ಭಾರತದ ತಂಡದ ರನ್‌ ಮಷಿನ್‌ ವಿರಾಟ್‌ ಕೊಹ್ಲಿ ತಾವು ಗೆಲ್ಲುವ ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಬಹುಮಾನಗಳನ್ನು ಗುರುಗ್ರಾಮದಲ್ಲಿರುವ ತಮ್ಮ ತಾಯಿಗೆ ಕಳುಹಿಸುವುದಾಗಿ ಹೇಳಿದ್ದಾರೆ.  ನನ್ನ ಬಗ್ಗೆ ಅವರಿಗೆ ಬಹಳ ಹೆಮ್ಮೆ ಇದೆ’ ಎಂದರು.

ವಡೋದರಾ: ಭಾರತದ ತಂಡದ ರನ್‌ ಮಷಿನ್‌ ವಿರಾಟ್‌ ಕೊಹ್ಲಿ ತಾವು ಗೆಲ್ಲುವ ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಬಹುಮಾನಗಳನ್ನು ತಮ್ಮ ತಾಯಿಗೆ ಕಳುಹಿಸುವುದಾಗಿ ಹೇಳಿದ್ದಾರೆ. 

ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ಕೊಹ್ಲಿ

 ಭಾನುವಾರ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ಬಳಿಕ ಕೊಹ್ಲಿಯ ಸಂದರ್ಶನ ನಡೆಸಿದ ಹರ್ಷಾ ಭೋಗ್ಲೆ, ‘ಇದು ಎಷ್ಟೇ ಪಂದ್ಯಶ್ರೇಷ್ಠ ಪ್ರಶಸ್ತಿ ಎಂದು ನೆನಪಿದೆಯೇ?, ನಿಮ್ಮ ಮನೆ ಬಹಳ ದೊಡ್ಡದಿರಬೇಕು. ಬಹುಮಾನಗಳನ್ನು ಇಡುವುದಕ್ಕೇ ಒಂದು ಕೊಠಡಿ ಬೇಕು’ ಎಂದರು.

ನನ್ನ ತಾಯಿಗೆ ಕಳುಹಿಸುತ್ತೇನೆ

 ಅದಕ್ಕೆ ಉತ್ತರಿಸಿದ ಕೊಹ್ಲಿ, ‘ಬಹುಮಾನಗಳನ್ನು ನಾನು ಗುರುಗ್ರಾಮದಲ್ಲಿರುವ ನನ್ನ ತಾಯಿಗೆ ಕಳುಹಿಸುತ್ತೇನೆ. ಅವರು ಎಲ್ಲಾ ಬಹುಮಾನಗಳನ್ನು ಒಂದೆಡೆ ಜೋಡಿಸಿ ಖುಷಿಪಡುತ್ತಾರೆ. ನನ್ನ ಬಗ್ಗೆ ಅವರಿಗೆ ಬಹಳ ಹೆಮ್ಮೆ ಇದೆ’ ಎಂದರು.