12 ವರ್ಷ ಬಾಲಕಿಯ ಜಹೀರ್ ಖಾನ್‌ ಶೈಲಿ ಬೌಲಿಂಗ್‌ಗೆ ಮನಸೋತ ಸಚಿನ್‌! ಟ್ವೀಟ್‌ಗೆ ಪ್ರತಿಕ್ರಿಯೆ

KannadaprabhaNewsNetwork |  
Published : Dec 21, 2024, 01:17 AM ISTUpdated : Dec 21, 2024, 04:06 AM IST
ಬೌಲಿಂಗ್‌ ಶೈಲಿ | Kannada Prabha

ಸಾರಾಂಶ

ಸಚಿನ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಜಹೀರ್, ‘ನೀವು ಆಕೆಯ ಶೈಲಿಯನ್ನು ಗುರುತಿಸಿದ್ದೀರಿ. ಅವಳ ಶೈಲಿ ತುಂಬಾ ನಯವಾಗಿ, ಆಕರ್ಷಕವಾಗಿದೆ. ಈಗಾಗಲೇ ತುಂಬಾ ಭರವಸೆ ಹುಟ್ಟುಹಾಕಿದ್ದಾಳೆ’ ಎಂದಿದ್ದಾರೆ.

ನವದೆಹಲಿ: ರಾಜಸ್ಥಾನದ 12 ವರ್ಷದ ಬಾಲಕಿಯೊರ್ವಳ ವೇಗದ ಬೌಲಿಂಗ್‌ಗೆ ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಮನಸೋತಿದ್ದಾರೆ. ಸುಶಿಲಾ ಮೀನಾ ಎಂಬಾಕೆ ನೆಟ್ಸ್‌ನಲ್ಲಿ ಬೌಲ್‌ ಮಾಡುತ್ತಿರುವ ವಿಡಿಯೋವನ್ನು ಸಚಿನ್‌ ಅವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು, ಭಾರತದ ಮಾಜಿ ವೇಗಿ ಜಹೀರ್‌ ಖಾನ್‌ರನ್ನು ಟ್ಯಾಗ್‌ ಮಾಡಿದ್ದಾರೆ.

 ‘ನಯವಾದ ಮತ್ತು ವೀಕ್ಷಿಸಲು ಸುಂದರವಾದ ಬೌಲಿಂಗ್‌. ಸುಶೀಲಾ ಮೀನಾ ಅವರ ಬೌಲಿಂಗ್ ಶೈಲಿ ಜಹೀರ್‌ ಖಾನ್‌ ಶೈಲಿಯನ್ನು ಹೋಲುತ್ತದೆ ಅಲ್ಲವೇ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಹೀರ್, ‘ನೀವು ಆಕೆಯ ಶೈಲಿಯನ್ನು ಗುರುತಿಸಿದ್ದೀರಿ. ಅವಳ ಶೈಲಿ ತುಂಬಾ ನಯವಾಗಿ, ಆಕರ್ಷಕವಾಗಿದೆ. ಈಗಾಗಲೇ ತುಂಬಾ ಭರವಸೆ ಹುಟ್ಟುಹಾಕಿದ್ದಾಳೆ’ ಎಂದಿದ್ದಾರೆ. ಇವರಿಬ್ಬರ ಟ್ವೀಟ್‌ ಬಳಿಕ ಸುಶೀಲಾ ಬೌಲಿಂಗ್ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಅಂಡರ್‌-19 ಮಹಿಳಾ ಏಷ್ಯಾಕಪ್‌: ಭಾರತ ಫೈನಲ್‌ಗೆ

ಕೌಲಾ ಲಂಪುರ: ಅಂಡರ್‌-19 ಮಹಿಳಾ ಟಿ20 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಫೈನಲ್‌ ಪ್ರವೇಶಿಸಿದೆ. ಶುಕ್ರವಾರ ಸೂಪರ್‌-4 ಹಂತದ ಕೊನೆ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ 4 ವಿಕೆಟ್‌ ಗೆಲುವು ಸಾಧಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಪ್ರಶಸ್ತಿ ಸುತ್ತಿಗೇರಿತು. 

ಭಾನುವಾರ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ.ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 20 ಓವರಲ್ಲಿ 9 ವಿಕೆಟ್‌ಗೆ 98 ರನ್‌ ಗಳಿಸಿದರು. ನಯನಕ್ಕಾರ 33, ನಿಸಾನ್‌ಸಲ 21 ರನ್‌ ಗಳಿಸಿದರು.

 ಆಯುಶಿ ಶುಕ್ಲಾ 10 ರನ್‌ ನೀಡಿ 4 ವಿಕೆಟ್‌ ಕಿತ್ತರು. ಸುಲಭ ಗುರಿಯನ್ನು ಬೆನ್ನತ್ತಿದ ಭಾರತ 14.5 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು ಗೆಲುವು ತನ್ನದಾಗಿಸಿಕೊಂಡಿತು. ತ್ರಿಶಾ 32, ಕಮಲಿನಿ 28 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು. ಶುಕ್ರವಾರ ಮತ್ತೊಂದು ಪಂದ್ಯದಲ್ಲಿ ನೇಪಾಳ ವಿರುದ್ಧ ಬಾಂಗ್ಲಾದೇಶ 9 ವಿಕೆಟ್‌ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಫೈನಲ್‌ಗೇರಿತು.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌