ಮೇ 26ಕ್ಕೆ ಹೊಸಬರ ಇತ್ಯಾದಿ ಹೆಸರಿನ ಚಿತ್ರ ತೆರೆಗೆ ಬರಲಿದೆ.

ಸಿನಿವಾರ್ತೆ

‘ಇತ್ಯಾದಿ’ ಸಿನಿಮಾ ಏಪ್ರಿಲ್‌ 26ಕ್ಕೆ ಬಿಡುಗಡೆ ಆಗುತ್ತಿದೆ. ಈ ಚಿತ್ರವನ್ನು ಡಿ ಯೋಗರಾಜ್‌ ನಿರ್ದೇಶಿಸಿದ್ದಾರೆ. ಮಹೇಂದ್ರನ್‌, ಚಿತ್ರವನ್ನು ನಿರ್ಮಿಸಿದ್ದಾರೆ.

ಈ ಸಿನಿಮಾ ಕುರಿತು ನಿರ್ದೇಶಕ ಡಿ ಯೋಗರಾಜ್‌, ‘ಇದು ಸಂಪೂರ್ಣವಾಗಿ ಮಲೆನಾಡಿನ ಭಾಗದಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾ. ಚಿತ್ರದ ಹೆಸರಿನಲ್ಲೇ ಪಾತ್ರಧಾರಿಗಳ ಹೆಸರು ಇದೆ. ಇತಿ ಮತ್ತು ಆದಿ. ಈ ಇಬ್ಬರ ಕತೆಯನ್ನು ಸಿನಿಮಾ ಒಳಗೊಂಡಿದೆ. ಹೀಗಾಗಿ ಚಿತ್ರಕ್ಕೆ ಇತ್ಯಾದಿ ಎನ್ನುವ ಹೆಸರು ಇಟ್ಟಿದ್ದೇವೆ. 

ಆ್ಯಕ್ಷನ್‌, ಥ್ರಿಲ್ಲರ್‌, ತನಿಖೆಯ ಜಾಡಿನಲ್ಲಿ ಸಾಗುವ ಸಿನಿಮಾ ಇದು’ ಎಂದರು. ಪೊಲೀಸ್‌ ಪಾತ್ರ ಮಾಡಿರುವ ಮಹೇಶ್‌, ಸಚಿನ್‌, ಮಂಜುಳಾ ವೆಂಕಟೇಶ್‌, ನಿರ್ಮಾಪಕ ಮಹೇಂದ್ರನ್‌ ಇದ್ದರು. ಅರ್ಚನ ಉದಯಕುಮಾರ್, ಸೌಮ್ಯಾ ತಾರಾಬಳಗದಲ್ಲಿದ್ದಾರೆ.