ಕಾಮನ್‌ವೆಲ್ತ್‌ ಫೆನ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ತಾನ್ವಿ, ಸೆಜಲ್‌ ಅಮೋಘ ಸಾಧನೆ

KannadaprabhaNewsNetwork |  
Published : Jul 29, 2024, 12:50 AM ISTUpdated : Jul 29, 2024, 04:05 AM IST
ಸನ್ಮಾನ ಕಾರ್ಯಕ್ರಮ | Kannada Prabha

ಸಾರಾಂಶ

ಸೆಜಲ್‌ ಅವರು ಕೆಡೆಟ್‌ ವಿಭಾಗದ ಕಿರಿಯರ ವೈಯಕ್ತಿಕ ಹಾಗೂ ತಂಡ ವಿಭಾಗಗಳಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ತಾನ್ವಿ ಅವರು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಬೆಂಗಳೂರು: ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಕೆಡೆಟ್‌ ಹಾಗೂ ಜೂನಿಯರ್‌ ಕಾಮನ್‌ವೆಲ್ತ್‌ ಫೆನ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಸೆಜಲ್‌ ಗುಳಿಯಾ ಹಾಗೂ ಎಸ್‌.ತಾನ್ವಿ ಅಮೋಘ ಸಾಧನೆ ಮಾಡಿದ್ದಾರೆ. 

ಅವರ ಸಾಧನೆಗೆ ಕರ್ನಾಟಕ ಫೆನ್ಸಿಂಗ್‌ ಸಂಸ್ಥೆ ಅಭಿನಂದನೆ ಸಲ್ಲಿಸಿದೆ. ಜೊತೆಗೆ ಇಬ್ಬರು ಸಾಧಕಿಯರಿಗೂ ಸನ್ಮಾನ ಮಾಡಿದೆ.ಚಾಂಪಿಯನ್‌ಶಿಪ್‌ನಲ್ಲಿ ಸೆಜಲ್‌ ಅವರು ಕೆಡೆಟ್‌ ವಿಭಾಗದ ಕಿರಿಯರ ವೈಯಕ್ತಿಕ ಹಾಗೂ ತಂಡ ವಿಭಾಗಗಳಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ತಾನ್ವಿ ಅವರು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಇಬ್ಬರಿಗೂ ಶನಿವಾರ ನಗರದ ಕಂಠೀರವ ಕ್ರೀಡಾಂಗಣದ ಫೆನ್ಸಿಂಗ್‌ ಹಾಲ್‌ನಲ್ಲಿ ಸನ್ಮಾನ ಮಾಡಲಾಯಿತು.

ಈ ಸಂದರ್ಭ ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಕಾರ್ಯದರ್ಶಿ ಟಿ.ಅನಂತರಾಜು, ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಸಹ ಕಾರ್ಯದರ್ಶಿ ಹಾಗೂ ಫೆನ್ಸಿಂಗ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್‌.ಪ್ರಕಾಶ್‌, ಸಂಸ್ಥೆಯ ಉಪಾಧ್ಯಕ್ಷ ಡಾ.ಸಂಜಯ್‌, ಕೋಶಾಧಿಕಾರಿ ಮೋಹನ್ ಉಪಸ್ಥಿತರಿದ್ದರು.

ಟೆಸ್ಟ್‌: ವಿಂಡೀಸ್‌ ವಿರುದ್ಧ ಇಂಗ್ಲೆಂಡ್‌ 3-0 ಕ್ಲೀನ್‌ಸ್ವೀಪ್‌

ಬರ್ಮಿಂಗ್‌ಹ್ಯಾಮ್‌: ವೆಸ್ಟ್‌ಇಂಡೀಸ್‌ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆತಿಥೇಯ ಇಂಗ್ಲೆಂಡ್‌ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿಕೊಂಡಿದೆ. ಭಾನುವಾರ ಮುಕ್ತಾಯಗೊಂಡ 3ನೇ ಪಂದ್ಯದಲ್ಲಿ ಇಂಗ್ಲೆಂಡ್‌ 10 ವಿಕೆಟ್‌ ಭರ್ಜರಿ ಜಯಗಳಿಸಿತು. ಗೆಲುವಿಗೆ 82 ರನ್‌ ಗುರಿ ಪಡೆದಿದ್ದ ತಂಡ, ಕೇವಲ 7.2 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು.

ಆರಂಭಿಕನಾಗಿ ಕಣಕ್ಕಿಳಿದ ಬೆನ್‌ ಸ್ಟೋಕ್ಸ್‌ 28 ಎಸೆತಗಳಲ್ಲಿ 57, ಬೆನ್‌ ಡಕೆಟ್‌ 25 ರನ್‌ ಗಳಿಸಿದರು. ಇದಕ್ಕೂ ಮುನ್ನ ವಿಂಡೀಸ್‌ 2ನೇ ಇನ್ನಿಂಗ್ಸ್‌ನಲ್ಲಿ 175ಕ್ಕೆ ಆಲೌಟಾಗಿತ್ತು. 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 33 ರನ್‌ ಗಳಿಸಿದ್ದ ತಂಡ ಭಾನುವಾರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಯಿತು. ಮಾರ್ಕ್‌ ವುಡ್‌ 5 ವಿಕೆಟ್‌ ಕಿತ್ತರು. ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ಇಂಡೀಸ್‌ 282 ರನ್‌ ಗಳಿಸಿದ್ದರೆ, ಇಂಗ್ಲೆಂಡ್‌ 376 ರನ್‌ ಕಲೆಹಾಕಿ 94 ರನ್‌ ಮುನ್ನಡೆ ಪಡೆದಿತ್ತು. ಮಾರ್ಕ್‌ ವುಡ್‌ ಪಂದ್ಯಶ್ರೇಷ್ಠ, ಗಸ್‌ ಆಟ್ಕಿನ್ಸನ್‌ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್‌: ವಿಂಡೀಸ್‌ 282/10 ಮತ್ತು 175/10, ಇಂಗ್ಲೆಂಡ್‌ 376/10 ಮತ್ತು 87/0

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ನಾನು ಗೆಲ್ಲುವ ಬಹುಮಾನಗಳನ್ನು ನನ್ನ ತಾಯಿಗೆ ಕಳಿಸುತ್ತೇನೆ: ಕೊಹ್ಲಿ!
ಇಂದಿನಿಂದ 4ನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌