ಅಧ್ಯಾಯ ಚಿತ್ರಕ್ಕೆ ಮುಹೂರ್ತ

| Published : May 05 2024, 02:00 AM IST / Updated: May 05 2024, 05:41 AM IST

ಸಾರಾಂಶ

ಹೊಸಬರ ಅಧ್ಯಾಯ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು.

  ಸಿನಿವಾರ್ತೆ

ಸಮರ್ಥ್‌ ಎಂ ನಿರ್ದೇಶನದ ‘ಅಧ್ಯಾಯ’ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿದೆ. ಶಾಂತ ಜಯರಾಂ ನಿರ್ಮಾಣದ ಈ ಚಿತ್ರದಲ್ಲಿ ಚೈತನ್ಯ ಬಂಜಾರ ನಾಯಕನಾಗಿ ನಟಿಸುತ್ತಿದ್ದಾರೆ.

 ಕನ್ನಡ ಹಾಗೂ ಬಂಜಾರ ಭಾಷೆಗಳಲ್ಲಿ ಮೂಡಿ ಬರಲಿರುವ ಈ ಸಿನಿಮಾ ಶಿಕ್ಷಣದಿಂದ ದೂರವೇ ಉಳಿದಿದ್ದ ಒಂದು ಬುಡಕಟ್ಟು ಜನಾಂಗದ ಮಕ್ಕಳು ವಿದ್ಯಾವಂತರಾದ ಮೇಲೆ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕತೆ.