ಕಳೆದ ಕೆಲವು ಸಮಯದಿಂದ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾದ ಸ್ಟಾರ್‌ ನಟ ಧನುಷ್‌ ಹಾಗೂ ಬಹುಭಾಷಾ ನಟಿ ಮೃಣಾಲ್‌ ಠಾಕೂರ್‌ ಜೋಡಿ ಫೆ.14ರ ಪ್ರೇಮಿಗಳ ದಿನದಂದು ಸಪ್ತಪದಿ ತುಳಿಯಲಿದೆ ಎನ್ನಲಾಗುತ್ತಿದೆ.

ಸಿನಿವಾರ್ತೆ

ಕಳೆದ ಕೆಲವು ಸಮಯದಿಂದ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾದ ಸ್ಟಾರ್‌ ನಟ ಧನುಷ್‌ ಹಾಗೂ ಬಹುಭಾಷಾ ನಟಿ ಮೃಣಾಲ್‌ ಠಾಕೂರ್‌ ಜೋಡಿ ಫೆ.14ರ ಪ್ರೇಮಿಗಳ ದಿನದಂದು ಸಪ್ತಪದಿ ತುಳಿಯಲಿದೆ ಎನ್ನಲಾಗುತ್ತಿದೆ.

ಸೆಲೆಬ್ರಿಟಿ ಪಾರ್ಟಿಗಳಲ್ಲಿ ಜೊತೆಯಾಗಿ ಆಪ್ತವಾಗಿ ಕಾಣಿಸಿಕೊಳ್ಳುತ್ತಿದ್ದರು

ಧನುಷ್‌ ಹಾಗೂ ಮೃಣಾಲ್‌ ಠಾಕೂರ್‌ ಈ ಹಿಂದೆ ಸೆಲೆಬ್ರಿಟಿ ಪಾರ್ಟಿಗಳಲ್ಲಿ ಜೊತೆಯಾಗಿ ಆಪ್ತವಾಗಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಆ ಸಂಬಂಧಕ್ಕೆ ಅಧಿಕೃತ ಮುದ್ರೆ ಬೀಳಲಿದೆ ಎನ್ನಲಾಗಿದೆ. ಧನುಷ್‌ಗೆ ಈ ಹಿಂದೆ ಅವರು ರಜನಿಕಾಂತ್‌ ಪುತ್ರಿ ಐಶ್ವರ್ಯಾ ಜೊತೆ ವಿವಾಹವಾಗಿದ್ದು, ವಿಚ್ಛೇದನ ಪಡೆದಿದ್ದಾರೆ. ಇವರಿಗೆ ಇಬ್ಬರು ಪುತ್ರರಿದ್ದಾರೆ.

ಧನುಷ್‌ಗೆ 42 ವರ್ಷ - ಮೃಣಾಲ್‌ 33ರ ಹರೆಯ

ಧನುಷ್‌ಗೆ 42 ವರ್ಷ ವಯಸ್ಸಾಗಿದ್ದು, ಮೃಣಾಲ್‌ 33ರ ಹರೆಯದಲ್ಲಿದ್ದಾರೆ. ಇವರಿಬ್ಬರ ನಡುವಿನ ವಯಸ್ಸಿನ ಅಂತರವೂ ಚರ್ಚೆಯಾಗುತ್ತಿದೆ.