ನೂರು ದಿನಗಳ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಟೇರ ಚಿತ್ರ ತಂಡದಿಂದ ಇಬ್ಬರು ಬರಹಗಾರರು ಹಾಗೂ ಒಬ್ಬ ಕಲಾವಿದನಿಗೆ ಸ್ವಿಫ್ಟ್‌ ಕಾರು ಉಡುಗೊರೆ.

ಸಿನಿವಾರ್ತೆ

ಯಶಸ್ವಿ ನೂರು ದಿನಗಳ ಪ್ರದರ್ಶನ ಕಂಡ ‘ಕಾಟೇರ’ ಸಿನಿಮಾದ ಯಶಸ್ಸಿನ ಹಿನ್ನೆಲೆಯಲ್ಲಿ ‘ಕಾಟೇರ’ ಚಿತ್ರದ ಕಥೆಗಾರ ಜಡೇಶ್‌ ಹಂಪಿ, ಸಂಭಾಷಣೆ ಬರೆದ ಮಾಸ್ತಿ ಮತ್ತು ಕಲಾವಿದ ಸೂರಜ್‌ ಅವರಿಗೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮಾರುತಿ ಸ್ವಿಫ್ಟ್‌ ಕಾರನ್ನು ಉಡುಗೊರೆ ನೀಡಿದ್ದಾರೆ. ಈ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ.

ದರ್ಶನ್‌ ಕಾರ್‌ ಸ್ಟಾರ್ಟ್‌ ಮಾಡಿ ಮೂವರಿಗೂ ಶುಭ ಕೋರಿದ್ದಾರೆ. ಈ ವೇಳೆ ಅವರು, ‘ನಾವು ಯಾವತ್ತೂ ಗೆದ್ದ ಎತ್ತಿನ ಬಾಲ ಹಿಡಿಯಬಾರದು. ಕಾಟೇರದ ಕಥೆಯನ್ನೂ ಎಳೆಯಬಾರದು. ನಾನು ಸೀಕ್ವೆಲ್​ ಮಾಡುವುದಿಲ್ಲ. ಕಾಟೇರ ಅಲ್ಲಿಗೆ ಮುಗಿಯಿತು’ ಎಂದು ಹೇಳಿದ್ದಾರೆ.