ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 21 ವರ್ಷ ಕಾರಾಗೃಹ ಶಿಕ್ಷೆ

| Published : Apr 06 2024, 12:47 AM IST / Updated: Apr 06 2024, 05:10 AM IST

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 21 ವರ್ಷ ಕಾರಾಗೃಹ ಶಿಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

2020ರಲ್ಲಿ 14 ವರ್ಷದ ಅಪ್ರಾಪ್ತೆ  ಕೊಡಗಹಳ್ಳಿಗೆ ಹೋಗಲು ಬೆಂಗಳೂರಿನ  ಬಸ್ ನಿಲ್ದಾಣದಿಂದ ರಾಜ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೇ ಬಸ್‌ನಲ್ಲಿ ವೆಂಕಟೇಶ್ ಸಹ ಪ್ರಯಾಣ ಬೆಳೆಸಿದ್ದ. ಬಾಲಕಿ ಕುಳಿತಿದ್ದ ಸೀಟ್ನ ಪಕ್ಕದಲ್ಲೇ ಆರೋಪಿ ಸಹ ಕುಳಿತು  ಲೈಂಕಿಗವಾಗಿ ಮುಟ್ಟಿ ದೌರ್ಜನ್ಯ ವೆಸಗಿದ್ದ.

 ಮಂಡ್ಯ:  ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ಮಂಡ್ಯ ಅಧಿಕ ಸೆಷೆನ್ಸ್‌ ಮತ್ತು 2ನೇ ತ್ವರಿತಗತಿ ವಿಶೇಷ ನ್ಯಾಯಾಲಯ 21 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತಮಿಳುನಾಡು ಮೂಲದ ಬೆಂಗಳೂರಿನ ಪೀಣ್ಯ 2ನೇ ಹಂತದ ಚೇತನ್ ಸರ್ಕಲ್ ಬಳಿಯ ಸ್ವಾತಿ ಬಾರ್ ಪಕ್ಕದ ನಿವಾಸಿ ಅಣ್ಣಾಮಲೈ ಪುತ್ರ ವೆಂಕಟೇಶ್ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿ.

2020ರಲ್ಲಿ 14 ವರ್ಷದ ಅಪ್ರಾಪ್ತೆ ಕೆ.ಆರ್.ಪೇಟೆ ತಾಲೂಕು ಕೊಡಗಹಳ್ಳಿಗೆ ಹೋಗಲು ಬೆಂಗಳೂರಿನ ಗೋವರ್ಧನ ಬಸ್ ನಿಲ್ದಾಣದಿಂದ ರಾಜ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೇ ಬಸ್‌ನಲ್ಲಿ ವೆಂಕಟೇಶ್ ಸಹ ಪ್ರಯಾಣ ಬೆಳೆಸಿದ್ದ. ಬಾಲಕಿ ಕುಳಿತಿದ್ದ ಸೀಟನ ಪಕ್ಕದಲ್ಲೇ ಆರೋಪಿ ಸಹ ಕುಳಿತು ಬಾಲಕಿಯನ್ನು ಮಾತನಾಡಿಸಿ ಲೈಂಕಿಗವಾಗಿ ಮುಟ್ಟಿ ದೌರ್ಜನ್ಯ ವೆಸಗಿದ್ದ. ಅದೇ ದಿನ ಮಧ್ಯಾಹ್ನದ ವೇಳೆ ಪ್ರಕರಣದ ಸಾಕ್ಷಿದಾರರ ಜೊತೆ ಸಾರಿಗೆ ಬಸ್ಸಿನಲ್ಲಿ ನಾಗಮಂಗಲದಲ್ಲಿ ಇಳಿದುಕೊಂಡು ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಹೋಗಿ ನಂತರ ರೈಲಿನಲ್ಲಿ ತಮಿಳುನಾಡು ರಾಜ್ಯದ ಕೊಯಮತ್ತೂರು ಹತ್ತಿರ ಇರುವ ಪುದುಪುದೂರಿಗೆ ಕರೆದೊಯ್ದಿದಿದ್ದಾನೆ.

ಅಲ್ಲಿನ ಧನಲಕ್ಷ್ಮಿ ನಗರದಲ್ಲಿ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಅಪ್ರಾಪ್ತ ಬಾಲಕಿ ಕುತ್ತಿಗೆಗೆ ಹಸಿಶಿನ ಕೊನೆ ದಾರವನ್ನು ಕಟ್ಟಿ ಮದುವೆ ಮಾಡಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಘಟನೆ ಬೆಳಕಿಗೆ ಬಂತ ನಂತರ ನಾಗಮಂಗಲ ಪಟ್ಟಣ ಠಾಣೆ ಪೊಲೀಸರು ಫೋಕ್ಸೋ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎನ್.ಸುಧಾಕರ್ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಅಧಿಕ ಸೆಷನ್ಸ್‌ ಮತ್ತು 2ನೇ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ನಾಗಜ್ಯೋತಿ ಕೆ.ಎ.ಅವರು ಆರೋಪಿ ವೆಂಕಟೇಶನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಫೋಕ್ಸೋ ಕಾಯ್ದೆಯಡಿ 21 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರು.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 3 ತಿಂಗಳ ಸಾಧಾ ಶಿಕ್ಷೆ ವಿಧಿಸಿದ್ದಾರೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ 1 ವರ್ಷ ಕಠಿಣ ಸಜೆ 50 ಸಾವಿರ ದಂಡ ಫೋಕ್ಸೋ ಕಾಯ್ದೆಯ ಕಲಂ 6ರಡಿಯಲ್ಲಿ ಅಪರಾಧಕ್ಕೆ 50 ಸಾವಿರ ದಂಡ ದಂಡ ಪಾವತಿಸಲು ತಪ್ಪಿದಲ್ಲಿ 5 ವರ್ಷ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗೇಶ್ ವಾದ ಮಂಡಿಸಿದ್ದರು.