ಅಪ್ಪು ಕಪ್ ಹೆಸರಿನಲ್ಲಿ ಜುಲೈ ತಿಂಗಳಲ್ಲಿ ಬ್ಯಾಡ್ಮಿಂಟನ್ ಟೂರ್ನಿ ಶುರುವಾಗಲಿದೆ.

 ಸಿನಿವಾರ್ತೆ

ಅಪ್ಪು ಕಪ್‌ ಸೀಸನ್‌ 2ನ ಟೀಮ್ ಬಿಲ್ಡಿಂಗ್ ಕಾರ್ಯಕ್ರಮವನ್ನು ಅಶ್ವಿನಿ ಪುನೀತ್‌ರಾಜ್‌ಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್‌, ಸಾಯಿಗೋಲ್ಡ್‌ ಪ್ಯಾಲೇಸ್‌ನ ಟಿ.ಎ. ಶರವಣ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ಉದ್ಘಾಟಿಸಿದರು.

ಚೇತನ್ ಸೂರ್ಯ ನಡೆಸುವ ಈ ಕ್ರಿಕೆಟ್ ಕ್ರೀಡಾಕೂಟ ಆಯೋಜನೆಗೆ ಪಿಆರ್‌ಕೆ ಆಡಿಯೋ ಸಂಸ್ಥೆ ಕೂಡ ಕೈ ಜೋಡಿಸಿದೆ. 13 ಮಂದಿಯನ್ನು ಒಳಗೊಂಡ 10 ತಂಡಗಳಿರುತ್ತವೆ. ಪ್ರತಿ ತಂಡದಲ್ಲೂ ಹಿರಿತೆರೆ, ಕಿರುತೆರೆ ಹಾಗೂ ವಿವಿಧ ಕ್ಷೇತ್ರಗಳ ತಾರೆಯರು ಆಡಲಿದ್ದಾರೆ. ಜುಲೈ 13ರಂದು ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುವುದು.