ಬ್ಯಾಚುಲರ್ ಪಾರ್ಟಿ ಟ್ರೇಲರ್‌ಗೆ ಭಾರಿ ಮೆಚ್ಚುಗೆ

| Published : Jan 20 2024, 02:02 AM IST

ಬ್ಯಾಚುಲರ್ ಪಾರ್ಟಿ ಟ್ರೇಲರ್‌ಗೆ ಭಾರಿ ಮೆಚ್ಚುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಚುಲರ್ ಪಾರ್ಟಿ ಸಿನಿಮಾದ ಟ್ರೇಲರ್ ಬಿಡುಗಡೆ

‘ನಮ್ಮ ಕಿರಿಕ್‌ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರಗಳ ಪಂಚಿಂಗ್ ಡೈಲಾಗ್ ಕೇಳಿ ನೀವೆಲ್ಲ ನಕ್ಕಿರಬಹುದು. ಅದು ಅಭಿಜಿತ್ ಮಹೇಶ್‌ ಅವರ ಕೊಡುಗೆ. ಈ ಅದ್ಭುತ ಪ್ರತಿಭೆಗೆ ಹಿಂದಿನಿಂದಲೂ ನಿರ್ದೇಶನ ಮಾಡಲು ಹೇಳುತ್ತಿದ್ದೆ. ಈಗ ಕಾಲ ಕೂಡಿಬಂದಿದೆ’ ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ.ತಾನು ನಿರ್ಮಿಸಿರುವ ‘ಬ್ಯಾಚುಲರ್‌ ಪಾರ್ಟಿ’ ಚಿತ್ರದ ಟ್ರೇಲರ್‌ ಬಿಡುಗಡೆಯಲ್ಲಿ ರಕ್ಷಿತ್‌ ಮಾತನಾಡುತ್ತಿದ್ದರು. ದಿಗಂತ್‌, ಯೋಗಿ, ಅಚ್ಯುತ ನಟನೆ, ಅಭಿಜಿತ್ ಮಹೇಶ್ ನಿರ್ದೇಶನದ ಈ ಸಿನಿಮಾ ಜನವರಿ 26ಕ್ಕೆ ತೆರೆಗೆ ಬರಲಿದೆ. ಪರಂವಃ ಸ್ಟುಡಿಯೋಸ್‌ ಯೂಟ್ಯೂಬ್‌ನಲ್ಲಿ ಈ ಸಿನಿಮಾದ ಟ್ರೇಲರ್‌ ನೋಡಬಹುದು. ನಿರ್ದೇಶಕ ಅಭಿಜಿತ್ ಮಹೇಶ್, ‘ಲಾಕ್‌ಡೌನ್ ಸಮಯದಲ್ಲಿ ಈ ಸಿನಿಮಾದ ಕಥೆ ಹುಟ್ಟಿದ್ದು. ಇದೊಂದು ಪಕ್ಕಾ ಕಾಮಿಡಿ ಎಂಟರ್ ಟೈನರ್ ಸಿನಿಮಾ’ ಎಂದರು.

ಲೂಸ್ ಮಾದ ಯೋಗಿ, ‘ನನ್ನ ಪಾತ್ರ ರಿಷಭ್ ಶೆಟ್ಟಿ ಅವರು ಮಾಡಬೇಕಿತ್ತು. ಅವರು ಕಾಂತಾರದಲ್ಲಿ ಬ್ಯುಸಿಯಾದ ಕಾರಣ ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ. ನಾನು ಹಾಗೂ ದಿಗಂತ್ ಹದಿನೈದು ವರ್ಷಗಳ ಸ್ನೇಹಿತರು. ಆದರೆ ಒಂದು ಚಿತ್ರದಲ್ಲೂ ಒಟ್ಟಿಗೆ ನಟಿಸಿರಲಿಲ್ಲ. ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿರುವುದು ಖುಷಿಯಾಗಿದೆ’ ಎಂದರು.ದಿಗಂತ್ ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಟ ಅಚ್ಯುತ ಕುಮಾರ್ ಶೂಟಿಂಗ್‌ ಅನುಭವ ಹಂಚಿಕೊಂಡರು. ಸಂಗೀತ ನಿರ್ದೇಶಕ ಅರ್ಜುನ್ ರಾಮ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಕಾಸ್ಟ್ಯೂಮ್ ಡಿಸೈನರ್ ಅರುಂಧತಿ ಹಾಗೂ ಪರಂವಃ ಸಂಸ್ಥೆಯ ಸಿಇಓ ಶ್ರೀನಿ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.