ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ಟ್ರೇಲರ್‌ ಬಿಡುಗಡೆ

| Published : Jan 20 2024, 02:02 AM IST / Updated: Jan 20 2024, 09:43 AM IST

ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ಟ್ರೇಲರ್‌ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಣ್ಣ ಹಾಗೂ ಮಲೈಕಾ ವಸುಪಾಲ್‌ ನಟನೆಯ ಉಪಾಧ್ಯಕ್ಷ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಶಿವರಾಜ್‌ ಕುಮಾರ್‌

ಹಾಸ್ಯ ಕಲಾವಿದ ಚಿಕ್ಕಣ್ಣ, ‘ಹಿಟ್ಲರ್‌ ಕಲ್ಯಾಣ’ ಧಾರಾವಾಹಿ ನಾಯಕಿ ಮಲೈಕಾ ವಸುಪಾಲ್‌ ನಾಯಕ, ನಾಯಕಿಯಾಗಿರುವ ‘ಉಪಾಧ್ಯಕ್ಷ’ ಸಿನಿಮಾದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.

ಶಿವರಾಜ್‌ ಕುಮಾರ್‌ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಜೊತೆಗೆ ಚಿಕ್ಕಣ್ಣ ಅವರ ಡ್ಯಾನ್ಸ್, ನಟನೆಯನ್ನು ಕೊಂಡಾಡಿದರು. ನಾಯಕ ಚಿಕ್ಕಣ್ಣ, ‘ಈವರೆಗೂ ಸುಮಾರು 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. 

ಇದಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದೇನೆ. ಅಧ್ಯಕ್ಷ ಚಿತ್ರದ ಸೀಕ್ವೆಲ್ ಆಗಿರುವ ಈ ಚಿತ್ರ ಜನರ ಮನಗೆಲ್ಲುವ ವಿಶ್ವಾಸವಿದೆ’ ಎಂದರು. ನಿರ್ದೇಶಕ ಅನಿಲ್‌ ಕುಮಾರ್‌, ‘ಅಧ್ಯಕ್ಷ ಚಿತ್ರದ ಕಥೆ ಎಲ್ಲಿಗೆ ನಿಂತಿತ್ತೊ ಉಪಾಧ್ಯಕ್ಷ ಸಿನಿಮಾದ ಕಥೆ ಅಲ್ಲಿಂದ ಆರಂಭವಾಗುತ್ತದೆ. 

ಇದೊಂದು ಪಕ್ಕಾ ಮನೋರಂಜನಾ ಚಿತ್ರ. ಲಾಕ್ ಡೌನ್ ಸಮಯದಲ್ಲಿ ಸ್ನೇಹಿತರೆಲ್ಲ ಚರ್ಚಿಸಿ ಸಿದ್ಧಪಡಿಸಿದ ಚಿತ್ರ’ ಎಂದು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ಉಮಾಪತಿ ಶ್ರೀನಿವಾಸ್ ಗೌಡ ಈ ಸಿನಿಮಾ ನಿರ್ಮಿಸಿದ್ದಾರೆ. ನಾಯಕಿ ಮಲೈಕಾ ವಸುಪಾಲ್‌, ನಟ ರವಿಶಂಕರ್ ಸೇರಿದಂತೆ ಚಿತ್ರತಂಡದವರು ಹಾಜರಿದ್ದರು.