿಸಿದರು. ಅವರು ಪಂದ್ಯದಲ್ಲಿ ಒಟ್ಟು 50 ಎಸೆತಗಳಲ್ಲಿ 19 ಸಿಕ್ಸರ್‌ಗಳನ್ನೊಳಗೊಂಡ 120 ರನ್ ಸಿಡಿಸಿದರು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ