ರಿಷಬ್‌ ಶೆಟ್ಟಿ ಅವರು ಅಮಿತಾಬ್‌ ಬಚ್ಚನ್‌ ಸಾರಥ್ಯದ ‘ಕೌನ್‌ ಬನೇಗಾ ಕರೋಡ್‌ಪತಿ’ಯಲ್ಲಿ ವಿಶೇಷ ಆಹ್ವಾನದ ಮೇರೆಗೆ ಭಾಗವಹಿಸಿದ್ದಾರೆ.

 ಸಿನಿವಾರ್ತೆ : ರಿಷಬ್‌ ಶೆಟ್ಟಿ ಅವರು ಅಮಿತಾಬ್‌ ಬಚ್ಚನ್‌ ಸಾರಥ್ಯದ ‘ಕೌನ್‌ ಬನೇಗಾ ಕರೋಡ್‌ಪತಿ’ಯಲ್ಲಿ ವಿಶೇಷ ಆಹ್ವಾನದ ಮೇರೆಗೆ ಭಾಗವಹಿಸಿದ್ದಾರೆ. ಎಂದಿನಂತೆ ತನ್ನ ಲುಂಗಿ ಲುಕ್‌ನಲ್ಲಿ ಶೋಗೆ ಎಂಟ್ರಿಕೊಟ್ಟ ರಿಷಬ್‌ ಅವರ ಲುಂಗಿ ಉಡುವ ಕಲೆಯನ್ನು ಅಮಿತಾಬ್‌ ಬಚ್ಚನ್‌ ಮೆಚ್ಚಿಕೊಂಡಿದ್ದಾರೆ.

ಈ ವೇಳೆ ರಿಷಬ್‌ ಅವರು ಅಮಿತಾಬ್‌ ಅವರಿಗೆ ವಿಶೇಷ ಉಡುಗೊರೆಯನ್ನೂ ನೀಡಿದ್ದಾರೆ. ಅಮಿತಾಬ್‌, ‘ರಿಷಬ್‌ ಅವರೇ ನೀವು ಉಟ್ಟಿರುವಂಥಾ ಲುಂಗಿಯನ್ನು ನಾನು ಧರಿಸುವುದಕ್ಕೂ ಮುನ್ನ ಅದನ್ನು ಉಡುವುದನ್ನು ಕಲಿಯಬೇಕು. ಇಲ್ಲದೇ ಹೋದರೆ ಇಲ್ಲೇ ಏನಾದರೂ ಕಳಚಿ ಹೋದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ’ ಎಂದು ತಮಾಷೆ ಮಾಡಿದ್ದಾರೆ.

‘ಕೌನ್‌ ಬನೇಗಾ ಕರೋಡ್‌ಪತಿ’ ಸೀಸನ್‌ 17ರ ಈ ಸ್ಪೆಷಲ್‌ ವಿಶೇಷ ಕಾರ್ಯಕ್ರಮ ಶುಕ್ರವಾರ ರಾತ್ರಿ 9ಗಂಟೆಗೆ ಸೋನಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.