ಸಾರಾಂಶ
ಬೋಲ್ಡ್ ಫೋಟೋಶೂಟ್‌ನಲ್ಲಿ ಮಿಂಚಿದ ಅವನೇ ಶ್ರೀಮನ್ನಾರಾಯಣ ಬೆಡಗಿ
ಸಿನಿವಾರ್ತೆ
ಶಾನ್ವಿ ಶ್ರೀವಾಸ್ತವ್ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಬೋಲ್ಡ್ ಲುಕ್‌ನ ಫೋಟೋ ಶೇರ್ ಮಾಡುತ್ತಿರುತ್ತಾರೆ.
ಈ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರ ಮೇಲೆ ಅವರಿಗೆ ಕೆಂಡದಂಥಾ ಕೋಪ. ಇದೀಗ ಕಡುಗಪ್ಪು ಬಣ್ಣದಲ್ಲಿ ತನ್ನ ಬಿಳಿ ಮೈ ಸೌಂದರ್ಯ ಎದ್ದು ಕಾಣುವಂತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ‘ಇವಳಿಗೆ ಹೆಲೋ ಹೇಳಿ’ ಅನ್ನೋ ಬೋಲ್ಡ್ ಸ್ಟೇಟ್‌ಮೆಂಟ್ ಅನ್ನೂ ನೀಡಿದ್ದಾರೆ.
ಕಳೆದ ವರ್ಷ ಹೊಸಬರ ‘ಬ್ಯಾಂಗ್’ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್ ಆಗಿ ಮಿಂಚಿದ ಮೇಲೆ, ಕನ್ನಡಿಗರಿಗೆ ಈಕೆಯನ್ನು ತೆರೆ ಮೇಲೆ ಕಣ್ತುಂಬಿಸಿಕೊಳ್ಳುವ ಅವಕಾಶ ಲಭಿಸಿಲ್ಲ.