ಶ್ರೀರಂಗಪಟ್ಟಣ : ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಬೆಳೆ, ತೆಂಗಿನ ಮರಗಳು ನಾಶ

| Published : Apr 04 2024, 01:06 AM IST / Updated: Apr 04 2024, 05:35 AM IST

ಶ್ರೀರಂಗಪಟ್ಟಣ : ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಬೆಳೆ, ತೆಂಗಿನ ಮರಗಳು ನಾಶ
Share this Article
  • FB
  • TW
  • Linkdin
  • Email

ಸಾರಾಂಶ

ನೆಲಮನೆ ಗ್ರಾಮದ ಲಕ್ಷ್ಮಿನರಸಿಂಹ ಹಾಗೂ ಎಲ್.ಸಿ ಕೃಷ್ಣೇಗೌಡರಿಗೆ ಸೇರಿದ ಸುಮಾರು 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಹಾಗೂ ಫಲ ನೀಡುತ್ತಿದ್ದ 20 ಕ್ಕೂ ಹೆಚ್ಚು ತೆಂಗಿನ ಮರಗಳು ಬೆಂಕಿಯಿಂದಾಗಿ ಸುಟ್ಟು ನಾಶವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕೆಂದು ಜಮೀನಿನ ಮಾಲೀಕರು ಒತ್ತಾಯ.

  ಶ್ರೀರಂಗಪಟ್ಟಣ :  ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಕಬ್ಬಿನ ಬೆಳೆ ಹಾಗೂ ತೆಂಗಿನ ಮರಗಳು ಸುಟ್ಟು ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ನೆಲಮನೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲಕ್ಷ್ಮಿನರಸಿಂಹ ಹಾಗೂ ಎಲ್.ಸಿ ಕೃಷ್ಣೇಗೌಡರಿಗೆ ಸೇರಿದ ಸುಮಾರು 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಹಾಗೂ ಫಲ ನೀಡುತ್ತಿದ್ದ 20 ಕ್ಕೂ ಹೆಚ್ಚು ತೆಂಗಿನ ಮರಗಳು ಬೆಂಕಿಯಿಂದಾಗಿ ಸುಟ್ಟು ನಾಶವಾಗಿದೆ. ಕಬ್ಬಿಗೆ 9 ತಿಂಗಳಾಗಿದ್ದು ಕಟಾವಿಗೆ ಸಿದ್ಧವಾಗಿದ್ದ ಬೆಳೆ ಸುಡು ಬಿಸಿಲಿನ ಬಿರು ಬೇಸಿಗೆಯಲ್ಲಿ ಒಣಗಿ ನಿಂತಿದ್ದ ಕಬ್ಬು, ತರಗಿಗೆ ಬೆಂಕಿ ಹೊತ್ತಿಕೊಂಡು ಗಾಳಿ ರಭಸಕ್ಕೆ ಬೆಂಕಿ ಗದ್ದೆಯನ್ನೆಲ್ಲಾ ಆವರಿಸಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕೆಂದು ಜಮೀನಿನ ಮಾಲೀಕರು ಒತ್ತಾಯಿಸಿದ್ದಾರೆ.

ಬುದ್ಧಿಮಾಂದ್ಯ ಯುವಕ ನಾಪತ್ತೆಮಳವಳ್ಳಿ: ತಾಲೂಕಿನ ದೇವಿಪುರ ಗ್ರಾಮದ ಲೇ. ಪುಟ್ಟಸ್ವಾಮಿ ಪುತ್ರ ಅನಿಲ್‌ಕುಮಾರ್ (25) ಕಾಣೆಯಾಗಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬುದ್ಧಿಮಾಂದ್ಯನಾಗಿರುವ ಅನಿಲ್‌ಕುಮಾರ್ ಕಳೆದ ಫೆ.6ರಂದು ದೇವಿಪುರ ಗ್ರಾಮದಿಂದ ಕಾಣೆಯಾಗಿದ್ದು, ಹುಡುಕಿಕೊಡುವಂತೆ ಅನಿಲ್‌ಕುಮಾರ್ ತಮ್ಮ ಸುನೀಲ್‌ಕುಮಾರ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ನಡೆಸಿದ್ದಾರೆ.5.5 ಅಡಿ ಎತ್ತರ, ಕೋಲುಮುಖ ಗೋದಿ ಮೈಬಣ್ಣ, ಚಪ್ಪಟೆ ಮುಖ ಹೊಂದಿದ್ದು, ಮನೆ ಬಿಟ್ಟುಹೋಗುವಾಗ ಸೀಮೆಂಟ್ ಬಣ್ಣದ ಶರ್ಟ್, ನೀಲಿ ಬಣ್ಣ ಅರ್ಥಪ್ಯಾಂಟ್‌ನಿಕ್ಕರ್ ಧರಿಸಿದ್ದಾನೆ. ಅನಿಲ್‌ಕುಮಾರ್‌ರವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಅಥವಾ ಮಂಡ್ಯ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಬೇಕೆಂದು ಪೊಲೀಸ್ ಸಬ್‌ ಇನ್ಸ್ ಪೆಕ್ಟರ್ ಕೋರಿದ್ದಾರೆ.

ಗೂಳಿಗೌಡ ನಾಪತ್ತೆ

ಮಳವಳ್ಳಿ: ತಾಲೂಕಿನ ರಾವಣಿ ಗ್ರಾಮದ ಗೂಳಿಗೌಡ (80) ಕಾಣೆಯಾಗಿದ್ದು, ಹುಡುಕಿಕೊಡುವಂತೆ ಪುತ್ರ ನಂಜುಂಡಸ್ವಾಮಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸುಮಾರು 6 ಅಡಿ ಎತ್ತರ, ಗೋದಿ ಬಣ್ಣ ಮೈಕಟ್ಟು, ಚಪ್ಪಟ್ಟೆ ಮುಖ ಹೊಂದಿರುವ ಗೂಳಿಗೌಡ ಫೆ.26ರಂದು ಮನೆ ಬಿಟ್ಟು ಹೋಗುವಾಗ ಬಿಳಿ ಬಣ್ಣದ ಶರ್ಟ್, ಬಿಳಿ ಪಂಚೆ, ನೀಲಿ ಬಣ್ಣದ ಲಾಡಿ ನಿಕ್ಕರ್ ಧರಿಸುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕರೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಬೇಕೆಂದು ಸಬ್ ಇನ್ಸ್ ಪೆಕ್ಟರ್ ಕೋರಿದ್ದಾರೆ.