ಹೊಸವರ ಸಾರಥ್ಯದಲ್ಲಿ ಅಪ್ಪಾಜಿ ಹೆಸರಿನ ಚಿತ್ರಕ್ಕೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು

 ಸಿನಿವಾರ್ತೆ

‘ಅಪ್ಪಾಜಿ’ ಚಿತ್ರಕ್ಕೆ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳ ಗದ್ದಿಗೆ ಸನ್ನಿಧಿಯಲ್ಲಿ ಮುಹೂರ್ತ ನೆರವೇರಿದೆ. ನಟ ಪ್ರಥಮ್‌ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರೆ, ಹಿರಿಯ ನಟ ಸ್ವಸ್ತಿಕ್‌ ಶಂಕರ್‌ ಶುಭ ಹರಸಿದರು.

ಈ ಚಿತ್ರದ ಕುರಿತು ನಿರ್ದೇಶಕ ಓಂಪ್ರತಾಪ್‌ ಹೆಚ್‌.ಶಿವಮೊಗ್ಗ, ‘ನಾನು ಡಾ ವಿಷ್ಣುರ್ಧನ್‌ ಅಭಿಮಾನಿ. ಹೀಗಾಗಿ ಅವರ ನಟನೆಯ ಚಿತ್ರದ ಹೆಸರು ಇಟ್ಟುಕೊಂಡಿದ್ದೇನೆ. ಅಪ್ಪ ತನ್ನ ಮಕ್ಕಳ ಮೇಲೆ ತೋರಿಸುವ ಪ್ರೀತಿ, ಆತನ ಜವಾಬ್ದಾರಿ, ತನಗಾದ ನೋವು, ಅನ್ಯಾಯಗಳನ್ನು ಹೇಗೆ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಭಾವನಾತ್ಮಕವಾಗಿ ಹೇಳುವ ಸಿನಿಮಾ ಇದು’ ಎಂದರು.

ಶ್ರೀವೆಂಕಿ, ಪೂಜಾರಾಮ್‌ ಚಿತ್ರದ ಜೋಡಿ. ಭವ್ಯ, ನಾಗೇಂದ್ರ ಅರಸ್‌, ಮಹೇಶ್‌ ಸಿದ್ದು, ಜಗದೀಶ್‌ ಕೊಪ್ಪ, ಅಭಿಷೇಕ್‌, ಕರ್ಣ, ಯಶಸ್‌, ಪಲ್ಟಿಗೋವಿಂದ, ಶಿವಮೊಗ್ಗ ರಾಮಣ್ಣ ನಟಿಸುತ್ತಿದ್ದಾರೆ.