ಅಲೈಕ್ಯಾ ಚಿತ್ರದ ಟ್ರೇಲರ್‌ ಬಿಡುಗಡೆ

| Published : Apr 20 2024, 01:06 AM IST / Updated: Apr 20 2024, 10:06 AM IST

ಸಾರಾಂಶ

ಹೊಸಬರ ಅಲೈಕ್ಯಾ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.

 ಸಿನಿವಾರ್ತೆ

ಹಾರರ್‌ ಕತೆಯನ್ನು ಒಳಗೊಂಡ ‘ಅಲೈಕ್ಯಾ’ ಚಿತ್ರದ ಟ್ರೇಲರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು. ಎಂ ಭೂಪತಿ ನಿರ್ಮಿಸಿರುವ ಈ ಚಿತ್ರವನ್ನು ಸಾತ್ವಿಕ್‌ ಎಂ ಭೂಪತಿ ನಿರ್ದೇಶಿಸಿದ್ದಾರೆ. ಟ್ರೇಲರ್‌ ಬಿಡುಗಡೆ ಕಾರ್ಯಕ್ರಮಕ್ಕೆ ಹಿರಿಯ ನಟ ಸುಚೇಂದ್ರ ಪ್ರಸಾದ್ ಹಾಗೂ ನಟಿ ಸಂಜನಾ ನಾಯ್ಡು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ದರ್ಶಿನಿ ಆರ್ ಒಡೆಯರ್, ನಿಸರ್ಗ, ವಿವೇಕ್‌ ಚಕ್ರವರ್ತಿ, ಕಾವ್ಯ ಪ್ರಕಾಶ್, ಜಾಹ್ನವಿ, ವಿ. ನಾರಾಯಣ ಸ್ವಾಮಿ, ಶಿವಕುಮಾರ್ ಚಿತ್ರದಲ್ಲಿ ನಟಿಸಿದ್ದಾರೆ. ಸ್ನೇಹಿತರು ಜತೆಗೂಡಿ ವೀಕೆಂಡ್‌ನಲ್ಲಿ ಜಾಲಿ ಟ್ರಿಪ್‌ ಹೊರಡುತ್ತಾರೆ. ಗೆಸ್ಟ್‌ಹೌಸ್‌ವೊಂದಕ್ಕೆ ಹೋದಾಗ ಅಲ್ಲಿ ನಡೆಯುವ ಘಟನೆಗಳೇ ಚಿತ್ರದ ಕತೆ. ಸಾಯಿ ಸೋಮೇಶ್‌ ಸಂಗೀತ, ಬುಗುಡೆ ವೀರೇಶ್ ಛಾಯಾಗ್ರಹಣ ಚಿತ್ರಕ್ಕಿದೆ.