ಸಾರಾಂಶ
ಕೌಮುದಿ ಸಿನಿಮಾದಲ್ಲಿ ಅಕ್ಷತಾ ಪಾಂಡವಪುರ ಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
‘ಕಂದೀಲು’ ನಿರ್ದೇಶಕಿ ಯಶೋದಾ ಪ್ರಕಾಶ್ ನಿರ್ದೇಶನ, ನಿರ್ಮಾಣದ ಹೊಸ ಸಿನಿಮಾ ‘ಕೌಮುದಿ’. ಇದರಲ್ಲಿ ನಟಿ ಅಕ್ಷತಾ ಪಾಂಡವಪುರ ಗರ್ಭಿಣಿ ಹಾಗೂ ಬಾಣಂತಿ ಚಿತ್ತವ್ವನ ಪಾತ್ರದಲ್ಲಿ ನಟಿಸಿದ್ದಾರೆ.
ಈ ಪಾತ್ರದ ಲುಕ್ ಬಿಡುಗಡೆಯಾಗಿದೆ.ಇಂದಿಗೂ ಗ್ರಾಮೀಣ ಭಾಗದಲ್ಲಿ ಜೀವಂತವಿರುವ ಬಾಣಂತಿಯನ್ನು ಊರಾಚಿನ ಗುಡಿಸಲಲ್ಲಿ ಬಿಡುವ ಅಮಾನವೀಯ ಸಂಪ್ರದಾಯದ ಬಗ್ಗೆ ಈ ಸಿನಿಮಾವಿದೆ.
ಸಿನಿಮಾ ಬಗ್ಗೆ ಮಾತನಾಡಿದ ಅಕ್ಷತಾ ಪಾಂಡವಪುರ, ‘ಇನ್ನೂ ಈ ಆಚರಣೆ ಜೀವಂತವಿರುವ ಕೆಲವು ಹಳ್ಳಿಗಳಿಗೆ ಭೇಟಿ ನೀಡಿ ಅವರ ಕಥೆ ಕೇಳಿದ್ದೆ. ಯಾವ ಪೂರ್ವಾಗ್ರಹಗಳೂ ಇಲ್ಲದೇ ನೈಜವಾಗಿ ಈ ಪಾತ್ರ ರೂಪಿಸಲಾಗಿದೆ.
ಈ ಪಾತ್ರಕ್ಕಾಗಿ 24 ಗಂಟೆ ನಿದ್ದೆ ಬಿಟ್ಟು ನಟಿಸಿದ್ದೂ ಇತ್ತು. ಚೆನ್ನಾಗಿಲ್ಲದಿರುವ ಪಾತ್ರಗಳಲ್ಲಿ ನಾನು ನಟಿಸೋದೇ ಇಲ್ಲ. ಈ ಪಾತ್ರದಲ್ಲಿ ಚಿತ್ತವ್ವನ ಮನಸ್ಥಿತಿಯನ್ನು ಹಿಡಿದಿಡುವುದು ಸವಾಲಾಗಿತ್ತು’ ಎಂದಿದ್ದಾರೆ.ಸದ್ಯ ಈ ಸಿನಿಮಾದ ಶೂಟಿಂಗ್ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.