ನೆಟ್ಟಿಗರ ನಿದ್ದೆಕೆಡಿಸಿದ್ದ ವಿರಾಟ್‌ ಕೊಹ್ಲಿ ಟ್ವೀಟ್‌!

| N/A | Published : Oct 17 2025, 01:00 AM IST

ನೆಟ್ಟಿಗರ ನಿದ್ದೆಕೆಡಿಸಿದ್ದ ವಿರಾಟ್‌ ಕೊಹ್ಲಿ ಟ್ವೀಟ್‌!
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ತಾಣಗಳಲ್ಲಿ ವಿರಾಟ್‌ ಕೊಹ್ಲಿ ಪೋಸ್ಟ್‌ ಮಾಡುವುದು ಅಪರೂಪ. ಅವರ ಪ್ರತಿ ಪೋಸ್ಟ್‌ಗೂ ಲಕ್ಷಾಂತರ ಹಿಟ್ಸ್‌, ಲೈಕ್ಸ್‌ ಬರಲಿದೆ. ಪ್ರತಿ ಪೋಸ್ಟ್‌ ಕೂಡ ವೈರಲ್‌ ಆಗಲಿದೆ. ಅಂತದ್ದೇ ಒಂದು ಟ್ವೀಟ್‌ ಗುರುವಾರ ಭಾರೀ ಕುತೂಹಲ ಮೂಡಿಸಿ, ಎಲ್ಲರಲ್ಲೂ ಆಸಕ್ತಿ ಕೆರಳಿಸಿತ್ತು.

ನವದೆಹಲಿ: ಸಾಮಾಜಿಕ ತಾಣಗಳಲ್ಲಿ ವಿರಾಟ್‌ ಕೊಹ್ಲಿ ಪೋಸ್ಟ್‌ ಮಾಡುವುದು ಅಪರೂಪ. ಅವರ ಪ್ರತಿ ಪೋಸ್ಟ್‌ಗೂ ಲಕ್ಷಾಂತರ ಹಿಟ್ಸ್‌, ಲೈಕ್ಸ್‌ ಬರಲಿದೆ. ಪ್ರತಿ ಪೋಸ್ಟ್‌ ಕೂಡ ವೈರಲ್‌ ಆಗಲಿದೆ. ಅಂತದ್ದೇ ಒಂದು ಟ್ವೀಟ್‌ ಗುರುವಾರ ಭಾರೀ ಕುತೂಹಲ ಮೂಡಿಸಿ, ಎಲ್ಲರಲ್ಲೂ ಆಸಕ್ತಿ ಕೆರಳಿಸಿತ್ತು. 

 ‘ನೀವು ನಿಜವಾಗಲೂ ಸೋಲುವುದು, ಪ್ರಯತ್ನಿಸುವುದನ್ನು ನಿಲ್ಲಿಸಲು ನಿರ್ಧರಿಸಿದಾಗ’ ಎಂದು ಕೊಹ್ಲಿ ಟ್ವೀಟ್‌ ಮಾಡಿದ್ದರು. 2027ರ ಏಕದಿನ ವಿಶ್ವಕಪ್‌ಗೆ ಕೊಹ್ಲಿ ಆಯ್ಕೆಯಾಗ್ತಾರಾ?, ಐಪಿಎಲ್‌ಗೆ ನಿವೃತ್ತಿ ಘೋಷಿಸುತ್ತಾರಾ? ಹೀಗೆ ಹಲವು ವಿಚಾರಗಳು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಸಮಯದಲ್ಲೇ ಕೊಹ್ಲಿಯಿಂದ ಇಂತದ್ದೊಂದು ಟ್ವೀಟ್‌ ಹೊರಬಿದ್ದಿದ್ದು ಸಹಜವಾಗಿಯೇ ಎಲ್ಲರ ಕುತೂಹಲ ಕೆರಳಿಸಿತ್ತು.  

ಅವರ ಟ್ವೀಟ್‌ ಬಗ್ಗೆ ಕ್ರಿಕೆಟ್‌ ಆಸ್ಟ್ರೇಲಿಯಾ, ಆರ್‌ಸಿಬಿ ಸೇರಿ ಹಲವು ಅಧಿಕೃತ ಟ್ವೀಟರ್‌ ಖಾತೆಗಳಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅನೇಕ ಮಾಜಿ ಕ್ರಿಕೆಟಿಗರೂ ಈ ಬಗ್ಗೆ ವಿಶ್ಲೇಷಣೆ ನಡೆಸಿದ್ದರು. ಆದರೆ, ಮೊದಲ ಟ್ವೀಟ್‌ ಮಾಡಿದ 2 ಗಂಟೆ ಬಳಿಕ ಕೊಹ್ಲಿ ತಮ್ಮ ಮಾಲಿಕತ್ವದ ‘ರಾಂಗ್‌’ ಬ್ರ್ಯಾಂಡ್‌ನ ಪ್ರಚಾರಕ್ಕಾಗಿ ಈ ರೀತಿ ಟ್ವೀಟ್‌ ಮಾಡಿದ್ದರು ಎಂದು ತಿಳಿದು, ನೆಟ್ಟಿಗರು ಪೆಚ್ಚಾದರು.

Read more Articles on