ಸಾರಾಂಶ
ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 6 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಈ ಆರು ನಕ್ಸಲರ ಸುಳಿವಿಗೆ 38 ಲಕ್ಷ ಬಹಮಾನ ಘೋಷಿಸಲಾಗಿತ್ತು.
ಜಗದಾಳ್‌ಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 6 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಈ ಆರು ನಕ್ಸಲರ ಸುಳಿವಿಗೆ 38 ಲಕ್ಷ ಬಹಮಾನ ಘೋಷಿಸಲಾಗಿತ್ತು. ಪೂರ್ವ ಬಸ್ತಾರ್ ವಿಭಾಗದಲ್ಲಿ ನಕ್ಸಲರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ನಾರಾಯಣಪುರ, ಕೊಂಡಗಾಂವ್, ದಾಂತೇವಾಡ ಮತ್ತು ಬಸ್ತಾರ್ ಜಿಲ್ಲೆಗಳ ಗಡಿಗಳಲ್ಲಿ ಪ್ರತ್ಯೇಕ ತಂಡಗಳಂತೆ ಕಾರ್ಯಾಚರಣೆ ಕೈಗೊಂಡಿದ್ದರು.
ಓರ್ಚಾ ಪೊಲೀಸ್ ಠಾಣಾ ವ್ಯಾಪ್ತಿಯ ಗೋಬೆಲ್ ಮತ್ತು ತುಳುತುಲಿ ಗ್ರಾಮಗಳ ಬಳಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು ಆರು ಮಂದಿ ಹತರಾಗಿದ್ದಾರೆ. ಈ ವರ್ಷದಲ್ಲಿ 71 ಎನ್‌ಕೌಂಟರ್‌ಗಳಲ್ಲಿ 123 ನಕ್ಸಲೀಯರು ಹತರಾಗಿದ್ದಾರೆ. 339 ನಕ್ಸಲೀಯರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಸಿದ್ದಾರೆ.