ಸಾರಾಂಶ
ಡಿ ಗ್ಯಾಂಗ್ ಹೆಸರಿನಲ್ಲಿ ಸಿನಿಮಾ ಆಗಲಿದ್ದು, ಇದು ದರ್ಶನ್ ಅವರ ಕುರಿತ ಸಿನಿಮಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಸಿನಿವಾರ್ತೆ
‘ಡಿ ಗ್ಯಾಂಗ್’ ಹೆಸರಿನಲ್ಲಿ ಸಿನಿಮಾ ಬರಲಿದೆ.
- ಹೀಗೊಂದು ಸುದ್ದಿ ಕಳೆದ ಎರಡು ದಿನಗಳಿಂದ ಸದ್ದು ಮಾಡುತ್ತಿದೆ. ದರ್ಶನ್ ಕೊಲೆ ಪ್ರಕರಣದ ಬಗ್ಗೆ ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ತೆಲುಗು ಮಾಧ್ಯಮಗಳಲ್ಲಿ ಸುದೀರ್ಘವಾಗಿ ಮಾತನಾಡಿರುವುದು ಇಂಥದ್ದೊಂದು ಸುದ್ದಿಗೆ ಪುಷ್ಠಿ ನೀಡಿದಂತಾಗಿದೆ.
‘ಡಿ ಗ್ಯಾಂಗ್’ ಹೆಸರಿನಲ್ಲಿ ನಟ ದರ್ಶನ್ ಮತ್ತು ಅವರ ಗೆಳೆಯರ ಸುತ್ತಾ ಸಿನಿಮಾ ಮೂಡಿ ಬರಲಿದೆ ಎಂಬುದು ಸದ್ಯ ಗಾಂಧಿನಗರದಿಂದ ಕೇಳಿ ಬರುತ್ತಿರುವ ಸುದ್ದಿ.